ಮುಖ್ಯಮಂತ್ರಿಗಳಿಗೆ ಶೃಂಗಾರ ಸಿರಿ, ಬರಗಾಲದ ಜನರಿಗೆ ಸಂಕಟದ ಕಹಿ: ಬಿಜೆಪಿ ಲೇವಡಿ

ಮುಖ್ಯಮಂತ್ರಿಗಳಿಗೆ ಶೃಂಗಾರ ಸಿರಿ, ಬರಗಾಲದ ಜನರಿಗೆ ಸಂಕಟದ ಕಹಿ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಲೇವಡಿ ಮಾಡಿದ್ದಾರೆ.
ವಿಜಯೇಂದ್ರ
ವಿಜಯೇಂದ್ರ

ಬೆಂಗಳೂರು: ಮುಖ್ಯಮಂತ್ರಿಗಳಿಗೆ ಶೃಂಗಾರ ಸಿರಿ, ಬರಗಾಲದ ಜನರಿಗೆ ಸಂಕಟದ ಕಹಿ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಲೇವಡಿ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ​ಮಾಡಿರುವ ಅವರು, ಜನ ಜಾನುವಾರುಗಳಿಗೆ ನೀರು, ಮೇವಿಗೆ ಆಹಾಕಾರ ಉಂಟಾಗಿ ನಾಡಿನೆಲ್ಲೆಡೆ ತೀವ್ರ ಬರ ಎದುರಿಸುತ್ತಿರುವ ಹೊತ್ತಲ್ಲಿ ತಮ್ಮ ಮನೆಯ ಶೃಂಗಾರಕ್ಕೆ ಬರೊಬ್ಬರಿ 9 ಕೋಟಿ ದುಂದು ವೆಚ್ಚ ಮಾಡುವ ಜರೂರು ಮುಖ್ಯಮಂತ್ರಿಗಳಿಗಿತ್ತೆ? ಎಂದು ಕಿಡಿಕಾರಿದ್ದಾರೆ.

ವಿಜಯೇಂದ್ರ
ಲೋಕಸಭೆ ಚುನಾವಣೆಗೆ ಮುನ್ನ 'ಹಿಂದಿನ ತಪ್ಪುಗಳನ್ನು' ಸರಿಪಡಿಸಿಕೊಳ್ಳಲು ರಾಜ್ಯ ಬಿಜೆಪಿ ಮುಂದು!
ವಿಜಯೇಂದ್ರ ಟ್ವೀಟ್
ವಿಜಯೇಂದ್ರ ಟ್ವೀಟ್

ಹೀನಾಯ ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗಿದೆ, ಸಂಕಷ್ಟದ ಕಾಲದ ಪರಿಹಾರ ಕಾರ್ಯವೂ ಸ್ಥಗಿತಗೊಂಡಿದೆ, ಇಂತಹ ಪರಿಸ್ಥಿತಿಯಲ್ಲೂ ಮನೆ ಶೃಂಗಾರದ ಆದ್ಯತೆ ಪಡೆದು 9 ಕೋಟಿ ನುಂಗಿದರೆ “ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು”..ಎಂಬ ಗಾದೆ ಮಾತು ನೆನಪಿಗೆ ಬರುತ್ತದೆ ಎಂದು ಲೇವಾಡಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com