'ಪರ್ಸಂಟೇಜ್ ಪಟಾಲಂ': ಜಮೀನುಗಳಿಗೆ ಬೇಲಿ ಬಿಗಿದು ರಕ್ತ ಹಿರುವ ವ್ಯಕ್ತಿ ಉಪ ಮುಖ್ಯಮಂತ್ರಿ!! ಇದಲ್ಲವೇ ದೌರ್ಭಾಗ್ಯ: ಡಿಕೆಶಿ ವಿರುದ್ಧ ಜೆಡಿಎಸ್ ವಾಗ್ದಾಳಿ

ರಾಜ್ಯದಲ್ಲಿ ಜೆಡಿಎಸ್ vs ಕಾಂಗ್ರೆಸ್ ಜಟಾಪಟಿ ಮುಂದುವರೆದಿದ್ದು, ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆ ಸಂಬಂಧಿಸಿದಂತೆ ತಿರುಗೇಟು ನೀಡಿರುವ ಜೆಡಿಎಸ್, ಜಮೀನುಗಳಿಗೆ ಬೇಲಿ ಬಿಗಿದು ರಕ್ತ ಹಿರುವ ವ್ಯಕ್ತಿ ಉಪ ಮುಖ್ಯಮಂತ್ರಿ!! ಇದಲ್ಲವೇ ದೌರ್ಭಾಗ್ಯ ಎಂದು ಕಿಡಿಕಾರಿದೆ.
ಡಿಕೆ ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ
ಡಿಕೆ ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ vs ಕಾಂಗ್ರೆಸ್ ಜಟಾಪಟಿ ಮುಂದುವರೆದಿದ್ದು, ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆ ಸಂಬಂಧಿಸಿದಂತೆ ತಿರುಗೇಟು ನೀಡಿರುವ ಜೆಡಿಎಸ್, ಜಮೀನುಗಳಿಗೆ ಬೇಲಿ ಬಿಗಿದು ರಕ್ತ ಹಿರುವ ವ್ಯಕ್ತಿ ಉಪ ಮುಖ್ಯಮಂತ್ರಿ!! ಇದಲ್ಲವೇ ದೌರ್ಭಾಗ್ಯ ಎಂದು ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, 'ಅವರು ರಾಜ್ಯಕ್ಕೆ ಉಪ ಮುಖ್ಯಮಂತ್ರಿ. ಅವರನ್ನು 'ಮೂರ್ಖ ಶಿಖಾಮಣಿ ' ಎನ್ನುವುದು ತರವಲ್ಲ. ಅಸಲಿಗೆ, ಹಾಗೆಂದು ಹೇಳಲು ನಮಗೂ ಇಷ್ಟವಿಲ್ಲ ಬಿಡಿ. ಲೂಟಿಯನ್ನೇ ನಿತ್ಯಕಾಯಕ, ದಂಧೆಯನ್ನೇ ದಿನವಹಿ ಧನಾರ್ಜನೆಗೆ ರಹದಾರಿ ಮಾಡಿಕೊಂಡಿರುವ, ಕಂಡ ಕಂಡವರ ಜಮೀನುಗಳಿಗೆ ಬೇಲಿ ಬಿಗಿದು ಅವರ ರಕ್ತ ಹಿರುತ್ತಿರುವ ವ್ಯಕ್ತಿ ರಾಜ್ಯಕ್ಕೆ ಉಪ ಮುಖ್ಯಮಂತ್ರಿ!! ಇದಲ್ಲವೇ ಕನ್ನಡಿಗರ ದೌರ್ಭಾಗ್ಯ. ಅವರ 'ಅಂತ್ಯವಿಲ್ಲದ ಹೈ ಕಮಾಂಡ್ ಕೃಪಾಪೋಷಿತ ಅಕ್ರಮ'ಗಳಿಗೆ ಕೊನೆ ಎಂಬುದಿಲ್ಲವೇ? ಎಂದು ಜನ ಕೇಳುತ್ತಿದ್ದಾರೆ. ಕೊನೆ ಇದೆ, ಇದ್ದೇ ಇರುತ್ತದೆ.. ಕಾಯಬೇಕಷ್ಟೇ. ವಾಕ್ಯ ಎಂದ ಮೇಲೆ ಪುಲ್ ಸ್ಟಾಪ್ ಇರಲೇಬೇಕು' ಎಂದಿದೆ.

