ಸ್ಟಿಂಗ್ ಮಾಡಿರೋನು ಡಿಕೆಶಿ ಬಲಗೈ ಬಂಟ: ಖಾಸಗಿ ಮಾಧ್ಯಮದ ಮುಖ್ಯಸ್ಥನ ಜೊತೆ ಕೆಲಸ ಮಾಡುತ್ತಿದ್ದ ವಿಕ್ಕಿ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು; HDK

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಿಟ್ಟರೆ ಯಾವ ನಾಯಕರಿದ್ದಾರೆ ಓಟ್ ತರಲು. ಇವಾಗ ಅವರನ್ನು ಮನೆಯಲ್ಲಿ ಕೂರಿಸಲಾಗಿದೆ. ಸಿದ್ದರಾಮಯ್ಯ ಅವರ ಶಕ್ತಿ ವಿರುದ್ಧ ನಮ್ಮ ಹೋರಾಟ ಇತ್ತು. ಅಂತಹ ವ್ಯಕ್ತಿಯ ವರ್ಚಸ್ಸನ್ನು ನಾವು ಹಾಳು ಮಾಡಿಲ್ಲ,
H D Kumaraswamy and D K Shivakumar
ಹೆಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್
Updated on: 

ಬೆಂಗಳೂರು: ಸಿದ್ದರಾಮಯ್ಯರನ್ನು ಬಿಟ್ಟರೆ ಮತ ಸೆಳೆಯೋ ನಾಯಕರು ಕಾಂಗ್ರೆಸ್‌ನಲ್ಲಿ ಯಾರಿದ್ದಾರೆ? ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಪರವಾಗಿ ಮಮತೆ ಯಾಕೆ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದರು.

ಸ್ಟಿಂಗ್ ಆಪರೇಷನ್ ಜೆಡಿಎಸ್ ರೂಪಿಸಿದ ಸಂಚಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಿಟ್ಟರೆ ಯಾವ ನಾಯಕರಿದ್ದಾರೆ ಓಟ್ ತರಲು. ಇವಾಗ ಅವರನ್ನು ಮನೆಯಲ್ಲಿ ಕೂರಿಸಲಾಗಿದೆ. ಸಿದ್ದರಾಮಯ್ಯ ಅವರ ಶಕ್ತಿ ವಿರುದ್ಧ ನಮ್ಮ ಹೋರಾಟ ಇತ್ತು. ಅಂತಹ ವ್ಯಕ್ತಿಯ ವರ್ಚಸ್ಸನ್ನು ನಾವು ಹಾಳು ಮಾಡಿಲ್ಲ, ಬದಲಾಗಿ ನೀವು ಹಾಳು ಮಾಡುತ್ತಿರುವುದು. ಸಿದ್ದರಾಮಯ್ಯ ಅವರ ವರ್ಚಸ್ಸು ಮುಗಿಸಲು ಯತ್ನಿಸುತ್ತಿರುವರು ನೀವು ಎಂದು ಡಿಕೆ ಶಿವಕುಮಾರ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ ನಡೆಸಿದರು.

