'ಮೊಹಬ್ಬತ್ ಕಿ ದುಕಾನ್' ಈಗ 'ಸ್ಟಿಂಗ್ ಆಪರೇಷನ್ ಕಿ ದುಕಾನ್' ಆಯ್ತಾ?: ಕಾಂಗ್ರೆಸ್ ಕಾಲೆಳೆದ BJP

ನಿಮ್ಮದೇ ಸಂಪುಟದ ಸಚಿವರು ಆಂತರಿಕ ಬ್ಲ್ಯಾಕ್‌ಮೇಲ್ ಮತ್ತು ವಿಶ್ವಾಸದ್ರೋಹದ ಜಾಲವನ್ನು ಬಹಿರಂಗಪಡಿಸುತ್ತಿರುವುದು ನಿಮ್ಮ ಆಡಳಿತ ಬುಡಮೇಲಾಗಿದೆ ಎಂಬುದನ್ನು ತೋರಿಸುತ್ತದೆ. ನಿಮ್ಮ ದುರಾಸೆ ಮತ್ತು ಸಂಚುಗಳ ಭಾರವೇ ನಿಮ್ಮನ್ನು ಕುಸಿಯುವಂತೆ ಮಾಡುತ್ತಿದೆ.
Rahul gandhi
ರಾಹುಲ್ ಗಾಂಧಿ
Updated on: 

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾಂಗ್ರೆಸ್‌ನವರೇ ಕುಟುಕು ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಆರೋಪ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಕಾಂಗ್ರೆಸ್ ಕುರಿತು ವ್ಯಂಗ್ಯವಾಗಿದೆ.

ರಾಹುಲ್ ಗಾಂಧಿಯವರ "ಮೊಹಬ್ಬತ್ ಕಿ ದುಕಾನ್" ಘೋಷಣೆಯು ಈಗ "ಸ್ಟಿಂಗ್ ಆಪರೇಷನ್ ಕಿ ದುಕಾನ್" (ಬ್ಲ್ಯಾಕ್‌ಮೇಲ್ ಹಾಗೂ ರಹಸ್ಯ ಚಿತ್ರೀಕರಣದ ಅಂಗಡಿ) ಆಗಿ ಬದಲಾಗಿದೆಯೇ ಎಂದು ಬಿಜೆಪಿ ಲೇವಡಿ ಮಾಡಿದೆ.

ಸಚಿವ ಡಾ. ಯತೀಂದ್ರ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ನ್ನು ಟೀಕಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ರಾಹುಲ್ ಗಾಂಧಿ ಅವರ ‘ಮೊಹಬ್ಬತ್ ಕಿ ದುಕಾನ್‌’ ಘೋಷಣೆಯನ್ನು ಲೇವಡಿ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರೇ, ನಿಮ್ಮ ಮೊಹಬ್ಬತ್ ಕಿ ದುಕಾನ್ ಘೋಷಣೆ ಈಗ ಸ್ಟಿಂಗ್ ಆಪರೇಷನ್ ಕಿ ದುಕಾನ್ ಆಗಿದೆಯೇ? ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್‌ನ್ನು ಲೇವಡಿ ಮಾಡಿದ್ದಾರೆ.

Rahul gandhi
ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಗೋಡ್ಸೆ, ನಿಜವಾದ ದೇಶಭಕ್ತರಾಗಿದ್ದರೆ ಸತ್ಯ ಒಪ್ಪಿಕೊಳ್ಳಿ; BJPಗೆ ಬಿ.ಕೆ. ಹರಿಪ್ರಸಾದ್ ಸವಾಲು

ಕರ್ನಾಟಕದ ರಾಜಕೀಯ ನೈತಿಕತೆಯ ಪಾತಾಳಕ್ಕೆ ಕುಸಿದಿದೆ. ಆಡಳಿತಾರೂಢ ಕಾಂಗ್ರೆಸ್ ನಾಯಕರೇ ಈ ಹೀನ ಕೃತ್ಯದ ಹಿಂದಿನ ರೂವಾರಿಗಳು. ಸರ್ಕಾರದ ಆಡಳಿತ ಸ್ತಬ್ಧವಾಗಿರುವಾಗ, ಕಾಂಗ್ರೆಸ್ ಸಚಿವರು ರಹಸ್ಯ ಕುಟುಕು ಕಾರ್ಯಾಚರಣೆಗಳನ್ನು ಅಸ್ತ್ರವಾಗಿ ಬಳಸುವುದು, ಸುಲಿಗೆ ಜಾಲ ನಡೆಸುವುದು ಹಾಗೂ ಟಿಕೆಟ್ ಪಡೆಯಲು ಮತ್ತು ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಪಕ್ಷದ ಸದಸ್ಯರನ್ನೇ ಬ್ಲ್ಯಾಕ್‌ಮೇಲ್ ಮಾಡುವುದು ಬಯಲಾಗಿದೆ ಎಂದು ದೂರಿದ್ದಾರೆ.

ಸರ್ಕಾರವು ಅಗ್ಗದ ಮಟ್ಟದ ರಾಜಕೀಯ ಪ್ರಹಸನವನ್ನು ಮೂಕಪ್ರೇಕ್ಷಕನಂತೆ ನೋಡುತ್ತಿದೆ ಎಂದು ಟೀಕಿಸಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಅಶೋಕ್ ಅವರು, ನಿಮ್ಮದೇ ಸಂಪುಟದ ಸಚಿವರು ಆಂತರಿಕ ಬ್ಲ್ಯಾಕ್‌ಮೇಲ್ ಮತ್ತು ವಿಶ್ವಾಸದ್ರೋಹದ ಜಾಲವನ್ನು ಬಹಿರಂಗಪಡಿಸುತ್ತಿರುವುದು ನಿಮ್ಮ ಆಡಳಿತ ಬುಡಮೇಲಾಗಿದೆ ಎಂಬುದನ್ನು ತೋರಿಸುತ್ತದೆ. ನಿಮ್ಮ ದುರಾಸೆ ಮತ್ತು ಸಂಚುಗಳ ಭಾರವೇ ನಿಮ್ಮನ್ನು ಕುಸಿಯುವಂತೆ ಮಾಡುತ್ತಿದೆ. ಪತನದ ಕ್ಷಣಗಣನೆ ಆರಂಭವಾಗಿದೆ, ನಿಮ್ಮ ದಿನಗಳು ಮುಗಿಯುತ್ತಿವೆ ಎಂದು ಟೀಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com