ಅಲ್ಲದೆ, ಸೂರ್ಯ ಪಶ್ಚಿಮಕ್ಕೆ ವಾಲಿದೊಡನೆ ಕಂಡವರ ಪಕ್ಷಗಳವರ ಮನೆ ಬಾಗಿಲ ಮುಂದೆ ಪರ್ಸಂಟೇಜ್ ಪಟಾಲಂ ಪ್ರತ್ಯಕ್ಷ! ಇಂಥಾ ಕಲುಷಿತ ರಾಜಕಾರಣ ಶೋಭೆಯೇ? ನುಡಿದಂತೆ ನಡೆಯುತ್ತೇವೆ ಎಂದರೆ ಇದೇನಾ? ಜನರ ದುಡ್ಡು, ಇವರದ್ದು ಜಾತ್ರೆ. ಇದೇ ಇವತ್ತಿನ ಕರ್ನಾಟಕದ ಚಿತ್ರಣ. ರಾಜ್ಯದ ಜನರಿಗೆ ಇವರ ಭಂಡಾರವೆಲ್ಲ ಗೊತ್ತಾಗಿದೆ. ಆ ಭಂಡಾರ ಬಿಚ್ಚಿಕೊಂಡ ಕೂಡಲೇ ಬಾಲಸುಟ್ಟ ಬೆಕ್ಕಿನಂತೆ ವಿಲವಿಲನೆ ಒದ್ದಾಡಿದರೆ ಹೇಗೆ? ಅವರ ಫಸಲು, ಅವರವರ ಫಲ..  ಕರ್ನಾಟಕವನ್ನು ಹೈ ಕಮಾಂಡ್ ಗೆ ಒತ್ತೆ ಇಟ್ಟ ಭೂಪತಿ, ಆಧುನಿಕ ಈಸ್ಟ್ ಇಂಡಿಯಾ ಕಂಪನಿಗಳ ಪೊಲಿಟಿಕಲ್ ಏಜೆಂಟ್, ಕರುನಾಡಿನ ಕರೋಡ್ ಪತಿ, ಬದುಕೆಲ್ಲ ಬ್ರೋಕರೇಜ್ ಮಾಡಿಕೊಂಡೇ ಕೊಳ್ಳೆ ಹೊಡೆದ ವ್ಯಕ್ತಿ, ಈಗ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡುವುದೇ? ಅರೆರೆ.. ಇವರ SST, YST ಅಬ್ಬರ ಕಂಡು GSTಯೇ ಬೆಚ್ಚಿದೆ. ಇದೇ ನೋಡಿ ಕರ್ನಾಟಕದ ಮಾದರಿ ಎಂದು ವಾಗ್ದಾಳಿ ನಡೆಸಿದೆ.

ಅಂತೆಯೇ ಕಾಂಗ್ರೆಸ್ ಪಕ್ಷವೇ ಪರ್ಸಂಟೇಜ್ ಪಟಾಲಂ ಎಂದು ಜರಿದಿರುವ ಜೆಡಿಎಸ್, 'ಕಮೀಷನ್ ಕೈಂಕರ್ಯವೇ ಅದರ ರಾಜಧರ್ಮ. ಲೂಟಿ, ದಂಧೆ, ಅಕ್ರಮವೇ ಅದರ ಗ್ಯಾರಂಟಿ. ಅನ್ಯರಾಜ್ಯಗಳ ಚುನಾವಣೆ ಇವರಿಗೆ ಚಿನ್ನದ ಗಣಿ. ಹೈಕಮಾಂಡ್ ಆಸರೆಯೇ ಅಕ್ಷಯ ಪಾತ್ರೆ.. ಇಂಥವರಿಗೆ ಕುಮಾರಸ್ವಾಮಿಯವರ ಕೂಗು ಕೇಳುವುದೇ? ಇಲಾಖೆಗೊಂದು ಹಿಟಾಚಿ ಇಟ್ಟುಕೊಂಡು 24X7 ಬಾಚುತ್ತಿದ್ದಾರೆ. ಸ್ವತಃ ತಾನೇ ಕೊಳೆತು ನಾರುತ್ತಿದೆ. ಆದರೆ, ಪಕ್ಕದ ಮನೆ ಕಂಪೌಡಿನ ಮೇಲೆ ಮರದೆಲೆ ಬಿದ್ದಿದೆ ಎಂದು ಕಾಂಗ್ರೆಸ್ ಅಂಗೈ ಪರಚಿಕೊಳ್ಳುತ್ತಿದೆ. ಪರಚಿಕೊಳ್ಳುವುದರ ಜತೆಗೆ, ಕರ್ನಾಟಕವನ್ನೇ ಪಾಪರ್ ಮಾಡುವುದೇ ಪರ್ಸಂಟೇಜ್ ಪಟಾಲಂ ಹಾಕಿಕೊಂಡಿರುವ ಏಕೈಕ ಗುರಿ. ಅದರ ಪಾಲಿಗೆ ಹೈ ಕಮಾಂಡ್ ಸೇವೆಯೇ ಆನಂದದಾಯಕ ಸೇವೆ ಎಂದು ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com