ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಆ ಪ್ರದೇಶ ಉಗ್ರರಿಗೆ ಸುರಕ್ಷಿತ ತಾಣವಾಗುತ್ತದೆ: ಬಿಜೆಪಿ

ತನ್ನ ಸ್ವಾರ್ಥ ರಾಜಕೀಯ ಉದ್ದೇಶಗಳನ್ನು ಸಾಧಿಸಲು ದೇಶದ ಭದ್ರತೆಯ ವಿಷಯದಲ್ಲಿ ರಾಜೀಯಾಗುವ, ವಿಶ್ವದ ಏಕೈಕ ರಾಜಕೀಯ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲೆಲ್ಲಾ ಆ ಪ್ರದೇಶ ಉಗ್ರರಿಗೆ ಸುರಕ್ಷಿತ ತಾಣವಾಗುತ್ತದೆ. ಸಕಲರಿಗೂ ನೆಮ್ಮದಿಯ ತಾಣವಾಗಿದ್ದ ಬೆಂಗಳೂರು ಈಗ ಭಯೋತ್ಪಾದಕರ ಬೀಡಾಗುತ್ತಿದೆ ಎಂದು ಬಿಜೆಪಿ ಭಾನುವಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತನ್ನ ಸ್ವಾರ್ಥ ರಾಜಕೀಯ ಉದ್ದೇಶಗಳನ್ನು ಸಾಧಿಸಲು ದೇಶದ ಭದ್ರತೆಯ ವಿಷಯದಲ್ಲಿ ರಾಜೀಯಾಗುವ, ವಿಶ್ವದ ಏಕೈಕ ರಾಜಕೀಯ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲೆಲ್ಲಾ ಆ ಪ್ರದೇಶ ಉಗ್ರರಿಗೆ ಸುರಕ್ಷಿತ ತಾಣವಾಗುತ್ತದೆ. ಸಕಲರಿಗೂ ನೆಮ್ಮದಿಯ ತಾಣವಾಗಿದ್ದ ಬೆಂಗಳೂರು ಈಗ ಭಯೋತ್ಪಾದಕರ ಬೀಡಾಗುತ್ತಿದೆ ಎಂದು ಬಿಜೆಪಿ ಭಾನುವಾರ ಹೇಳಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ತನ್ನ ಸ್ವಾರ್ಥ ರಾಜಕೀಯ ಉದ್ದೇಶಗಳನ್ನು ಸಾಧಿಸಲು ದೇಶದ ಭದ್ರತೆಯ ವಿಷಯದಲ್ಲಿ ರಾಜೀಯಾಗುವ, ವಿಶ್ವದ ಏಕೈಕ ರಾಜಕೀಯ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲೆಲ್ಲಾ ಆ ಪ್ರದೇಶ ಉಗ್ರರಿಗೆ ಸುರಕ್ಷಿತ ತಾಣವಾಗುತ್ತದೆ. ಸಕಲರಿಗೂ ನೆಮ್ಮದಿಯ ತಾಣವಾಗಿದ್ದ ಬೆಂಗಳೂರು ಈಗ ಭಯೋತ್ಪಾದಕರ ಬೀಡಾಗುತ್ತಿದೆ. ಆದರೆ ಈ ಬಗ್ಗೆ ತುಘಲಕ್ ಸರ್ಕಾರದ ಪ್ರತಿನಿಧಿಗಳು, ಬಂಧನವಾದ ಉಗ್ರರ ಸಮಗ್ರ ತನಿಖೆಗೂ ಮುನ್ನ ಉಗ್ರರಿಗೆ ಕ್ಲೀನ್ ಚಿಟ್ ನೀಡಲು ಪ್ರಯತ್ನಿಸುತ್ತಿದ್ದಾರೆಂದು ಹೇಳಿದೆ.

ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಉಗ್ರಗಾಮಿಗಳ ಪರ ತನ್ನ ಮೃದು ಧೋರಣೆಯನ್ನು ತೋರುತ್ತಾ ಬಂದಿದೆ. ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗುವ ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದರೇ, ಅವರಿಗೆ ಕಾನೂನು ನೆರವನ್ನು ಒದಗಿಸಲು ಕಾಂಗ್ರೆಸ್‌ನ ಲೀಗಲ್ ಸೆಲ್ ಸದಾ ಸಿದ್ದವಾಗಿರುತ್ತದೆ.

