ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ: ಹೆಚ್. ಡಿ. ದೇವೇಗೌಡ ಸೇರಿದಂತೆ ಪ್ರಬಲ ಸಮುದಾಯದ ನಾಯಕರನ್ನು ಭೇಟಿಯಾದ ಡಿಕೆಶಿ!

ಮೊದಲಿಗೆ ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಧನ್ಯವಾದ ಅರ್ಪಿಸಿದರು.
DK Shivakumar, Siddaramaiah, BS yediyurappa, HD Devegowda
ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ, ಹೆಚ್. ಡಿ ದೇವೇಗೌಡರನ್ನು ಭೇಟಿಯಾದ ಡಿಕೆ ಶಿವಕುಮಾರ್
Updated on

ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಸೇರಿದಂತೆ ಪ್ರಬಲ ಸಮುದಾಯದ ಹಿರಿಯ ನಾಯಕರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

ಮೊದಲಿಗೆ ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಧನ್ಯವಾದ ಅರ್ಪಿಸಿದರು.

ಬಳಿಕ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಜಿ.ಪಮೇಶ್ವರ್ ಅವರೂ ಧನ್ಯವಾದ ಅರ್ಪಿಸಿದರು. ಸಿದ್ದರಾಮಯ್ಯ ಅವರು ಇಬ್ಬರಿಗೂ ಅಭಿನಂದಿಸಿ ಶುಭಕೋರಿದರು.

ಬಳಿಕ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿದ ಡಿಕೆ ಶಿವಕುಮಾರ್, ದೇವರ ಮನೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಶಾಲು ಹೂದಿಸಿ ಡಿಕೆ ಶಿವಕುಮಾರ್ ಅವರನ್ನು ಸನ್ಮಾನಿಸಿದರು.

DK Shivakumar, Siddaramaiah, BS yediyurappa, HD Devegowda
DK Shivakumar and cabinet swearing-in LIVE updates | ಡಿ.ಕೆ ಶಿವಕುಮಾರ್ ಪ್ರಮಾಣವಚನ: ಪರಮೇಶ್ವರ್ ಡಿಸಿಎಂ; 13 ಶಾಸಕರಿಗೆ ಮಂತ್ರಿಗಿರಿ
DK Shivakumar, Siddaramaiah, BS yediyurappa, HD Devegowda
Watch | ಸಿದ್ದರಾಮಯ್ಯ ಆಡಳಿತದ 2 ನೇ ಅವಧಿಯಲ್ಲಿ DK Shivakumar ಪರ್ಯಾಯ ಪವರ್ ಸೆಂಟರ್ ಆಗಿದ್ದು ಹೇಗೆ?

ತದನಂತರ ಮಾಜಿ ಪ್ರಧಾನಿ ಹಾಗೂ ತಮ್ಮ ಧೀರ್ಘಕಾಲದ ರಾಜಕೀಯ ಎದುರಾಳಿ ಹೆಚ್. ಡಿ. ದೇವೇಗೌಡ ಅವರ ನಿವಾಸಕ್ಕೆ ತೆರಳಿ ಅವರಿಂದ ಆಶೀರ್ವಾದ ಪಡೆದುಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com