ಪ್ರತೀ ಎರಡು ತಿಂಗಳಗೊಂದು ಉಡಾವಣೆ: ಇಸ್ರೋ ಅಧ್ಯಕ್ಷ ಕೆ ಶಿವನ್

ಪ್ರತೀ ಎರಡು ತಿಂಗಳಿಗೊಂದು ನೌಕೆಯನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡುವ ಕುರಿತು ಯೋಜನೆ ಹಾಕಿಕೊಂಡಿದ್ದೇವೆ ಎಂದು ಇಸ್ರೋ ಅಧ್ಕ್ಷಕ್ಷ ಕೆ ಶಿವನ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಪ್ರತೀ ಎರಡು ತಿಂಗಳಿಗೊಂದು ನೌಕೆಯನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡುವ ಕುರಿತು  ಯೋಜನೆ ಹಾಕಿಕೊಂಡಿದ್ದೇವೆ ಎಂದು ಇಸ್ರೋ ಅಧ್ಕ್ಷಕ್ಷ ಕೆ ಶಿವನ್ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ ಶಿವನ್ ಅವರು, ಇಸ್ರೊ 2019 ರ ಜನವರಿಯಿಂದ ತಿಂಗಳಿಗೆ ಎರಡು ಬಾಹ್ಯಾಕಾಶ ನೌಕೆಗಳ ಉಡಾವಣೆ ಮಾಡಲಿದೆ. ಈ ವರ್ಷದ ಡಿಸೆಂಬರ್‌ ವರೆಗೆ 9, 2019 ರಲ್ಲಿ 22 ಮತ್ತು 2020 ರಲ್ಲಿ 19 ಸೇರಿ ಒಟ್ಟು 50 ಉಡಾವಣೆಗಳು ನಡೆಯಲಿವೆ ಎಂದು ತಿಳಿಸಿದರು. ಅಂತೆಯೇ ವಿವಿಧ ಉದ್ದೇಶಗಳಿಗಾಗಿ ಉಡಾವಣೆ ಮಾಡಲು ಒಟ್ಟು 50 ಉಪಗ್ರಹಗಳನ್ನು ಸಿದ್ಧಪಡಿಸಿಟ್ಟಕೊಳ್ಳಲಾಗಿದೆ. ಕಕ್ಷೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಲವು ಉಪಗ್ರಹಗಳ ಕಾರ್ಯಾಚರಣೆ ಅವಧಿಯು ಮುಗಿದಿದ್ದು, ಅವುಗಳನ್ನು ಬದಲಿಸಲು ಹೊಸ ಉಪಗ್ರಹಗಳನ್ನು ಉಡಾವಣೆ ಮಾಡಬೇಕಾಗಿದೆ. ಕಾರ್ಟೋಸ್ಯಾಟ್‌ ಮತ್ತು ಭೂವೀಕ್ಷಣಾ ಸರಣಿಯ ಉಪಗ್ರಹಗಳು ಇದರಲ್ಲಿ ಪ್ರಮುಖವಾದವು ಎಂದು ಶಿವನ್‌ ತಿಳಿಸಿದರು.
72 ಗಂಟೆಗಳಲ್ಲಿ ನಿರ್ಮಿಸಿ ನಭಕ್ಕೆ ಹಾರಿಸಬಲ್ಲ ಉಡ್ಡಯನ ವಾಹನ!
