ಹಳೇ ಮೈಸೂರು ಗೆದ್ದರೆ ಕರ್ನಾಟಕವನ್ನೇ ಜಯಸಿದಂತೆ: ಒಕ್ಕಲಿಗರ ಹೃದಯ ಭಾಗದಲ್ಲಿ ವಿಜಯಮಾಲೆ ಯಾರಿಗೆ? ಎಚ್ ಡಿಕೆಗೆ 'ಮಾಡು ಇಲ್ಲವೇ ಮಡಿ' ಹೋರಾಟ!

ಹಳೇ ಮೈಸೂರು ಭಾಗದಲ್ಲಿ ಸಾಂಪ್ರಾದಾಯಿಕ ಬದ್ಧ ವೈರಿಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಜಟಾಪಟಿ ನಡೆಯಲಿದೆ. ಇದರ ಜೊತೆಗೆ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.
ಸಿದ್ದರಾಮಯ್ಯ, ಎಚ್ ಡಿಕೆ ಮತ್ತು ಯಡಿಯೂರಪ್ಪ
ಸಿದ್ದರಾಮಯ್ಯ, ಎಚ್ ಡಿಕೆ ಮತ್ತು ಯಡಿಯೂರಪ್ಪ

ಮೈಸೂರು: ಹಳೇ ಮೈಸೂರು ಭಾಗದಲ್ಲಿ ಸಾಂಪ್ರಾದಾಯಿಕ ಬದ್ಧ ವೈರಿಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಜಟಾಪಟಿ ನಡೆಯಲಿದೆ. ಇದರ ಜೊತೆಗೆ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.

ಕಾಂಗ್ರೆಸ್ -ಜೆಡಿಎಸ್ ಜೊತೆಗೆ ಬಿಜೆಪಿ ಕೂಡ ತನ್ನ ವಿರೋಧಿಗಳಿಗೆ ಸವಾಲೊಡ್ಡಲು ಮುಂದಾಗಿದೆ. ಮೂವರು ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಹೊಂದಿರುವ ಈ ಭಾಗವೂ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಮುಖ ಪಾತ್ರ ವಹಿಸಲಿದೆ. ಜೆಡಿಎಸ್‍ಗೆ ಕಾಂಗ್ರೆಸ್ ಮತ್ತು ಬಿಜೆಪಿ ಯಿಂದ ಪ್ರಬಲ ಪೈಪೋಟಿ ಇದೆ. ಹೀಗಾಗಿ ಭದ್ರಕೋಟೆ ಉಳಿಸಿಕೊಳ್ಳೋದು ಜೆಡಿಎಸ್‍ಗೆ ಸವಾಲಾಗಿದೆ

ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರವನ್ನು ಗೆಲ್ಲಲು ಉತ್ಸುಕವಾಗಿರುವ ಮೂರೂ ಪಕ್ಷಗಳು ಹಳೇ ಮೈಸೂರಿನಲ್ಲಿ ಯಾರು ಗೆದ್ದರೂ ಕರ್ನಾಟಕವನ್ನು ಗೆದ್ದಂತೆ ಎಂದು ನಂಬಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳ 52 ಸ್ಥಾನಗಳು (ಬೆಂಗಳೂರು ನಗರ ಹೊರತುಪಡಿಸಿ) ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ನಿರ್ಣಾಯಕವಾಗಿವೆ.

ಜನಪ್ರಿಯ ನಟ ಅಂಬರೀಶ್ ಅವರ ಪತ್ನಿ, ಸಂಸದೆ ಸುಮಲತಾ ಕ್ಷೇತ್ರದಲ್ಲಿ ಸಾಕಷ್ಟು ಅಭಿಮಾನ ಗಳಿಸಿದ್ದು, ಬಿಜೆಪಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ. ಹಳೇ ಮೈಸೂರು ಭಾಗದ ಪ್ರಾಮುಖ್ಯತೆಯನ್ನುಗಮನಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ರೋಡ್ ಶೋಗಳನ್ನು ನಡೆಸಿದರು. ರ್ಯಾಲಿಗಳಲ್ಲಿ ಭಾಗವಹಿಸಿದರು, ಇದು ಬಿಜೆಪಿಯ ಆರಂಭ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇದರ ಜೊತೆಗೆ ಈ ಭಾಗದಲ್ಲಿ ಕನಿಷ್ಠ 35 ಸ್ಥಾನಗಳನ್ನು ಗೆಲ್ಲುವ ದೊಡ್ಡ ಯೋಜನೆಯನ್ನು ಹೊಂದಿದೆ.

