

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಸಂವಿಧಾನ ದಿನ ಆಚರಣೆ ಮಾಡಲು ಮಹದೇವಪ್ಪ ಯೋಜನೆ ರೂಪಿಸಿದ್ದರು. ಆದರೆ, ಇದೇ ವೇಳೆ ಸರ್ಕಾರದ ವತಿಯಿಂದಲೂ ಕಾರ್ಯಕ್ರಮ ನಡೆಸುವ ಕುರಿತು ಚರ್ಚೆಗಳು ನಡೆದಿದ್ದರಿಂದ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ನಡುವೆ ಭಿನ್ನಮತ ಮೂಡಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ತೀವ್ರಗೊಂಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹದೇವಪ್ಪ, "ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ರೀತಿಯ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ
ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ನಮ್ಮಿಬ್ಬರ ಸ್ನೇಹ ಮತ್ತು ಒಡನಾಟ ದೀರ್ಘಕಾಲದ್ದಾಗಿದ್ದು, ರಾಜಕೀಯವಾಗಿ ಬೇರೆ ಬೇರೆ ಸಿದ್ಧಾಂತಗಳ ಹಿನ್ನೆಲೆಯಿಂದ ಬಂದಿದ್ದರೂ ವೈಯಕ್ತಿಕವಾಗಿ ನಮ್ಮ ನಡುವೆ ಯಾವುದೇ ಮನಸ್ತಾಪವಿಲ್ಲ. ನಮ್ಮ ಸ್ನೇಹವೇನಿದ್ದರೂ ಬದಲಾಗದ ಒಂದು ಬಾಂಧವ್ಯ ಎಂದು ಸ್ಪಷ್ಟಪಡಿಸಿದ ಮಹದೇವಪ್ಪ, ಸಿದ್ದರಾಮಯ್ಯನವರನ್ನು ಒಬ್ಬ ಪ್ರಾಮಾಣಿಕ ರಾಜಕಾರಣಿ ಎಂದು ಬಣ್ಣಿಸಿದ್ದಾರೆ. ಇದೆ ವೇಳೆ, ತಾವು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಸರ್ಕಾರಿ ಮಟ್ಟದಲ್ಲಿ ಸಂವಿಧಾನ ದಿನಾಚರಣೆಯನ್ನು ಜಾರಿಗೆ ತಂದಿದ್ದನ್ನು ಮತ್ತು ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮವನ್ನು ರೂಪಿಸಿದ್ದನ್ನು ವಿವರಿಸಿದರು.
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ, "ನಮ್ಮ ತಂದೆ (ಸಿದ್ದರಾಮಯ್ಯ) ಹಾಗೂ ಮಹದೇವಪ್ಪ ಅವರ ವರ ನಡುವೆ 40 ವರ್ಷಗಳ ಸುದೀರ್ಘ ಒಡನಾಟವಿದ್ದು, ಸಣ್ಣಪುಟ್ಟ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮೂಡುವುದು ಸಹಜ, ಆದರೆ ಅವುಗಳನ್ನು ಈಗಾಗಲೇ ಬಗೆಹರಿಸಲಾಗಿದೆ" ಎಂದು ತಿಳಿಸಿದ್ದರು.
ಸಿದ್ದು-ಮಹದೇವಪ್ಪ ಭಿನ್ನಾಭಿಪ್ರಾಯಕ್ಕೆ ಕಾರಣವೇನು?
ಮೈಸೂರಿನಲ್ಲಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ 'ಸಂವಿಧಾನ ದಿನಾಚರಣೆ' ಕಾರ್ಯಕ್ರಮ ನಡೆಸಲು ಹೆಚ್.ಸಿ. ಮಹದೇವಪ್ಪ ಸಿದ್ಧತೆ ನಡೆಸಿದ್ದರು. ಆದರೆ, ಈ ಕಾರ್ಯಕ್ರಮದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೂರ್ವಭಾವಿಯಾಗಿ ಸಂಪೂರ್ಣ ಮಾಹಿತಿ ತಲುಪದ ಕಾರಣ ಉಭಯ ನಾಯಕರ ನಡುವೆ ಅಸಮಾಧಾನ ಮೂಡಲು ಕಾರಣವಾಗಿತ್ತು. ಇದರೊಂದಿಗೆ, ಹಳೇ ಮೈಸೂರು ಭಾಗದ ಶಾಸಕರೊಂದಿಗೆ ಸಿದ್ದರಾಮಯ್ಯ ನಡೆಸಿದ ಕೆಲವು ಆಂತರಿಕ ಸಭೆಗಳು ಹಾಗೂ ರಾಜಕೀಯ ನಡೆಗಳು ಇಬ್ಬರ ನಡುವಿನ ಇಗೋ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ ಎಂಬ ಚರ್ಚೆಗಳು ಕೂಡ ತೀವ್ರಗೊಂಡಿದ್ದವು. ಅದರಂತೆ, ಈ ಇಬ್ಬರು ಹಿರಿಯ ನಾಯಕರ ಮುನಿಸು ಶಮನಗೊಳಿಸಲು ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಮಹದೇವಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಸುದೀರ್ಘ ಮಾತುಕತೆ ನಡೆಸಿದ್ದರು.