'ಸಂತೋಷ ಕೂಟದ ಕಲ್ಲೇಟಿಗೆ ಎಲ್ಲಾ ಹಕ್ಕಿಗಳೂ ಉದುರಿ ಬೀಳುತ್ತಿವೆ'! ಕಾಂಗ್ರೆಸ್ ಟೀಕೆ

ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಚುನಾವಣಾ ರಾಜಕೀಯಕ್ಕೆ ನಿವೃತ್ತ ಘೋಷಣೆ ಕುರಿತು ಗುರುವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಸಂತೋಷ ಕೂಟದ ಕಲ್ಲೇಟಿಗೆ ಎಲ್ಲಾ ಹಕ್ಕಿಗಳೂ ಉದುರಿ ಬೀಳುತ್ತಿವೆ! ಎಂದು ಟೀಕಿಸಿದೆ.
ಡಿ.ವಿ. ಸದಾನಂದಗೌಡ
ಡಿ.ವಿ. ಸದಾನಂದಗೌಡ
Updated on: 

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಚುನಾವಣಾ ರಾಜಕೀಯಕ್ಕೆ ನಿವೃತ್ತ ಘೋಷಣೆ ಕುರಿತು ಗುರುವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಸಂತೋಷ ಕೂಟದ ಕಲ್ಲೇಟಿಗೆ ಎಲ್ಲಾ ಹಕ್ಕಿಗಳೂ ಉದುರಿ ಬೀಳುತ್ತಿವೆ! ಎಂದು ಟೀಕಿಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ, ಅಂತೂ ಇಂತೂ ಬಿಜೆಪಿಯ ಸಂತೋಷ ಕೂಟದ ಆಟ ಗೆಲುವಿನತ್ತ ಸಾಗುತ್ತಿದೆ. ಬಿಜೆಪಿಯನ್ನು ಸಂಪೂರ್ಣ ಹಿಡಿತಕ್ಕೆ ಪಡೆಯುವ ಪಕ್ವ ಕಾಲ ಬಂದಿದೆ. ಲಿಂಗಾಯತ ನಾಯಕ ಯಡಿಯೂರಪ್ಪರನ್ನು ಮೂಲೆಯಲ್ಲಿ ಕೂರಿಸಿದ್ದಾಯ್ತು. ಹಿಂದುಳಿದ ವರ್ಗದ ಈಶ್ವರಪ್ಪರನ್ನು ಬಲವಂತವಾಗಿ ರಿಟೈರ್ಡ್ ಮಾಡಿದ್ದಾಯ್ತು. ಈಗ ಒಕ್ಕಲಿಗ ಸದಾನಂದಗೌಡರೂ ಹೈಕಮಾಂಡ್ ನಿಂದ ಅವಮಾನಕ್ಕೊಳಗಾಗಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಕುಮಾರಸ್ವಾಮಿ ಹೇಳಿದಂತೆ ಇನ್ಮುಂದೆ ಬಿಜೆಪಿಯಲ್ಲಿ ಪೇಶ್ವೆ ವಂಶಸ್ಥರದ್ದೇ ಪಾರುಪತ್ಯ ಎಂದು ವಾಗ್ದಾಳಿ ನಡೆಸಿದೆ. 

ಮತ್ತೊಂದು ಟ್ವೀಟ್ ನಲ್ಲಿ ಹರಿದ ಪಂಚೆಯಂತಾಗಿರುವ ಬಿಜೆಪಿಯಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ವಲಸಿಗರಿಗೆ ಆಪರೇಷನ್ ಕಮಲ ಮಾಡುವಾಗ ಜಾಮೂನ್ ಕೊಟ್ಟ ಬಿಜೆಪಿ ಈಗ ವಿಷ ಕೊಡುತ್ತಿದೆಯಂತೆ, ಹೀಗೆ ಹೇಳಿದ್ದು ಸ್ವತಃ ಬಿಜೆಪಿಯ ಎಸ್ ಟಿ ಸೋಮಶೇಖರ್! ಬಿಜೆಪಿ ಕಚೇರಿಯಲ್ಲಿ ಯಾರು ಯಾರಿಗೆ ವಿಷ ಬೆರೆಸುತ್ತಿದ್ದಾರೋ, ಮದ್ದು ಅರೆಯುತ್ತಿದ್ದಾರೋ! ಇತ್ತ ಕೆ ಎಸ್ ಈಶ್ವರಪ್ಪ ಎಂಬ ಕೆಲಸವಿಲ್ಲದ ರಿಟೈರ್ಡ್ ರಾಜಕಾರಿಣಿ ವಲಸಿಗರ ವಿರುದ್ಧ ನಾಲಿಗೆ ಮಸೆಯುತ್ತಿದ್ದಾರೆ. ಒಟ್ಟಿನಲ್ಲಿ  BJPvsBJP ಕಿತ್ತಾಟ ಎಂಬುದು ಮುಗಿಯದ ಧಾರಾವಾಹಿ ಎಂದು ಕುಹುಕವಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com