ಐತಿಹಾಸಿಕ ಮೈಶುಗರ್ ಕಾರ್ಖಾನೆ ಮತ್ತು ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಒಕ್ಕಲಿಗ ಹೃದಯಭಗವಾಗಿರುವ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಸಾಧಿಸಿತ್ತು.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆಯಲ್ಲಿ, 93 ನೇ ವಯಸ್ಸಿನಲ್ಲಿಯೂ ಪಕ್ಷದ ವರಿಷ್ಠ ಹೆಚ್ ಡಿ ದೇವೇಗೌಡರು ನೇತೃತ್ವ ವಹಿಸಿದ್ದು, ಜೆಡಿಎಸ್ ಗೆ ಮತ್ತಷ್ಟು ಬಲ ತಂದು ಕೊಟ್ಟಂತಿದೆ.

ಜೆಡಿಎಸ್ 40 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ರೈತರ ಬೆಂಬಲ ದೊರೆತರೆ ಕುಮಾರಸ್ವಾಮಿ ಮತ್ತೆ ಉದಯೋನ್ಮುಖ ಕಿಂಗ್ ಮೇಕರ್ ಆಗುವ ಸಾಧ್ಯತೆಯಿದೆ.

ಕುಮಾರಸ್ವಾಮಿಯವರಿಇದು ಮಾಡು ಇಲ್ಲವೇ ಮಡಿ ಯುದ್ಧವಾಗಿ ಉಳಿದಿದೆ, ಏಕೆಂದರೆ ಹಳೇ ಮೈಸೂರಿನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದರೆ ಅವರ ಪಕ್ಷಕ್ಕೆ ಅಪಾಯವಿದೆ. ಜೆಡಿಎಸ್ ಕೂಡ ತನ್ನ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಕದನ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ. ಚಾಮುಂಡೇಶ್ವರಿಯಿಂದ ಸೋತಿರುವ ಸಿದ್ದರಾಮಯ್ಯ ಅವರು ಈ ಬಾರಿ ತಮ್ಮ ವರುಣಾದಿಂದ ಕಣಕ್ಕಿಳಿದಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಿದೆ.

ಜೆಡಿಎಸ್‌ಗೆ ನಿಷ್ಠರಾಗಿ ಉಳಿದಿದ್ದ ಪ್ರಬಲ ಒಕ್ಕಲಿಗ ಸಮುದಾಯವನ್ನು ಒಲಿಸಿಕೊಳ್ಳಲು ವಿಶೇಷ ಪ್ರಯತ್ನಗಳು ನಡೆಯುತ್ತಿವೆ. ಕಾಂಗ್ರೆಸ್ ಕೂಡ ಸಿದ್ದರಾಮಯ್ಯ ಅವರ ಅಹಿಂದ ಬಲವರ್ಧನೆ, ಅಲ್ಪಸಂಖ್ಯಾತರು ಮತ್ತು ಇತರ ಸಣ್ಣ ಸಮುದಾಯಗಳ ಮೇಲೆ  ಕಣ್ಣಿಟ್ಟಿದ್ದು, ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಮುಖ್ಯಮಂತ್ರಿ ಆಕಾಂಕ್ಷಿಗಳಾದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇಬ್ಬರೂ ಒಂದೇ ಪ್ರದೇಶದವರಾಗಿರುವುದರಿಂದ ಪಕ್ಷಕ್ಕೆ ಲಾಭವಾಗಲಿದೆ.

ಒಕ್ಕಲಿಗರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವಂತೆ ಭಾವನಾತ್ಮಕವಾಗಿ ಮನವಿ ಮಾಡುತ್ತಿರುವ ಶಿವಕುಮಾರ್ ಅವರಿಂದ ಒಕ್ಕಲಿಗ ಮತಗಳ ವಿಭಜನೆಗೆ ಸವಾಲು ಎದುರಾಗಿದೆ.

ಹಲವು ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆ ಏರ್ಪಡುತ್ತಿವೆ. ಬಿಜೆಪಿಗೆ, 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಗೆಲುವು ಅನಿವಾರ್ಯವಾಗಿದೆ, ಏಕೆಂದರೆ ವಿಧಾನಸಭಾ ಚುನಾವಣೆಗಳು ಸೃಷ್ಟಿಸಿದ ಫಲಿತಾಂಶ ಮುಂದಿನ ವರ್ಷ ಲಾಭದಾಯಕವೆಂದು ಸಾಬೀತುಪಡಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com