ಯಾರ ಇಚ್ಛೆಯಂತೆ ಆಡಳಿತ ನಡೆಯುತ್ತಿದೆ? ರಾಜ್ಯವನ್ನು ನಡೆಸಲು ಸಮರ್ಥರಾಗಿಲ್ಲವೇ; ಸರ್ವ ಪಕ್ಷ ಸರ್ಕಾರದಂತಿದೆ; ಜಯಚಂದ್ರ ಕಿಡಿ

ನಾನು 1978 ರಿಂದ ಶಾಸಕರಾಗಿ ಸೇವೆ ಸಲ್ಲಿಸಿದ್ದೇನೆ, ನನ್ನ ರಾಜಕೀಯ ಜೀವನದಲ್ಲಿ ಗಾಂಧಿ ಕುಟುಂಬದ ನಾಲ್ಕು ತಲೆಮಾರುಗಳನ್ನು ಕಂಡಿದ್ದೇನೆ ಎಂದು ಹೇಳಿದರು.
ಟಿ.ಬಿ ಜಯಚಂದ್ರ
ಟಿ.ಬಿ ಜಯಚಂದ್ರ
Updated on

ಬೆಂಗಳೂರು: ಮತ್ತೆ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಪ್ರಶ್ನಿಸಿರುವ ಕಾಂಗ್ರೆಸ್ ಶಾಸಕ ಟಿ.ಬಿ.ಜಯಚಂದ್ರ ಸಚಿವರ ಆಡಳಿತಾತ್ಮಕ ಅನುಭವ ಮತ್ತು ರಾಜ್ಯ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ANI ಜೊತೆ ಮಾತನಾಡಿದ ಜಯಚಂದ್ರ, ಸಂಪುಟ ವಿಸ್ತರಣೆ ಬಗ್ಗೆ ರಾಜ್ಯದ ಮತದಾರರು ಹಾಗೂ ಅವರ ಕ್ಷೇತ್ರದ ಜನರು ಪ್ರಶ್ನಿಸುತ್ತಿದ್ದಾರೆ, ತಮ್ಮ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಸರ್ಕಾರದಿಂದ ಹೊರಬರುವಂತೆ ಸಮುದಾಯದ ಜನರು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.

ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರಾದ ಜಯಚಂದ್ರ, ಪಕ್ಷದೊಂದಿಗಿನ ತಮ್ಮ ದೀರ್ಘ ಸಂಬಂಧ ಮತ್ತು ಶಾಸಕರಾಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ನಾನು 1978 ರಿಂದ ಶಾಸಕರಾಗಿ ಸೇವೆ ಸಲ್ಲಿಸಿದ್ದೇನೆ, ನನ್ನ ರಾಜಕೀಯ ಜೀವನದಲ್ಲಿ ಗಾಂಧಿ ಕುಟುಂಬದ ನಾಲ್ಕು ತಲೆಮಾರುಗಳನ್ನು ಕಂಡಿದ್ದೇನೆ ಎಂದು ಹೇಳಿದರು.

ನಾನು ಸುಮಾರು 56 ವರ್ಷಗಳ ಹಿಂದೆ ಕಾಂಗ್ರೆಸ್‌ಗೆ ಸೇರಿದ್ದೆ. ನಾನು 1978 ರಲ್ಲಿ ಶಾಸಕನಾಗಿದ್ದೆ. ಇದು ಶಾಸಕನಾಗಿ ನನ್ನ 49 ನೇ ವರ್ಷ. ಇಂದಿರಾ ಗಾಂಧಿ ನನ್ನ ಚುನಾವಣಾ ಪ್ರಚಾರಕ್ಕಾಗಿ ಬಂದರು, ರಾಜೀವ್ ಗಾಂಧಿ ಬಂದರು, ಸೋನಿಯಾ ಗಾಂಧಿ ಬಂದರು, ರಾಹುಲ್ ಗಾಂಧಿ ಬಂದರು.

ಟಿ.ಬಿ ಜಯಚಂದ್ರ
ಆಗಸ್ಟ್ 13ರಿಂದ ವಿಧಾನಮಂಡಲ ಅಧಿವೇಶನ: ಟಿ.ಬಿ ಜಯಚಂದ್ರ ಹಂಗಾಮಿ ಸಭಾಧ್ಯಕ್ಷ

ನಾನು ಸೋಲನ್ನು ಸಹ ಎದುರಿಸಿದ್ದೇನೆ ಮತ್ತು ಚುನಾವಣೆಗಳನ್ನು ಗೆದ್ದಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ನಂತರ, ನಾನು ಕರ್ನಾಟಕದ ಅತ್ಯಂತ ಹಿರಿಯ ವ್ಯಕ್ತಿ. ಆದರೆ ಇನ್ನೂ, ಅವರು ನನ್ನ ಕ್ಷೇತ್ರದ ಮತದಾರರ ಆಕಾಂಕ್ಷೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಅವರು (ನನ್ನ ಅನುಭವ) ಬಳಸಿಕೊಳ್ಳುತ್ತಿಲ್ಲ. "ನಾನು ದೆಹಲಿಯಲ್ಲೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ ಎಂದಿದ್ದಾರೆ.

ಪ್ರಸ್ತಾವಿತ ಸಚಿವ ಸಂಪುಟದಲ್ಲಿನ ಆಡಳಿತಾತ್ಮಕ ಅನುಭವವನ್ನು ಪ್ರಶ್ನಿಸಿದ ಜಯಚಂದ್ರ, ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು ಮತ್ತು ಕರ್ನಾಟಕವು ಕಾವೇರಿ ವಿವಾದ ಮತ್ತು ಬರ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಹೇಳಿದರು.

ಇಲ್ಲ, ಇದು ಕಾಂಗ್ರೆಸ್ ಸರ್ಕಾರದಂತೆ ಕಾಣುತ್ತಿಲ್ಲ; ಇದು ಸರ್ವಪಕ್ಷ ಸರ್ಕಾರದಂತೆ ಕಾಣುತ್ತಿದೆ. ಅನುಭವದ ಕೊರತೆ, ಸಾಮರ್ಥ್ಯದ ಕೊರತೆ... ಅವರು ಆಡಳಿತ ನಡೆಸಲು ವಿಫಲರಾಗಿದ್ದಾರೆ. ರಾಜ್ಯವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದಿದ್ದಾರೆ. ಆದರೆ ಸಮರ್ಥವಾಗಿ ಸರ್ಕಾರ ಅವುಗಳನ್ನು ನಿಭಾಯಿಸುತ್ತಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com