ವಿಪಕ್ಷಗಳನ್ನು ಬಗ್ಗು ಬಡಿದರೆ ಬೇಗ ಸಿಎಂ ಆಗಬಹುದೆಂದು ಡಿಕೆಶಿ ತಂತ್ರ: ಆರ್.ಅಶೋಕ್

ಸಿ ಟಿ ರವಿ ಪ್ರಕರಣದಲ್ಲಿ ಪೊಲೀಸರ ಹಿಂದೆ ಇರೋದೇ ಡಿಸಿಎಂ ಡಿಕೆ ಶಿವಕುಮಾರ್. ಮುಖ್ಯಮಂತ್ರಿಯ ಪದವಿಯನ್ನು ಒದ್ದು ಕಿತ್ತುಕೊಳ್ತೀನಿ ಅಂತೀಯಲ್ಲಪ್ಪ, ನೀನು ಅಲ್ಲದೇ ಇನ್ನು ಯಾರು ಮಾಡುತ್ತಿದ್ದಾರೆ ಇದನ್ನೆಲ್ಲಾ?
R.Ashok
ವಿಪಕ್ಷ ನಾಯಕ ಆರ್.ಅಶೋಕ್
Updated on: 

ಬೆಂಗಳೂರು: ವಿಪಕ್ಷಗಳನ್ನು ಬಗ್ಗು ಬಡಿದರೆ ಬೇಗ ಸಿಎಂ ಆಗಬಹುದೆಂದು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಡಿಕೆ.ಶಿವಕುಮಾರ್ ಸೇಡಿನ ರಾಜಕಾರಣ ಮಾಡುತ್ತಿದ್ದಾರೆಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಶನಿವಾರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆಗಲು ಬಯಸುತ್ತಿರುವ ಶಿವಕುಮಾರ್ ಅವರ ಸೂಚನೆಯ ಮೇರೆಗೆ ಎಲ್ಲಾ ಬೆಳವಣಿಗೆಗಳು ನಡೆದಿದೆ ಎಂದು ಹೇಳಿದರು.

ಸಿ ಟಿ ರವಿ ಪ್ರಕರಣದಲ್ಲಿ ಪೊಲೀಸರ ಹಿಂದೆ ಇರೋದೇ ಡಿಸಿಎಂ ಡಿಕೆ ಶಿವಕುಮಾರ್. ಮುಖ್ಯಮಂತ್ರಿಯ ಪದವಿಯನ್ನು ಒದ್ದು ಕಿತ್ತುಕೊಳ್ತೀನಿ ಅಂತೀಯಲ್ಲಪ್ಪ, ನೀನು ಅಲ್ಲದೇ ಇನ್ನು ಯಾರು ಮಾಡುತ್ತಿದ್ದಾರೆ ಇದನ್ನೆಲ್ಲಾ? ಔಟ್ ಗೋಯಿಂಗ್ ಮುಖ್ಯಮಂತ್ರಿ ಗಳಿದ್ದಾರೆ. ವಿಪಕ್ಷಗಳನ್ನು ಬಗ್ಗು ಬಡಿದರೆ ಬೇಗ ಸಿಎಂ ಆಗಬೇಕೆಂಬುದು ನಿಮ್ಮ ತಂತ್ರ. ಸಿ ಟಿ ರವಿ ಪ್ರಕರಣದ ಹಿಂದೆ ನೀನೇ ಇರೋದು ಎಂದು ಡಿ ಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದರು.

