ಭಾರತದಲ್ಲಿ ಹೋಮ್, ಹೋಮ್ ಮಿನಿ ಸ್ಮಾರ್ಟ್ ಸ್ಪೀಕರ್ ಬಿಡುಗಡೆ ಮಾಡಿದ ಗೂಗಲ್

ಭಾರತದಲ್ಲಿ ಅಮೆಜಾನ್ ಇಕೋ ಸ್ಮಾರ್ಟ್ ಸ್ಪೀಕರ್ ಗೆ ಸೆಡ್ಡು ಹೊಡೆಯಲು ಮುಂದಾಗಿರುವ ಗೂಗಲ್, ಹೋಮ್ ಮತ್ತು ಹೋಮ್...
ಹೋಮ್ ಸ್ಮಾರ್ಟ್ ಸ್ಪೀಕರ್
ಹೋಮ್ ಸ್ಮಾರ್ಟ್ ಸ್ಪೀಕರ್
ನವದೆಹಲಿ: ಭಾರತದಲ್ಲಿ ಅಮೆಜಾನ್ ಇಕೋ ಸ್ಮಾರ್ಟ್ ಸ್ಪೀಕರ್ ಗೆ ಸೆಡ್ಡು ಹೊಡೆಯಲು ಮುಂದಾಗಿರುವ ಗೂಗಲ್, ಹೋಮ್ ಮತ್ತು ಹೋಮ್ ಮಿನಿ ಎಂಬ ಎರಡು ಸ್ಮಾರ್ಟ್‌ ಸ್ಪೀಕರ್‌ ಗಳನ್ನು ಮಂಗಳವಾರ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. 
ಇಂದು ನಡೆದ ಕಾರ್ಯಕ್ರಮದಲ್ಲಿ ಗೂಗಲ್ ವಾಯ್ಸ್ ಅಸಿಸ್ಟೆಂಟ್ ನೊಂದಿಗೆ ಕಾರ್ಯನಿರ್ವಹಿಸುವ ಗೂಗಲ್ ಹೋಮ್ ಮತ್ತು ಹೋಮ್ ಮಿನಿ ಸ್ಮಾರ್ಟ್‌ ಸ್ಪೀಕರ್ ಗಳನ್ನು ಬಿಡುಗಡೆ ಮಾಡಲಾಗಿದೆ.
ಹೋಮ್ ಸ್ಪೀಕರ್ ಬೆಲೆ 9,999 ರುಪಾಯಿ ಆಗಿದ್ದು, ಹೋಮ್ ಮಿನಿ ಬೆಲೆ 4,499 ರುಪಾಯಿ ನಿಗದಪಡಿಸಲಾಗಿದೆ. ಈ ಎರಡು ಸ್ಪೀಕರ್ ಗಳು ಫ್ಲಿಪ್‌ಕಾರ್ಟ್‌ ಹಾಗೂ 750 ರಿಟೇಲ್ ಸ್ಟೋರ್ ಗಳಲ್ಲಿ ಲಭ್ಯವಿವೆ ಎಂದು ಗೂಗಲ್ ಉತ್ಪನ್ನ ನಿರ್ವಹಣಾ ಉಪಾಧ್ಯಕ್ಷ ಮತ್ತು ಗೃಹ ಉತ್ಪನ್ನಗಳ ಜನರಲ್ ಮ್ಯಾನೇಜರ್ ರಿಶಿ ಚಂದ್ರ ಅವರು ಹೇಳಿದ್ದಾರೆ. ಅಲ್ಲದೆ ಶೀಘ್ರದಲ್ಲಿ ಈ ಸ್ಮಾರ್ಟ್ ಸ್ಪೀಕರ್ ಗಳಿಗೆ ಹಿಂದಿ ಭಾಷೆ ಸೇರಿಸುವುದಾಗಿ ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಅಮೆಜಾನ್ ಸ್ಮಾರ್ಟ್‌ ಸ್ಪೀಕರ್ ಗಳಿಗೆ ಇದು ಸೆಡ್ಡು ಹೊಡೆಯಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಗೂಗಲ್ ಹೊಮ್ ಮತ್ತು ಹೋಮ್ ಮಿನಿ ಸ್ಮಾರ್ಟ್‌ ಸ್ಪೀಕರ್ ಖರೀದಿಸುವವರಿಗೆ ಜಿಯೋ ಫೈ ರೌಟರ್ ಉಚಿತವಾಗಿ ದೊರೆಯಲಿದೆ ಎಂದಿದ್ದಾರೆ. 
ಗೂಗಲ್ ಹೋಮ್‌ನಲ್ಲಿ ಪ್ಲೇ ಬ್ಯಾಕ್ ಕಂಟ್ರೋಲ್, ವಾಲ್ಯೂಮ್ ಮತ್ತು ಗೂಗಲ್ ಅಸಿಸ್ಟೆಂಟ್ ಆಕ್ಟಿವ್ ಬಟನ್ ಕಾಣಬಹುದಾಗಿದೆ. ಆಪ್ ಮೂಲಕವೂ ಕಾರ್ಯನಿರ್ವಹಿಸಲಿದೆ. ವೈಫೈನಿಂದ ಮಾತ್ರವೇ ಕಾರ್ಯನಿರ್ವಹಿಸಲಿದ್ದು, ಬ್ಲೂಟೂತ್ ಇಲ್ಲ. ಇದನ್ನು ಟಿವಿ ಮತ್ತು ಕ್ರೊಮ್ ಕಾಸ್ಟ್ ನೊಂದಿಗೆಯೂ ಕನೆಕ್ಟ್ ಮಾಡಬಹುದಾಗಿದೆ. ಮನೆಯಲ್ಲಿರುವ ಇತರೆ ಸ್ಮಾರ್ಟ್ ವಸ್ತುಗಳೊಂದಿಗೆ ಸಿಂಕ್ ಆಗಲಿದೆ. 
ಗೂಗಲ್ ಹೊಮ್ ಮಿನಿ, ಹೆಸರೇ ಹೇಳುವಂತೆ ಇದು ಚಿಕ್ಕ ಸ್ಪೀಕರ್ ಆಗಿದ್ದು, ಇದು ಆಪ್ ಮೂಲಕ ಕಾರ್ಯನಿರ್ವಹಿಸಲಿದ್ದು, ಅನೇಕ ಕಾರ್ಯಗಳಿಗೆ ಸಹಾಯಕಾರಿಯಾಗಲಿದೆ. ಇದು ಸಹ ಸ್ಮಾರ್ಟ್ ಡಿವೈಸ್‌ಗಳೊಂದಿಗೆ ಕನೆಕ್ಟ್ ಆಗಲಿದೆ. ಇದನ್ನು ಟಿವಿ ಮತ್ತು ಕ್ರೊಮ್ ಕಾಸ್ಟ್ ನೊಂದಿಗೆಯೂ ಕನೆಕ್ಟ್ ಮಾಡಬಹುದಾಗಿದೆ ಎಂದು ರಿಶಿ ಚಂದ್ರ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com