ಭಯೋತ್ಪಾದಕ ಕೃತ್ಯಗಳಿಂದ ಸೈನಿಕರು, ದೇಶದ ಜನಸಾಮಾನ್ಯರು ಬಲಿಯಾದರೇ ಅದಕ್ಕೆ ಸಂತಾಪ ಸೂಚಿಸದ ಕಾಂಗ್ರೆಸ್, ಒಂದು ವೇಳೆ ಭಯೋತ್ಪಾದಕನೊಬ್ಬ ಪೊಲೀಸರ ಗುಂಡಿಗೆ ಬಲಿಯಾದರೇ ಅದಕ್ಕೆ ಕಣ್ಣೀರು ಸುರಿಸುತ್ತದೆ. ಹಲವಾರು ವಿಧ್ವಂಸಕ ಕೃತ್ಯ ನಡೆಸಿ, ಅಮಾಯಕರನ್ನು ಬಲಿ ಪಡೆದ ಭಯೋತ್ಪಾದಕ ಮಸೂದ್ ಅಜರ್‌ನನ್ನು, ರಾಹುಲ್ ಗಾಂಧಿ ಮಸೂದ್"ಜೀ" ಎಂದು ಕರೆಯುವ ಮೂಲಕ, ಉಗ್ರರ ಬಗ್ಗೆ ತಮಗಿರುವ ಆಂತರಿಕ ಪ್ರೇಮವನ್ನು ವ್ಯಕ್ತಪಡಿಸಿದ್ದರು.

ಈ ಹಿಂದೆ, ಭಯೋತ್ಪಾದಕರ ವಿರುದ್ಧ ನಡೆದ ಬಾಟ್ಲಾ ಹೌಸ್ ಎನ್ ಕೌಂಟರ್, ಇಶ್ರತ್ ಜಹಾನ್ ಎನ್‌ಕೌಂಟರ್‌ಗಳನ್ನು ನಕಲಿ ಎಂದು ಆರೋಪಿಸಿ ಕಾಂಗ್ರೆಸ್ ಬಹಿರಂಗವಾಗಿ ಭಯೋತ್ಪಾದಕರ ಹಾಗೂ ಆ ಸಂಘಟನೆಗಳ ಪರ ನಿಂತಿತ್ತು. ಅದೇ ರೀತಿ ಉಗ್ರಗಾಮಿಗಳಿಗೆ ಸಿಂಹಸ್ವಪ್ನವಾಗಿದ್ದ ಪೋಟಾ ಕಾಯಿದೆಯನ್ನು ಹಿಂಪಡೆಯುವ ಮೂಲಕ ಕಾಂಗ್ರೆಸ್, ಭಯೋತ್ಪಾದಕರಿಗೆ ನೈತಿಕ ಬಲ ನೀಡಿತ್ತು ಎಂದು ತಿಳಿಸಿದೆ.

ದೇಶದ ರಕ್ಷಣಾ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದ 26/11 ಮುಂಬೈ ದಾಳಿಯ ಸಂದರ್ಭದಲ್ಲಿ ದೇಶವೇ ಒಟ್ಟಾಗಿ ನಿಲ್ಲಬೇಕಿತ್ತು. ಆದರೆ, ಅದಕ್ಕೆ 'ಹಿಂದೂ ಭಯೋತ್ಪಾದಕರ ಕೃತ್ಯ' ಎಂಬ ಸುಳ್ಳು ತೇಲಿ ಬಿಟ್ಟು, ನೈಜ ಉಗ್ರಗಾಮಿಗಳ ಕೃತ್ಯವನ್ನು ಮರೆಮಾಚಲು ಕಾಂಗ್ರೆಸ್ ಯತ್ನಿಸಿತ್ತು. ಈ ರೀತಿಯಾಗಿ ನಮ್ಮ ಸೈನ್ಯದ ಹಾಗೂ ಪೊಲೀಸರ ಆತ್ಮ ಬಲವನ್ನು ಕುಗ್ಗಿಸುವ ಕೀಳು ಪ್ರಯತ್ನವನ್ನು ಕಾಂಗ್ರೆಸ್ ದಶಕಗಳಿಂದ ಮಾಡುತ್ತಿದೆ.

ಹೀಗಾಗಿ ಭಯೋತ್ಪಾದಕ ಸಂಘಟನೆಗಳು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ತಮ್ಮ ಸ್ಲೀಪರ್ ಸೆಲ್‌ಗಳನ್ನು ಜಾಗೃತಗೊಳಿಸುತ್ತವೆ, ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುತ್ತವೆ. ಇದೆಲ್ಲವೂ ಕಾಂಗ್ರೆಸ್ ಪಕ್ಷ ಉಗ್ರರ ಮೇಲೆ ಹೊಂದಿರುವ ಮೃದು ಧೋರಣೆಯ ಪ್ರತೀಕವಾಗಿದೆ ಎಂದು ಹೇಳಿದೆ.

ಈಗ ಗೃಹ ಸಚಿವ ಪರಮೇಶ್ವರ್ ಕೊಟ್ಟಿರುವ ಹೇಳಿಕೆಯೂ ಇದರದೇ ಭಾಗ, ತನ್ನ ಓಲೈಕೆ ರಾಜಕಾರಣಕ್ಕಾಗಿ, ಕಾಂಗ್ರೆಸ್ ಪಕ್ಷ ದೇಶದ ಭದ್ರತೆಯ ವಿಚಾರದಲ್ಲಿ ರಾಜೀಯಾಗುವಂತಹ ಧೋರಣೆಯನ್ನು ಅನುಸರಿಸುತ್ತಿರುವುದು ಅತ್ಯಂತ ಖಂಡನೀಯ ಹಾಗೂ ಅಕ್ಷಮ್ಯ ಅಪರಾಧ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com