ಸೆಲ್ಫಿ ವಿಡಿಯೋ ರವಾನಿಸಿದ ಜಿಎಸ್ ಎಲ್ ವಿ ಮಾರ್ಕ್ 3!

ಸೋಮವಾರ ನಭಕ್ಕೆ ಜಿಗಿದ್ದಿದ್ದ ಭಾರತದ ಅತೀ ದೊಡ್ಡ ಉಡಾವಣಾ ವಾಹಕ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ನ ಸೆಲ್ಫಿ ವಿಡಿಯೋವನ್ನು ಇಸ್ರೋ ಬಿಡುಗಡೆ ಮಾಡಿದ್ದು, ಜಿಸ್ಯಾಟ್ 19 ಉಪಗ್ರಹವನ್ನು ಹೊತ್ತು ನಭಕ್ಕೆ ಹಾರಿದ ಜಿಎಸ್ ಎಲ್ ಮಾರ್ಕ್ 3 ನೌಕೆಯ ಇಡೀ ಪ್ರಕ್ರಿಯೆ ವಿಡಿಯೋದಲ್ಲಿ ದಾಖಲಾಗಿದೆ.
ಜಿಎಸ್ ಎಲ್ ವಿ ಮಾರ್ಕ್ 3 ವಿಡಿಯೋ
ಜಿಎಸ್ ಎಲ್ ವಿ ಮಾರ್ಕ್ 3 ವಿಡಿಯೋ

ನವದೆಹಲಿ: ಸೋಮವಾರ ನಭಕ್ಕೆ ಜಿಗಿದ್ದಿದ್ದ ಭಾರತದ ಅತೀ ದೊಡ್ಡ ಉಡಾವಣಾ ವಾಹಕ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ನ ಸೆಲ್ಫಿ ವಿಡಿಯೋವನ್ನು ಇಸ್ರೋ ಬಿಡುಗಡೆ ಮಾಡಿದ್ದು, ಜಿಸ್ಯಾಟ್ 19 ಉಪಗ್ರಹವನ್ನು ಹೊತ್ತು ನಭಕ್ಕೆ  ಹಾರಿದ ಜಿಎಸ್ ಎಲ್ ಮಾರ್ಕ್ 3 ನೌಕೆಯ ಇಡೀ ಪ್ರಕ್ರಿಯೆ ವಿಡಿಯೋದಲ್ಲಿ ದಾಖಲಾಗಿದೆ.

ಈ ವಿಡಿಯೋದಲ್ಲಿ ಅರೆಗೆಂಪು ಬಣ್ಣದಲ್ಲಿರುವ 200 ಟನ್ ತೂಕದ ಬೂಸ್ಟರ್ ಗಳು ಬೆಂಕಿ ತಗುಲಿಕೊಂಡು ನೌಕೆಯಿಂದ ಬೇರ್ಪಟ್ಟು ಭೂಮಿಗೆ ಬೀಳುತ್ತಿರುವ ದೃಶ್ಯ ಮತ್ತು ರಾಕೆಟ್ ಜಿಸ್ಯಾಟ್ ಉಪಗ್ರಹವನ್ನು ಕಕ್ಷೆಗೆ ಸೇರಿಸಿರುವ  ದೃಶ್ಯಾವಳಿಗಳನ್ನು ಸೆರೆಹಿಡಿದು ಭೂಮಿಗೆ ಕಳುಹಿಸಲಾಗಿದೆ. ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಗಂಟೆಗೆ 36 ಸಾವಿರ ಕಿ.ಮೀ ವೇಗದಲ್ಲಿ ಚಲಿಸಿದ್ದು, ಜಿಸ್ಯಾಟ್ ಉಪಗ್ರಹವನ್ನು ನಿಗದಿತ ಕಕ್ಷೆಯಲ್ಲಿ ಯಶಸ್ವಿಯಾಗಿ ಸೇರಿಸಿದೆ.

ಇದಕ್ಕೂ ಮೊದಲು ಇದೇ ಇಸ್ರೋ ಪಿಎಸ್ ಎಲ್ ವಿ ರಾಕೆಟ್ ಮೂಲಕ ಬರೊಬ್ಬರಿ 104 ಉಪಗ್ರಹಗಳನ್ನು ಏಕಾಕಲಕ್ಕೆ ಉಡಾವಣೆ ಮಾಡಿ ಇತಿಹಾಸ ಬರೆದಿತ್ತು.  ಇಸ್ರೋದ ಬಹು ಉದ್ದೇಶಿತ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ  ಈ ಜಿಎಸ್ ಎಲ್ ವಿ ಮಾರ್ಕ್ 3 ನೌಕೆ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.

ಜಿಎಸ್ ಎಲ್ ವಿ ಮಾರ್ಕ್ 3-ಡಿ1/ಜಿಸ್ಯಾಟ್ 19 ಯೋಜನೆ ಉಡಾವಣೆಯ ಸಂಪೂರ್ಣ ವಿಡಿಯೋ ಇಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com