ಕೋಕಾ ಕೋಲಾ ವೆಂಡಿಂಗ್ ಮೆಶಿನ್ ಸ್ಕರ್ಟ್

ಈ ಹುಡುಗಿಯರ ಉಡುಗೆ ಜಪಾನಿನ ಮಿಸ್ ಸುಕಿಯೋಕಾಳ ವಿಶಿಷ್ಟ ಕೊಡುಗೆ. ನಿಮ್ಮನ್ನು ಯಾರಾದರೂ ಪೋಲಿ ಪುಂಡರು ಹಿಂಬಾಲಿಸುತ್ತಿದ್ದಾರೆನ್ನಿ, ಬಟ್ಟೆಯನ್ನು ಉದ್ದಕ್ಕೆ ಬಿಚ್ಚಿದರೆ...
ಕೋಕಾ ಕೋಲಾ ವೆಂಡಿಂಗ್ ಮೆಶಿನ್ ಸ್ಕರ್ಟ್
ಕೋಕಾ ಕೋಲಾ ವೆಂಡಿಂಗ್ ಮೆಶಿನ್ ಸ್ಕರ್ಟ್

ಈ ಹುಡುಗಿಯರ ಉಡುಗೆ ಜಪಾನಿನ ಮಿಸ್ ಸುಕಿಯೋಕಾಳ ವಿಶಿಷ್ಟ ಕೊಡುಗೆ. ನಿಮ್ಮನ್ನು ಯಾರಾದರೂ ಪೋಲಿ ಪುಂಡರು ಹಿಂಬಾಲಿಸುತ್ತಿದ್ದಾರೆನ್ನಿ, ಬಟ್ಟೆಯನ್ನು ಉದ್ದಕ್ಕೆ ಬಿಚ್ಚಿದರೆ ಕೋಕಾ ಕೋಲಾ ವೆಂಡಿಂಗ್ ಮೆಶಿನ್ ನಂತೆ ಕಾಣುತ್ತದೆ

ನಿಮಗೆ ಜೋಕ್ ಎನಿಸಬಹುದು.ಆದರೆ ಇದು ಹುಡುಗರ ಕಣ್ಣಿಗೆ ಮಣ್ಣೆರಚುವ ತಂತ್ರವಾಗೇ ಸಿದ್ಧವಾದ ಉಡುಗೆ. ಆದರೆ ಬಟ್ಟೆ ವೆಂಡಿಂಗ್ ಮೆಶಿನ್ ಆಗುವಷ್ಟು ಸಮಯ ಸಿಗಬೇಕಷ್ಟೆ.

ಈಗಾಗಲೇ ಇಂಥ 20 ಬಟ್ಟೆಗಳು ಮಾರಾಟವೂ ಆಗಿವೆ. ಜಪಾನಿನ ಬೀದಿಗಳಲ್ಲಿ ವೆಂಡಿಂಗ್ ಮೆಷಿನ್ ಗಳು ರಾಶಿ ಇರುವುದರಿಂದ ಈ ಉಡುಗೆ ಜಪಾನಿಗೆ ಹೆಚ್ಚು ಸೂಟ್ ಆಗುತ್ತದೆ.

ಬೆಕ್ಕು ಕಣ್ಣು ಮುಚ್ಚಿ ನಿಂತರೆ ಜಗತ್ತಿಗೆ ಕಾಣಲ್ಲವೇ? ಯಾರಾದರೂ ಕೋಕಾ ಕೋಲಾಗಾಗಿ ವೆಂಡಿಂಗ್ ಮೆಶಿನ್ ಗೆ ಕಾಯ್ನ್ ಹಾಕಲು ಬರದಿದ್ದರೆ ಸಾಕಷ್ಟೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com