'ದುರಹಂಕಾರದ ಪರಮಾವಧಿ, ನೀವೇನು ಶಬರಿಯಲ್ಲ': ಕಚ್ಚಿ ತಿಂದ ಸೇಬು ಜನರತ್ತ ಎಸೆದ ಸಿಎಂ ಡಿಕೆಶಿ ವಿರುದ್ಧ BJP ಕೆಂಡ

ಯಾರಾದರೂ ಬೇರೆಯವರು ಕಚ್ಚಿದ ಸೇಬನ್ನು ನೀವು ತಿನ್ನುತ್ತೀರಾ?. ನೀವು ಶಬರಿಯಲ್ಲ. ನಿಮ್ಮನ್ನು ಕರ್ನಾಟಕದ ಜನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
CM DK Shivakumar Takes Bites Of Apples, Throws Them Into Crowd
ಕಚ್ಚಿ ತಿಂದ ಸೇಬು ಜನರತ್ತ ಎಸೆದ ಸಿಎಂ ಡಿಕೆಶಿ
Updated on

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸ್ವಕ್ಷೇತ್ರ ಕನಕಪುರದ ಹಾರೋಹಳ್ಳಿಯಲ್ಲಿ ನಡೆದ ರ್‍ಯಾಲಿಯಲ್ಲಿ ಸೇಬು ಹಣ್ಣನ್ನು ಕಚ್ಚಿ ತಿಂದು, ಉಳಿದ ಹಣ್ಣನ್ನು ಕಾರ್ಯಕರ್ತರತ್ತ ಎಸೆದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

'ಮಿಸ್ಟರ್​ ಸಿಎಂ ಡಿಕೆ ಶಿವಕುಮಾರ್​ ಅವರೇ ನೀವೇನು ರಾಜನಾಗಿದ್ದೀರಾ?, ಯಾರಾದರೂ ಬೇರೆಯವರು ಕಚ್ಚಿದ ಸೇಬನ್ನು ನೀವು ತಿನ್ನುತ್ತೀರಾ?. ನೀವು ಶಬರಿಯಲ್ಲ. ನಿಮ್ಮನ್ನು ಕರ್ನಾಟಕದ ಜನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಶಬರಿ ತನ್ನ ರಾಮನಿಗೆ ಭಕ್ತಿಯಿಂದ ಕಚ್ಚಿದ ಹಣ್ಣನ್ನು ನೀಡುತ್ತಾಳೆ. ಆದರೆ ಡಿಕೆ ಶಿವಕುಮಾರ್​ ಅವರೇ ನೀವು ಮಾಡುತ್ತಿರುವುದು ರಾಜ ಮಹಾರಾಜರ ತರಹದ ನಡವಳಿಕೆ. ಇದು ದುರಹಂಕಾರದ ಪರಮಾವಧಿ ಎಂದು ಬಿಜೆಪಿ ಕೆಂಡಕಾರಿದೆ.

CM DK Shivakumar Takes Bites Of Apples, Throws Them Into Crowd
ಬಿಜೆಪಿ, ಜೆಡಿಎಸ್ ನಿಂದ ಮತ್ತೊಬ್ಬ ಡಿ.ಕೆ ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ

ಶಬರಿಯು ಹಣ್ಣು ಹುಳಿಯಿದೆಯೇ ಎಂದು ಪರಿಶೀಲಿಸಿ ರಾಮನಿಗೆ ಹಣ್ಣು ಕಚ್ಚಿ ಕೊಟ್ಟಂತೆ ಸಿಎಂ ಡಿಕೆ ಶಿವಕುಮಾರ್​ ಅವರು ತಮ್ಮ ಬೆಂಬಲಿಗರು ತಮಗಾಗಿ ಮಾಡಿಸಿ ತಂದಿದ್ದ ಹಣ್ಣಿನ ಹಾರದಿಂದ ಸೇಬನ್ನು ಕಿತ್ತು ಕಚ್ಚಿ ರ್‍ಯಾಲಿಯಲ್ಲಿ ನೆರೆದಿದ್ದ ಅಭಿಮಾನಿಗಳು ಹಾಗೂ ಬೆಂಬಲಿಗರತ್ತ ಎಸೆದ ವಿಡಿಯೋಗಳು ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇಷ್ಟೇ ಅಲ್ಲದೆ, ಈ ಬಗ್ಗೆ ಬಿಜೆಪಿ ಟೀಕೆ ಮಾಡುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com