ಚಂದ್ರಯಾನ 2: ಚಂದ್ರನ ಮೇಲ್ಮೈ ಮೇಲೆ ಇಳಿಯುವ ಕೊನೆಯ ಕ್ಷಣದಲ್ಲೂ ಲ್ಯಾಂಡರ್ ಸಂಪರ್ಕದಲ್ಲಿತ್ತು..!

ಇಸ್ರೋ ಘೋಷಣೆ ಮಾಡಿದಂತೆ ವಿಕ್ರಮ್ ಆರ್ಬಿಟರ್ ಚಂದ್ರನ ಮೇಲ್ಮೈ ಮೇಲಿಂದ 2.1 ಕಿಮೀ ಅಂತರದಲ್ಲಿದ್ದಾಗ ಸಂಪರ್ಕ ಕಡಿತವಾಗಿರಲ್ಲಿಲ್ಲ. ಬದಲಿಗೆ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಕೊನೆಯ ಕ್ಷಣದಲ್ಲೂ ಲ್ಯಾಂಡರ್ ಸಂಪರ್ಕದಲ್ಲಿತ್ತು ಎಂಬ ರೋಚಕ ಮಾಹಿತಿ ಲಭ್ಯವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇಡೀ ವಿಶ್ವವೇ ನಿಬ್ಬೆರಗಾಗಿ ಎದುರು ನೋಡುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2ಕುರಿತಂತೆ ದಿನಕ್ಕೊಂದು ರೋಚಕ ಮಾಹಿತಿ ಲಭ್ಯವಾಗುತ್ತಿದ್ದು, ಈ ಹಿಂದೆ ಇಸ್ರೋ ಘೋಷಣೆ ಮಾಡಿದಂತೆ ವಿಕ್ರಮ್ ಆರ್ಬಿಟರ್ ಚಂದ್ರನ ಮೇಲ್ಮೈ ಮೇಲಿಂದ 2.1 ಕಿಮೀ ಅಂತರದಲ್ಲಿದ್ದಾಗ ಸಂಪರ್ಕ ಕಡಿತವಾಗಿರಲ್ಲಿಲ್ಲ. ಬದಲಿಗೆ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಕೊನೆಯ ಕ್ಷಣದಲ್ಲೂ ಲ್ಯಾಂಡರ್ ಸಂಪರ್ಕದಲ್ಲಿತ್ತು ಎಂಬ ರೋಚಕ ಮಾಹಿತಿ ಲಭ್ಯವಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಇಸ್ರೋ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಅನ್ವಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲಿನ 335 ಅಡಿಗಳವರೆಗೆ ಇಳಿಯುವಾಗಲೂ  ಸಂಪರ್ಕದಲ್ಲಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಲು ಇಸ್ರೋ ಮಾಡಿದ್ದ ಅಷ್ಟೂ ಯೋಜನೆಗಳು ವಿಫಲವಾಗಿರಬಹುದು ಎಂದೂ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದು, ಸಾಫ್ಟ್ ಲ್ಯಾಂಡಿಂಗ್ ಕೈಗೊಂಡಿದ್ದ ಯೋಜನೆಗಳು ಕೊನೆಯ ಕ್ಷಣದಲ್ಲಿ ವಿಫಲವಾಗಿವೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋದ ಹಿರಿಯ ಸಲಹೆಗಾರ ಮತ್ತು ಹಿರಿಯ ರಾಡಾರ್ ಸ್ಯಾಟೆಲೈಟ್ ವಿಜ್ಞಾನಿ ತಪನ್ ಮಿಶ್ರಾ ಅವರು, ಇಡೀ ಯೋಜನೆಯಲ್ಲಿ ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವ ಆ 15 ನಿಮಿಷಗಳ ಕಾರ್ಯಾಚರಣೆಯೇ ನಿರ್ಣಾಯಕವಾಗಿತ್ತು.  ಚಂದ್ರಯಾನ-2 ಮಿಷನ್ ನಲ್ಲಿ ಇಸ್ರೋ ತೆಗೆದುಕೊಂಡಿರುವ ರಿಸ್ಕ್ ಪ್ರಮಾಣ ಬಹುದೊಡ್ಡದಿತ್ತು. ಏಕೆಂದರೆ ಚಂದ್ರನ ಮೇಲೆ ನೌಕೆಯ ಸಾಫ್ಟ್ ಲ್ಯಾಂಡಿಂಗ್ ನ ಸಕ್ಸಸ್ ರೇಟ್ ಜಾಗತಿಕ ಮಟ್ಟದಲ್ಲಿ ಶೇ.37 ಅಷ್ಟೇ. ಇಸ್ರೋ ಅಧ್ಯಕ್ಷರು ಹೇಳುವ ಪ್ರಕಾರ ವಿಜ್ಞಾನಿಗಳಿಗೆ ಈ ಬಾಹ್ಯಾಕಾಶ ನೌಕೆಯಲ್ಲಿ ಬಳಕೆ ಮಾಡಲಾಗಿರುವ 4 ಥ್ರಸ್ಟರ್ ಗಳು ಹಾಗೂ ಸೆನ್ಸರ್ ಗಳು ಹೊಸತಾದ ತಂತ್ರಜ್ಞಾನ.  ಸ್ವಯಂ ಚಾಲಿತ ಲ್ಯಾಂಡಿಂಗ್ ವೇಳೆ ಕೆಲಸ ಮಾಡುವ ಸೆನ್ಸರ್ ಗಳೇ ಈ 15 ನಿಮಿಷಗಳಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುವುದು. ಈ ಸೆನ್ಸರ್ ಗಳನ್ನು ಭೂಮಿಯ ವಾತಾವರಣದಲ್ಲಿ ಪರೀಕ್ಷಿಸಲಾಗಿದೆ. ಆದರೆ ಬಾಹ್ಯಾಕಾಶದಲ್ಲಿಯೂ ವಿಜ್ಞಾನಿಗಳ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಿತ್ತು. ಆದರೆ ಅದು ಸಾದ್ಯವಾಗಿಲ್ಲ, ಹೀಗಾಗಿ ಲ್ಯಾಂಡರ್ ಕ್ರಾಶ್ ಲ್ಯಾಂಡಿಂಗ್ ಆಗಿರಬಹುದು ಎಂದು ಹೇಳಿದ್ದಾರೆ.

