ಕುಮಾರಸ್ವಾಮಿಯೇ ಸ್ಟಿಂಗ್ ಆಪರೇಷನ್ ಸೂತ್ರಧಾರಿ: ಸಿದ್ದರಾಮಯ್ಯ ಬಗ್ಗೆ ಇದ್ದಕ್ಕಿದ್ದ ಹಾಗೆ ಕನಿಕರ ಹೇಗೆ ಬಂತು? ಜಮೀರ್ ಅಹ್ಮದ್

ಈ ಪ್ರಕರಣದ ಹಿಂದೆ ಕುಮಾರಸ್ವಾಮಿ ಅವರೇ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ತನಿಖೆ ಮಾಡಿ ಎಂದು ಕುಮಾರಸ್ವಾಮಿಗೆ ವಹಿಸಿದ್ಯಾ?
Siddaramaiah- Minister- BZ Zameer Ahmed Khan
ಸಿಎಂ ಸಿದ್ದರಾಮಯ್ಯ- ಸಚಿವ ಜಮೀರ್ ಅಹ್ಮದ್ ಖಾನ್online desk
Updated on: 

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಕುಮಾರಸ್ವಾಮಿಗೆ ಇದ್ದಕ್ಕಿದ್ದ ಹಾಗೆ ಕನಿಕರ ಹೇಗೆ ಬಂದು ಎಂದು ಜಮೀರ್ ಅಹ್ಮದ್ ಪ್ರಶ್ನಿಸಿದ್ದಾರೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಇತ್ತೀಚಿನ ರಾಜಕೀಯ ನಡೆಗಳನ್ನು ಪ್ರಶ್ನಿಸಿದರು. ಈ ಪ್ರಕರಣದ ಹಿಂದೆ ಕುಮಾರಸ್ವಾಮಿ ಅವರೇ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ತನಿಖೆ ಮಾಡಿ ಎಂದು ಕುಮಾರಸ್ವಾಮಿಗೆ ವಹಿಸಿದ್ಯಾ? ಎಂದು ಪ್ರಶ್ನಿಸಿದ ಅವರು ತನಿಖೆ ಸಂಸ್ಥೆಗಳು ಸೂಕ್ತವಾದ ರೀತಿಯಲ್ಲಿ ತನಿಖೆ ನಡೆಸಿದರೆ ಎಲ್ಲವೂ ಬಯಲಾಗುತ್ತದೆ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕುಮಾರಸ್ವಾಮಿ ಮಾತನಾಡುತ್ತಿರುವುದನ್ನು ಉಲ್ಲೇಖಿಸಿದ ಜಮೀರ್ ಅಹ್ಮದ್ ಖಾನ್, ಹಿಂದೆ ಇಬ್ಬರೂ ನಾಯಕರು ಪರಸ್ಪರ ಟೀಕೆ ಮಾಡುತ್ತಿದ್ದುದನ್ನು ನೆನಪಿಸಿದರು. ಇದೀಗ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಕುಮಾರಸ್ವಾಮಿ ಕಾಳಜಿ ವ್ಯಕ್ತಪಡಿಸುತ್ತಿರುವುದರ ಹಿಂದಿನ ಕಾರಣವೇನು ಎಂದು ಪ್ರಶ್ನಿಸಿದರು.

ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಈಗಾಗಲೇ ಕಾನೂನುಬದ್ಧವಾಗಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಹೀಗಿರುವಾಗ, ತನಿಖೆಯ ಬಗ್ಗೆ ಕುಮಾರಸ್ವಾಮಿ ಪ್ರಶ್ನೆಗಳನ್ನು ಎತ್ತುತ್ತಿರುವುದನ್ನು ಜಮೀರ್ ಟೀಕಿಸಿದರು.

Siddaramaiah- Minister- BZ Zameer Ahmed Khan
'8 ವರ್ಷ CM ಆಗಿದ್ದ ಸಿದ್ದರಾಮಯ್ಯ‌ರನ್ನು‌ ಈ ಗತಿಗೆ ತಂದು ನಿಲ್ಲಿಸಿದ್ದೀರಿ, ಸ್ಟಿಂಗ್ ಆಪರೇಷನ್ ಪ್ರಕರಣ CBI ತನಿಖೆಗೆ ಒಪ್ಪಿಸಬೇಕು': ಹೆಚ್.ಡಿ ಕುಮಾರಸ್ವಾಮಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com