ಕರ್ನಾಟಕಕ್ಕೆ ಉದ್ಯಮಿಗಳು ಬರಲು ಭಯ ಬೀಳ್ತೀದ್ದಾರೆ ಎಂದು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಆರೋಪಿಸಿದರು. ಕೇಂದ್ರ ಕೈಗಾರಿಕೆ ಸಚಿವರಾಗಿ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿ ಎನ್ನುತ್ತಾರೆ ಸಿಎಂ. ಆದರೆ, ಉದ್ಯಮಿಗಳಿಗೆ ಕರ್ನಾಟಕಕ್ಕೆ ಹೋಗಿ ಎಂದರೆ ಕೈಮುಗಿಯುತ್ತಾರೆ. ಹಿಂದೆ ಕರ್ನಾಟಕಕ್ಕೆ ಉದ್ಯಮಿಗಳು ಬರುತ್ತಿದ್ದರು, ಆದರೆ ಇವಾಗ ಯಾರೂ ಬರುತ್ತಿಲ್ಲ. ಕರ್ನಾಟಕ ಎಂದರೆ ಉದ್ಯಮಿಗಳು ಭಯ ಬೀಳುತ್ತಾರೆ. 974 ಅರ್ಜಿಗಳಿಗೆ ಇನ್ನೂ ಕ್ಲಿಯರೆನ್ಸ್ ನೀಡಿಲ್ಲ ಕರ್ನಾಟಕದಲ್ಲಿ ಎಂದು ಆರೋಪಿಸಿದರು. ಹಾಗಿರುವಾಗ ಯಾಕಾಗಿ ಕರ್ನಾಟಕಕ್ಕೆ ಉದ್ಯಮಿಗಳು ಬರುತ್ತಾರೆ? ಎಂದು ಪ್ರಶ್ನಿಸಿದರು.

ನಿಮ್ಮನ್ನು ಮುಖ್ಯಮಂತ್ರಿ ಎಂದು ಒಪ್ಪಲ್ಲ ಎಂದು ಡಿಕೆಶಿಗೆ ಎಚ್‌ಡಿಕೆ ತಿರುಗೇಟು ನೀಡಿದರು. ನಿಮ್ಮ ಬಗ್ಗೆ ಬರೆದಿರುವ ಪುಸ್ತಕ ಓದಿದರೆ ನಿಮ್ಮನ್ನು ಸಿಎಂ ಎಂದು ಯಾರೂ ಒಪ್ಪಲ್ಲ ಎಂದ ಅವರು, ಪತ್ರಿಕಾಗೋಷ್ಠಿಯಲ್ಲಿ ಡಿಕೆಶಿ ವಿರುದ್ಧದ ಪುಸ್ತಕ ಪ್ರದರ್ಶನ ಮಾಡಿದರು. ಸಿಎಂಗೆ ಪತ್ರ ಬರೆದ ವಿಚಾರವಾಗಿ ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.

H D Kumaraswamy and D K Shivakumar
ಪುತ್ತೂರು ಟಿಕೆಟ್ ಪಡೆಯಲು ಬ್ಲ್ಯಾಕ್‌ಮೇಲ್‌ ಯತ್ನ: ಸಿದ್ದರಾಮಯ್ಯ ಸ್ಟಿಂಗ್ ನಲ್ಲಿ ಕಾಂಗ್ರೆಸ್ ನವರ ಕೈವಾಡ; ಯತೀಂದ್ರ ಹೊಸ ಬಾಂಬ್

ಪತ್ರಿಕೆಯಲ್ಲಿ ಮತ್ತೊಂದು ಮಾಹಿತಿ ನೋಡಿದೆ, ಖಾಸಗಿ ಮಾಧ್ಯಮದ ಮುಖ್ಯಸ್ಥನ ಜೊತೆ ಕೆಲಸ ಮಾಡುತ್ತಿದ್ದ ವಿಕ್ಕಿ ಎಂಬ ವ್ಯಕ್ತಿ ಅನುಮಾಸ್ಪದವಾಗಿ ಸತ್ತಿದ್ದಾನೆ. ಪೊಲೀಸರು ಯುಡಿಆರ್ ಮಾಡಿ‌ದ್ದು, ಅಸಹಜ ಸಾವು ಅಂತಿದ್ದಾರೆ. ಸುಮ್ಮನೆ ಜೆಡಿಎಸ್ ಹೆಸರು ಹೇಳೋದಿಲ್ಲ.12 ಸ್ಟಿಂಗ್ ವಿಡಿಯೋ ಇದ್ಯಂತೆ, ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಇದರ ಬಗ್ಗೆ ಹೇಳಿದ್ದಾರೆ. ಇಷ್ಟೆಲ್ಲಾ ಆರೋಪ ಇರೋ ವ್ಯಕ್ತಿಯನ್ನ ಸುಮ್ಮನೇ ಹೊರಗೆ ಬಿಟ್ಟಿದ್ದೀರಾ ಎಂದು ಕುಮಾರಸ್ವಾಮಿ ಗುಡುಗಿದ್ರು.