ಅಂತೆಯೇ ವಿಕ್ರಮ್ ಲ್ಯಾಂಡರ್ ನಲ್ಲಿನ ಒಟ್ಟು ಐದು ದೊಡ್ಡ ಥ್ರಸ್ಛರ್ ಗಳ ಪೈಕಿ ಲ್ಯಾಂಡಿಂಗ್ ನಾಲ್ಕು ಥ್ರಸ್ಟರ್ ಗಳು ಉರಿದಿದ್ದು. ಒಂದು ಥ್ರಸ್ಟರ್ ಗೆ ಇಂಧನ ಪೂರೈಕೆ ಸ್ಥಗಿತವಾಗಿರುವ ಸಾದ್ಯತೆ ಇದೆ. ಇದೇ ಕಾರಣಕ್ಕೆ  ಬ್ರೇಕಿಂಗ್ ಸಿಸ್ಟಮ್ ಫೇಲ್ ಆಗಿರುವ ಸಾಧ್ಯತೆಯೂ ಇದೆ.  ಹೀಗಾಗಿ ಚಂದ್ರನ ಮೇಲ್ಮೈಗೆ ವಿಕ್ರಮ್ ಲ್ಯಾಂಡರ್ ಪ್ರವೇಶ ಮಾಡುತ್ತಿದ್ದಂತೆಯೇ ಅದು ನಿಂಯತ್ರಣ ತಪ್ಪಿ ಸುರುಳಿಯಾಕಾರಾದಲ್ಲಿ ಸುತ್ತಿ ಸುತ್ತಿ ಬಿದ್ದಿರುವ ಸಾಧ್ಯತೆ ಇದೆ. ಅಂತೆಯೇ ಇಡೀ ನೌಕೆಯಲ್ಲಿ ಅತ್ಯಂತ ದೊಡ್ಡದ ಭಾಗ ಎಂದರೆ ಅದು ಇಂಧನ ಟ್ಯಾಂಕ್. ನೌಕೆ ಸುರುಳಿಯಾಕಾರದಲ್ಲಿ ವೇಗವಾಗಿ ಸುತ್ತಿತ್ತಿದ್ದರಿಂದ ಥ್ರಸ್ಚರ್ ಗಳಿಗೆ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿ ಅದು ವಿಫಲವಾಗಿರಬುಹುದು ಎಂದು ತಪನ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ. 

ಮೂಲಗಳ  ಪ್ರಕಾರ ವಿಕ್ರಮ್ ಲ್ಯಾಂಡರ್ ನ ವೇಗ ಲ್ಯಾಂಡಿಂಗ್ ವೇಳೆ ಪ್ರತೀ ಗಂಟೆಗೆ 6000 ಕಿ.ಮೀನಷ್ಟಿತ್ತು, ಐದು ಥ್ರಸ್ಚರ್ ಗಳ ಪೈಕಿ ನಾಲ್ಕು ಥ್ರಸ್ಟರ್ ಗಳನ್ನು ಬಳಕೆ ಮಾಡಿ ಬ್ರೇಕ್ ಹಾಕಿದಾಗ ಆ ವೇಗ ಪ್ರತೀ ಗಂಟೆಗೆ 200 ಕಿಮೀ ಗೆ ಇಳಿದಿತ್ತಾದರೂ, ಈ ಪ್ರಕ್ರಿಯೆ ನಡೆಯುವ ಹೊತ್ತಿಗೆ ಸಮಯ ಮೀರಿತ್ತು. ಅಲ್ಲದೆ ಮಧ್ಯದ ಒಂದು ಥ್ರಸ್ಟರ್ ಕಾರ್ಯ ನಿರ್ವಹಣೆ ಸ್ಛಗಿತವಾಗಿತ್ತು. ಇದೂ ಕೂಡ ಲ್ಯಾಂಡರ್ ನ ಕ್ರಾಶ್ ಲ್ಯಾಂಡಿಂಗ್ ಕಾರಣ ಎಂದು ಹೇಳಬಹುದು ಎಂದು ಹೇಳಿದ್ದಾರೆ.

ಚಂದ್ರನ ಮೇಲ್ಮೈ ಮೇಲಿನ 400 ಮೀ ಅಂತರದಲ್ಲಿ ಲ್ಯಾಂಡರ್ ಬ್ರೇಕ್ ಅಳವಡಿಸಿದೆ ಎಂದರೆ ಅದು ಸಂಪರ್ಕದಲ್ಲಿತ್ತು ಎಂದೇ ಅರ್ಥವಲ್ಲವೇ ಎಂದು ತಪನ್ ಮಿಶ್ರಾ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com