ಶೃಂಗೇರಿ: ಕೊನೆಗೂ ಶಾಸಕರಾಗಿ ಡಿ ಎನ್ ಜೀವರಾಜ್ ಇಂದು ಪ್ರಮಾಣವಚನ

ಕೊನೆಗೂ ಸಭಾಧ್ಯಕ್ಷರು ಸಮಯ ನಿಗದಿಪಡಿಸಿದ್ದು ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಜೀವರಾಜ್ ಖುಷಿ ಹಂಚಿಕೊಂಡಿದ್ದಾರೆ.
D N Jeevaraj
ಡಿ ಎನ್ ಜೀವರಾಜ್
Updated on

ಬೆಂಗಳೂರು: ಕೊನೆಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಇಂದು ಡಿ ಎನ್ ಜೀವರಾಜ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಅಪರಾಹ್ನ 3.30ಕ್ಕೆ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಸಭಾಧ್ಯಕ್ಷ ಯುಟಿ ಖಾದರ್ ಸಮಯ ನಿಗದಿಪಡಿಸಿದ್ದಾರೆ.

ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಬಳಿಕ ಉಂಟಾದ ರಾಜಕೀಯ ಗದ್ದಲದಿಂದ, ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಬಿಜೆಪಿ ವಿಳಂಬ ಆರೋಪ ಮಾಡಿತ್ತು. ಬಿಜೆಪಿ ಪ್ರತಿನಿಧಿ ಮಂಡಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಸ್ಪೀಕರ್ ಲಭ್ಯವಿಲ್ಲದಿದ್ದರೆ ತಾವೇ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಪ್ರಮಾಣವಚನ ಬೋಧಿಸಬೇಕು ಎಂದು ಮನವಿ ಮಾಡಿದ್ದರು.

D N Jeevaraj
‘ಶೃಂಗೇರಿ’ ಅಂಚೆ ಮತಗಳ ಮರು ಎಣಿಕೆ ವಿವಾದ: ಸ್ಪೀಕರ್ ವಿರುದ್ಧ ವಿಳಂಬ ಆರೋಪ, ರಾಜ್ಯಪಾಲ ಮಧ್ಯಪ್ರವೇಶಕ್ಕೆ BJP ಆಗ್ರಹ

ಕೊನೆಗೂ ಸಭಾಧ್ಯಕ್ಷರು ಸಮಯ ನಿಗದಿಪಡಿಸಿದ್ದು ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಜೀವರಾಜ್ ಖುಷಿ ಹಂಚಿಕೊಂಡಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಜೀವರಾಜ್ ಅಂಚೆ ಮತಗಳನ್ನು ಮರುಎಣಿಕೆ ಮಾಡಬೇಕೆಂದು ಕೋರ್ಟ್ ಮೊರೆಹೋಗಿದ್ದರು. ಕಳೆದ ವಾರಾಂತ್ಯ ಹೈಕೋರ್ಟ್ ಆದೇಶದಂತೆ ನಡೆದ ಮರುಎಣಿಕೆಯಲ್ಲಿ 52 ಮತಗಳ ಅಂತರದಿಂದ ಗೆದ್ದು ಶಾಸಕರಾಗಿ ಘೋಷಿಸಲ್ಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com