ಸ್ಟಿಂಗ್ ಆಪರೇಷನ್‌ನಲ್ಲಿ ಕಾಣಿಸಿಕೊಂಡ ಕೃಪಾ ಆಳ್ವಾ ಕಾಂಗ್ರೆಸ್ ನವರು. 2011 ರಲ್ಲಿ ಆದ ಘಟನೆಯಂತೆ. ಯಾಕಪ್ಪ 2023 ಆ ಹೆಣ್ಣುಮಗಳನ್ನ ಕೂರಿಸಿಕೊಂಡು ರಲ್ಲಿ ಸ್ಟಿಂಗ್ ಅಪರೇಷನ್ ಮಾಡುದ್ರಿ? ಆದರೆ, ನಮ್ಮ ಪಕ್ಷದ ಕಾರ್ಯಕರ್ತರಿಗೆ ನೋಟಿಸ್ ಕೊಡ್ತಾರೆ. ಯಾಕೆ ಆ ಹೆಣ್ಣುಮಗಳನ್ನ ಕರೆದುಕೊಂಡು ಬಂದು ಹೇಳ್ತಿಯಾ ಹೇಳ್ತಿಯಾ ಅಂತ ಯಾಕೆ ಸ್ಟಿಂಗ್ ಮಾಡಿದ್ರು? ಇದರ ಸತ್ಯ ಹೊರಗೆ ತರ್ತಾರಾ ಹೋಮ್ ಮಿನಿಸ್ಟರ್? ಎಂದು ಪ್ರಶ್ನಿಸಿದರು.

ಸ್ಟಿಂಗ್ ಆಪರೇಷನ್​ನನ್ನು ಜೆಡಿಎಸ್ ಸಂಚು ಅಂತಾರೆ, ಮಾನ ಮರ್ಯಾದೆ ಇದ್ಯಾ? ಇದು ನಮ್ಮ‌ ಸಂಚಾ? ಸಿದ್ದರಾಮಯ್ಯ ಬಿಟ್ಟರೇ ವೋಟ್ ತರೋಕೆ ನಿಮ್ಮಲ್ಲಿ ಯಾವ ನಾಯಕ ಇದ್ದಾರಾ? ಸಿದ್ದರಾಮಯ್ಯ ಅವರನ್ನ ಮನೇಲಿ‌ ಕೂರಿಸಿದ್ದೀರಿ. ನಮ್ಮ ಹೋರಾಟ ಸಿದ್ದರಾಮಯ್ಯ ಶಕ್ತಿ ವಿರುದ್ಧ ಇದ್ದಿದ್ದು, ನಿಮ್ಮ ವಿರುದ್ಧ ಅಲ್ಲ. ಸಿದ್ದರಾಮಯ್ಯ ವರ್ಚಸ್ಸನ್ನ ಸಿಎಂ ಹಾಳು ಮಾಡಿದ್ದಾರೆ

ಡಿಕೆ ಶಿವಕುಮಾರ್ ಹಾಗೂ ಆ ವ್ಯಕ್ತಿಯ ಫೋನ್​ಗಳನ್ನ ಇಟ್ಕೊಂಡ್ರೆ ಎಲ್ಲಾ ಸತ್ಯ ಹೊರಬರುತ್ತೆ. ಸಿದ್ದರಾಮಯ್ಯ ವರ್ಚಸ್ಸು ಹಾಳು ಮಾಡಿ ಕಾಂಗ್ರೆಸ್ ಮುಗಿಸಲು ಹೊರಟಿದ್ದೀರಿ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com