ಎಸ್​ಪಿ ಬದಲು ಕಮಿಷನರ್ ಬಂದು ಕೂತ್ಕೊಳ್ತಾರೆ. ರಾಜಕೀಯ ಒತ್ತಡ ಚಿತಾವಣೆ ಅಲ್ಲದೇ ಇನ್ನೇನು? ಇದರಲ್ಲಿ ಎಲ್ಲವನ್ನೂ ರಾಜಕಾರಣಿಗಳೇ ಮಾಡುತ್ತಿರೋದು. ಕಾನೂನನ್ನು ಕೈಗೆ ತಗೊಂಡಿದ್ರು ಅದಕ್ಕೆ ಕೋರ್ಟ್ ಇವಾಗ ಛೀಮಾರಿ ಹಾಕಿದೆ. ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದವರನ್ನು ಬಿರಿಯಾನಿ‌ ತಿನ್ನಿಸಿ‌ ಕಳುಹಿಸಿದ್ರಿ, ಆದರೆ ಸಿ ಟಿ‌ ರವಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ ಎಂದು ಪ್ರಶ್ನೆ ಮಾಡಿದರು.

R.Ashok
ಗೂಂಡಾಗಳು ಸುವರ್ಣ ಸೌಧದೊಳಕ್ಕೆ ಹೇಗೆ ಬಂದರು? ಯಾವುದಾದರೂ ಕಲ್ಲು ಬಂಡೆಯ ಕರಾಮತ್ತು, ಕುಮ್ಮಕ್ಕು ಇದೆಯಾ?: HDK

ಸೇಫ್ಟಿ ಅಂತ ಸಿ.ಟಿ ರವಿನಾ ಕಬ್ಬಿನ ಗದ್ದೆಗೆ ಕರೆದುಕೊಂಡು ಹೋದ್ರು. ಸೇಫ್ಟಿ ದೃಷ್ಟಿಯಿಂದ ಕೆಲವರು ಕಾಡು, ಕ್ವಾರಿಗಳಲ್ಲಿ ಬಚ್ಚಿಟ್ಟುಕೊಳ್ತಾರೆ. ಯಾಕಂದ್ರೆ ಅಲ್ಲಿ ಪ್ರಾಣಿಗಳಿರ್ತವೆ ಯಾರೂ ಬರಲ್ಲ ಅಂತ. ಪೊಲೀಸರು ಹೊಸ ಸೇಫ್ಟಿ ಮಾರ್ಗ ಹುಡುಕಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಸಚಿವರನ್ನ ಸೇಫ್ಟಿ ದೃಷ್ಟಿಯಿಂದ ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಬಿಡಬೇಕು. ವಿಧಾನಸೌಧಕ್ಕೆ ಕರೆದುಕೊಂಡು ಬನ್ನಿ, ಸೇಫ್ಟಿ ಬೇಕಾದಾಗ ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಬಿಡಿ. ಇದು ರಕ್ತ ಚರಿತ್ರೆ ಸಿನಿಮಾ ರೀತಿ. ಆಂಧ್ರ ಮಾದರಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ರವಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ನಿಂದಿಸಿರುವಂತೆ ನಮ್ಮ ಪಕ್ಷದ ಯಾವುದೇ ನಾಯಕರು ನಿಂದಿದ್ದರೆ ಕ್ರಮ ಕೈಗೊಳ್ಳುತ್ತಿದ್ದೆ ಎಂಬ ಶಿವಕುಮಾರ್‌ ಅವರ ಹೇಳಿಕೆಗೆ ಉತ್ತರಿಸಿ, ಕಾಂಗ್ರೆಸ್‌ ನಾಯಕರ ಮೇಲೆ ಅತ್ಯಾಚಾರ ಆರೋಪ ಸೇರಿದಂತೆ ಹತ್ತಾರು ಪ್ರಕರಣಗಳಿವೆ ಎಂದು ತಿರುಗೇಟು ನೀಡಿದರು.

ಶಾಸಕರೊಬ್ಬರ ಮೇಲೆ ಲಂಚದ ಆರೋಪ ಕೇಳಿಬಂದಿದ್ದು, ಪೊಲೀಸ್ ಪೇದೆ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ಪ್ರಕರಣಗಳು ದಾಖಲಾಗಿವೆ. ಏಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com