ಮೂರರಿಂದ ಆರು ಜನ ಸೇರಿ, 72 ರಿಂದ 74 ಗಂಟೆಗಳಲ್ಲಿ ಪುಟ್ಟ ಬಾಹ್ಯಾಕಾಶ ಉಡಾವಣಾ ವಾಹನ ತಯಾರಿಸಿ, ಸಣ್ಣ ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಹೊಸ ಯುಗ ಇಸ್ರೊದಲ್ಲಿ ಆರಂಭವಾಗಲಿದೆ. ದೇಶ ವಿದೇಶಗಳಿಂದ ಸಣ್ಣ ಉಪಗ್ರಹಗಳ ಉಡಾವಣೆಗೆ ಭಾರಿ ಬೇಡಿಕೆ ಇದೆ. ಅತ್ಯಂತ ಕಡಿಮೆ ಖರ್ಚು ಮತ್ತು ಅವಧಿಯಲ್ಲಿ ಉಪಗ್ರಹ ಉಡಾವಣೆ ಮಾಡುವ ಈ ತಂತ್ರಜ್ಞಾನದ (ಎಸ್‌ಎಸ್‌ಎಲ್‌ವಿ) ಪರೀಕ್ಷೆಯನ್ನು ಇಸ್ರೊ 2019 ರಲ್ಲಿ  ನಡೆಸಲಿದೆ ಎಂದು ಕೆ ಶಿವನ್ ಮಾಹಿತಿ ನೀಡಿದರು. ಟ
ಇದರ ಮೊದಲ ಹಾರಾಟ ಮುಂದಿನ ವರ್ಷ ಮೇ ಅಥವಾ ಜೂನ್‌ ನಲ್ಲಿ ನಡೆಯಲಿದೆ. ಇದರ ನಿರ್ಮಾಣ ಮತ್ತು ಉಡಾವಣಾ ವೆಚ್ಚ ಅತ್ಯಂತ ಕಡಿಮೆ. ಈಗ ಬಳಸುತ್ತಿರುವ ಜಿಎಸ್‌ಎಲ್‌ವಿಯಂತಹ ನೌಕೆಗಳಿಗಿಂತ ಹತ್ತನೇ ಒಂದರಷ್ಟು ಮೊತ್ತದಲ್ಲಿ ನಿರ್ಮಿಸಬಹುದು. ಇದರ ಒಟ್ಟು ತೂಕ 500– 600 ಕೆ.ಜಿಗಳು. ಭೂ ಕಕ್ಷೆಯ ಒಳ ಆವರಣಕ್ಕೆ ಉಡಾವಣೆ ಮಾಡಿ ಉಪಗ್ರಹಗಳನ್ನು ನೆಲೆಗೊಳಿಸಬಹುದು. ಇದು ಹೊಸ ತಲೆಮಾರಿನ ಉಡಾವಣಾ ವಾಹನವಾಗಲಿದ್ದು, ಇದರ ವಿನ್ಯಾಸ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಅಂತರ ಗ್ರಹ ಯಾನಕ್ಕೆ ಮುಹೂರ್ತ ನಿಗದಿ!
ಸೂರ್ಯ ಮತ್ತು ಚಂದ್ರ ಭಾರತೀಯರ ಪರಂಪರೆ ಜತೆಗೆ ಹಾಸು ಹೊಕ್ಕಾಗಿದೆ. ಪುರಾಣ, ಕಲೆ, ಕಾವ್ಯ ಮತ್ತು ತತ್ವಶಾಸ್ತ್ರಗಳಲ್ಲೂ ಗಾಢವಾದ ಅನುಬಂಧ ಹೊಂದಿವೆ. ಬಾಹ್ಯಾಕಾಶ ವಿಜ್ಞಾನದಲ್ಲಿ ದಾಪುಗಾಲಿಡುತ್ತಿರುವ ಭಾರತ ವಿಶ್ವದ ಪ್ರಬಲ ರಾಷ್ಟ್ರಗಳೊಂದಿಗೆ ಅಂತರ ಗ್ರಹಯಾನ ಕ್ಷೇತ್ರದಲ್ಲಿ ಪೈಪೋಟಿಗೆ ಇಳಿದಿದೆ. 2019 ರಲ್ಲಿ ಚಂದ್ರ (ಉಪಗ್ರಹ) ಮತ್ತು ಸೂರ್ಯನ(ನಕ್ಷತ್ರ) ಬಳಿ ಬಾಹ್ಯಾಕಾಶ ನೌಕೆ ಕಳುಹಿಸಲಿದೆ. ಜನವರಿ 3 ಕ್ಕೆ 'ಚಂದ್ರಯಾನ–2' ಮತ್ತು ಡಿಸೆಂಬರ್‌ನಲ್ಲಿ 'ಆದಿತ್ಯ1' ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡುವುದಾಗಿ ಇಸ್ರೊ ಅಧ್ಯಕ್ಷ ಕೆ.ಶಿವನ್‌ ಭಾನುವಾರ ಪ್ರಕಟಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com