ಶಿವಮೊಗ್ಗ ಜಿಲ್ಲೆಗೂ ವ್ಯಾಪಿಸಿದ ಪೋಸ್ಟರ್ ವಾರ್: 'ಈ ನನ್ನ ಮಕ್ಕಳು' ಹೇಳಿಕೆಗೆ ವಿಜಯೇಂದ್ರ ನಿವಾಸ, ಬಿಜೆಪಿ ಕಚೇರಿಗೆ ಪೋಸ್ಟರ್ ಅಂಟಿಸಿದ ಕಾಂಗ್ರೆಸ್

ಬೆಂಗಳೂರಿನಲ್ಲಿ ಆರಂಭವಾದ ಪೋಸ್ಟರ್ ಸಮರ ಇದೀಗ ಶಿವಮೊಗ್ಗ ಜಿಲ್ಲೆಗೂ ವ್ಯಾಪಿಸಿದ್ದು, ತಡರಾತ್ರಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಅವರ ನಿವಾಸ ಹಾಗೂ ಜಿಲ್ಲಾ ಬಿಜೆಪಿ ಕಚೇರಿಗೆ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Congress Poster War Spreads to Shivamogga: Posters Against BY Vijayendra Pasted at Residence and BJP Office
ಶಿವಮೊಗ್ಗ ಜಿಲ್ಲೆಗೂ ವ್ಯಾಪಿಸಿದ ಪೋಸ್ಟರ್ ವಾರ್Online Desk
Updated on: 

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಾಗ, ಏಕವಚನದಲ್ಲಿ "ಈ ನನ್ನ ಮಕ್ಕಳು ಕಾಂಗ್ರೆಸ್‌ನವರು ಇದ್ದಾರಲ್ಲಾ..." ಎಂದು ಮಾತನಾಡಿದ್ದರು. ಇದರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಪೋಸ್ಟರ್ ಸಮರ ಆರಂಭಿಸಿದ್ದರು. ತದನಂತರ ವಿಜಯೇಂದ್ರ ಕಾಂಗ್ರೆಸ್ ನಾಯಕರ ಕ್ಷಮೆಯಾಚಿಸಿದ್ದು ಆಯ್ತು. ಆದರೂ ವಿವಾದ ತಣ್ಣಗಾದಂತೆ ಕಾಣುತ್ತಿಲ್ಲ. ಯಾಕಂದ್ರೆ, ಬೆಂಗಳೂರಿನ ನಂತರ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕೂಡ ಪೋಸ್ಟರ್ ಸಮರ ಆರಂಭಿಸಿದ್ದು, ವಿಜಯೇಂದ್ರ ಅವರ ನಿವಾಸ ಹಾಗೂ ಜಿಲ್ಲಾ ಬಿಜೆಪಿ ಕಚೇರಿಗೆ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ವಿಜಯೇಂದ್ರ ಹೇಳಿದ್ದೇನು?

ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳ ಕಾಯ್ದೆಯನ್ನು ಹೈಕೋರ್ಟ್ ರದ್ದುಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, "ಈ ನನ್ ಮಕ್ಕಳು ಕಾಂಗ್ರೆಸ್ ನವರು ಇದ್ದಾರಲ್ಲಾ..." ಎಂದು ಏಕವಚನದಲ್ಲೇ ಲೇವಡಿ ಮಾಡಿದ್ದರು. ಅವರ ಈ ಆಕ್ರೋಶಭರಿತ ಹೇಳಿಕೆಯ ವಿಡಿಯೋ ಮತ್ತು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇದರ ತರುವಾಯು, ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ನಾನು ಯಾವುದೇ ಉದ್ದೇಶಪೂರ್ವಕವಾಗಿ ಆ ಪದಗಳನ್ನು ಬಳಸಲಿಲ್ಲ ಎಂದು ಸ್ಪಷ್ಟನೆ ನೀಡಿರುವ ವಿಜಯೇಂದ್ರ, ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದರು. ಆದರೂ ವಿವಾದ ತಣ್ಣಗಾದಂತೆ ಕಾಣುತ್ತಿಲ್ಲ.! ಯಾಕಂದ್ರೆ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕೂಡ, ವಿಜಯೇಂದ್ರ ಅವರ ನಿವಾಸ ಹಾಗೂ ಜಿಲ್ಲಾ ಬಿಜೆಪಿ ಕಚೇರಿಗೆ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Congress Poster War Spreads to Shivamogga: Posters Against BY Vijayendra Pasted at Residence and BJP Office
ಕಾಂಗ್ರೆಸ್ ಆಕ್ರೋಶಕ್ಕೆ ಮಣಿದ ವಿಜಯೇಂದ್ರ: ಪೋಸ್ಟರ್ ಸಮರ ಬೆನ್ನಲ್ಲೇ 'ಈ ನನ್ನ ಮಕ್ಕಳು' ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕ್ಷಮೆಯಾಚನೆ; Video

ಪೋಸ್ಟರ್‌ನಲ್ಲಿ ಏನಿದೆ?

ಕಾಂಗ್ರೆಸ್ ಕಾರ್ಯಕರ್ತರು ಅಂಟಿಸಿರುವ ಪೋಸ್ಟರ್‌ಗಳಲ್ಲಿ ಕಾಂಗ್ರೆಸ್ ಮತ್ತು ಮಹಾತ್ಮ ಗಾಂಧೀಜಿಯವರ ಚಿತ್ರವಿದ್ದು, "ಕಾಂಗ್ರೆಸ್ ಮಕ್ಕಳು ಗಾಂಧೀಜಿ ಮಕ್ಕಳು, ಬಿಜೆಪಿ ಮಕ್ಕಳು ಕಳ್ನನ್ ಮಕ್ಕಳು" ಎಂಬ ಕಟು ಬರಹಗಳನ್ನು ಮುದ್ರಿಸಿ ಆಕ್ರೋಶ ಹೊರಹಾಕಲಾಗಿದೆ.

ಎಲ್ಲೆಲ್ಲಿ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ?

ಶಿವಮೊಗ್ಗದಲ್ಲಿರುವ ಬಿ.ವೈ. ವಿಜಯೇಂದ್ರ ಅವರ ಕೌಟುಂಬಿಕ ನಿವಾಸವಾದ 'ಮೈತ್ರಾದೇವಿ' ಮನೆಯ ಕಾಂಪೌಂಡ್ ಗೋಡೆ ಮತ್ತು ಪಿಲ್ಲರ್‌ಗಳಿಗೆ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಇದರೊಂದಿಗೆ, ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯ ಮುಂಭಾಗದ ಗೋಡೆಗಳು ಹಾಗೂ ಕಚೇರಿಯ ಬಾಗಿಲಿನ ಶಟ್ಟರ್‌ಗಳಿಗೂ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್‌ಗಳನ್ನು ಅಂಟಿಸಿ ಸವಾಲು ಹಾಕಿದ್ದಾರೆ.

ಈ ಬೆನ್ನಲ್ಲೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪೊಲೀಸ್ ಇಲಾಖೆ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ದೊಡ್ಡಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದು, ಪೋಸ್ಟರ್ ಅಂಟಿಸಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Congress Poster War Spreads to Shivamogga: Posters Against BY Vijayendra Pasted at Residence and BJP Office
RTGS ಚೋರ್ ಬಿವೈ ವಿಜಯೇಂದ್ರ: 'ಈ ನನ್ ಮಕ್ಕಳು' ಎಂದಿದ್ದಕ್ಕೆ BYV ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪೋಸ್ಟರ್ ಸಮರ; Video

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X