'ಸ್ಟೇ ತರ್ಬಾರ್ದಿತ್ತು, ಫೈಟ್ ಮಾಡ್ಬೇಕಿತ್ತು': ಮೈಸೂರಿನಲ್ಲಿ ಸಿದ್ದರಾಮಯ್ಯ ಭೇಟಿ ಮಾಡಿ ರಮೇಶ್ ಜಾರಕಿಹೊಳಿ ಗೌಪ್ಯ ಮಾತುಕತೆ !

ಮೈಸೂರಿನಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಮೇಶ್ ಜಾರಕಿಹೊಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಗೌಪ್ಯ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
Ramesh Jarakiholi
ರಮೇಶ್ ಜಾರಕಿಹೊಳಿ
Updated on: 

ಮೈಸೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸದ್ದು ಮಾಡುತ್ತಿರುವ ಸ್ಟಿಂಗ್ ಕಾರ್ಯಾಚರಣೆ ಭಾಗವಾಗಿ ವಿಡಿಯೊ ಹೊರಬಿದ್ದಿದೆ ಎಂಬ ಊಹಾಪೋಹಗಳ ನಡುವೆ, ಮಾಜಿ ಸಿಎಂ ಸಿದ್ದರಾಮಯ್ಯ ನ್ಯಾಯಾಲಯದಿಂದ ತಡೆಯಾಜ್ಞೆ ತರದೆ ಧೈರ್ಯವಾಗಿ ಎದುರಿಸಿ ಹೋರಾಡಬೇಕಿತ್ತು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಮೇಶ್ ಜಾರಕಿಹೊಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಗೌಪ್ಯ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

Ramesh Jarakiholi
'8 ವರ್ಷ CM ಆಗಿದ್ದ ಸಿದ್ದರಾಮಯ್ಯ‌ರನ್ನು‌ ಈ ಗತಿಗೆ ತಂದು ನಿಲ್ಲಿಸಿದ್ದೀರಿ, ಸ್ಟಿಂಗ್ ಆಪರೇಷನ್ ಪ್ರಕರಣ CBI ತನಿಖೆಗೆ ಒಪ್ಪಿಸಬೇಕು': ಹೆಚ್.ಡಿ ಕುಮಾರಸ್ವಾಮಿ

ತಮ್ಮ ಭೇಟಿಯ ವಿವರ ನೀಡಲು ನಿರಾಕರಿಸಿದ ಜಾರಕಿಹೊಳಿ, ಸಿದ್ದರಾಮಯ್ಯ ಯಾವ ಪಕ್ಷದಲ್ಲಿದ್ದರೂ ಅವರು ನಮ್ಮ ನಾಯಕರು. ನಾನು ಈಗ ಆ ಸ್ಟಿಂಗ್ ವಿಚಾರವಾಗಿ ಹೆಚ್ಚು ಮಾತನಾಡುವುದಿಲ್ಲ. ನಾನು ಬೇರೆಯದೇ ವಿಚಾರವಾಗಿ ಅವರನ್ನು ಮಾತನಾಡಿಸಲು ಬಂದಿದ್ದೆ. ಇದು ಖಾಸಗಿ ಭೇಟಿ” ಎಂದಷ್ಟೇ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com