ಸೆಲ್ಫಿಗೆ ಕನ್ನಡದಲ್ಲಿ 'ತನ್ನಿ' ಅಂತಾರಂತೆ!

'ಸೆಲ್ಫಿ' ಎಂಬ ಪದ ಇತ್ತೀಚೆಗೆ ಆಕ್ಸ್ ಫರ್ಡ್ ನಿಘಂಟಿಗೆ ಅಧಿಕೃತ ಸೇರ್ಪಡೆಗೊಂಡು ವರ್ಷದ ಪದ ಎಂಬ ಖ್ಯಾತಿಗೂ ಪಾತ್ರವಾಯಿತು. ಇಂಥ ಪದಕ್ರಾಂತಿ ಈಗ ಇಂಗ್ಲಿಷ್‍ಗೆ ಮಾತ್ರ...
ಸೆಲ್ಫಿ
ಸೆಲ್ಫಿ
Updated on: 
'ಸೆಲ್ಫಿ' ಎಂಬ ಪದ ಇತ್ತೀಚೆಗೆ ಆಕ್ಸ್ ಫರ್ಡ್ ನಿಘಂಟಿಗೆ ಅಧಿಕೃತ ಸೇರ್ಪಡೆಗೊಂಡು ವರ್ಷದ ಪದ ಎಂಬ ಖ್ಯಾತಿಗೂ ಪಾತ್ರವಾಯಿತು. ಇಂಥ ಪದಕ್ರಾಂತಿ ಈಗ ಇಂಗ್ಲಿಷ್‍ಗೆ ಮಾತ್ರ ಸೀಮಿತವಾಗಿಲ್ಲ. ಕನ್ನಡ ದಲ್ಲೂ ಹೊಸ ಪದಗಳು ಸೃಷ್ಟಿಯಾಗುತ್ತಿವೆ. 
ಇಂಗ್ಲಿಷ್ ಪದಗಳಿಗೆ ಅತ್ಯಂತ ಸೂಕ್ತ ಎನಿಸಬಲ್ಲ ಅಚ್ಚ ಕನ್ನಡಾರ್ಥದ ಪದಗಳೂ ಸೃಷ್ಟಿಯಾಗುತ್ತಿವೆ. ಹಾಗೆ ಸೇರ್ಪಡೆಗೊಂಡ ಹೊಸತೊಂದು ಪದ 'ತನ್ನಿ'! 'ತನ್ನಿ' ಎಂಬುದು ಹೊಸ ಪದವಾ? 'ವಸ್ತುವನ್ನು ತರುವುದಕ್ಕೆ' ಹೇಳುವ ಪದವಲ್ಲವೇ ಎಂದು ಗೊಂದಲಕ್ಕೆ ಸಿಲುಕಬೇಡಿ. ಕನ್ನಡಕ್ಕೆ ಹನ್ನೆರಡು ಅರ್ಥ ಎಂಬ ನಾಣ್ಣುಡಿ ಇದೆ. ಈಗ ಹದಿಮೂರಾಯ್ತು ಅಂದುಕೊಳ್ಳಿ. 'ತನ್ನಿ' ಅಂದರೆ ನಮ್ಮ ನಿಮ್ಮೆಲ್ಲರ ಫೇವರಿಟ್ ಸೆಲ್ಫಿ ಪದದ ಕನ್ನಡ ಅನುವಾದ! ಈ ಬಗ್ಗೆ `ಬೆಂಗಳೂರು ಮಿರರ್' ವರದಿ ಪ್ರಕಟಿಸಿದೆ. 
ಕನ್ನಡ ಪದಕ್ರಾಂತಿಗೆ ತನ್ನಿ ಒಂದು ಉದಾಹರಣೆ ಅಷ್ಟೆ. ಫೇಸ್ ಬುಕ್ ನಲ್ಲಿ ಪದಾರ್ಥ ಚಿಂತಾಮಣಿ, ಪದಗುಟ್ಟು ಪದ ಪದ ಕನ್ನಡ ಪದಾನೆ ಹೀಗೆ ಹಲವು ಕನ್ನಡ ಗುಂಪುಗಳು ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಇವೆಲ್ಲವುಗಳ ಮೂಲ ಉದ್ದೇಶ ಕನ್ನಡ ಪದಭಂಡಾರವನ್ನು ಸಮೃದ್ಧಗೊಳಿಸುವುದಷ್ಟೆ. ಸೆಲ್ಫೀಗೆ ಸ್ವಂತಿ ಎಂಬ ಕನ್ನಡಾರ್ಥವನ್ನು ಪದಾರ್ಥ ಚಿಂತಾಮಣಿ ತಂಡ ಪರಿಯಿಸಿದ ಬೆನ್ನಲ್ಲಾ ಭಾಷಾ ತಜ್ಞ ಡಿ.ಎನ್.ಶಂಕರ ಬಟ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಪದ ಪದ ಕನ್ನಡ ಪದಾನೇ ಗುಂಪು ತನ್ನಿ ಎಂಬ ಪದ ಅನ್ವೇಷಿಸಿದೆ. ಇಂಥದ್ದೇ ಈಗಾಗಲೇ ಸುಮಾರು 48 ಸಾವಿರ ಪದಗಳನ್ನು ಹುಟ್ಟುಹಾಕಿರುವ ತಂಡ, ಪದನೆರಕೆ ಎಂಬ ಇಂಗ್ಲೀಷ್-ಕನ್ನಡ ನಿಘಂಟಿನ ಪ್ರಕಟಣೆಗೂ ಅಡಿಯಿಟ್ಟಿದೆ. 
ಇಲ್ಲಿ ಸಾಹಿತಿಗಳು ಭಾಷಾತಜ್ಞರು ಕನ್ನಡ ಉಪನ್ಯಾಸಕರಷ್ಟೇ ಅಲ್ಲದೆ, ಟೆಕ್ಕೀಗಳು, ತಾಂತ್ರಿಕ ರಂಗದಲ್ಲಿರುವವರೂ ಕನ್ನಡ ಭಾಷೆಯತ್ತ ಆಸಕ್ತಿ ತೋರುತ್ತಿದ್ದಾರೆ. ಸಂಸ್ಕೃತ ಮೂಲ ಅಲ್ಲದ ಅಚ್ಚ ಕನ್ನಡ ಪದಗಳನ್ನು ಸೃಷ್ಟಿಸುವ ಸವಾಲು ಸ್ವೀಕರಿಸಿ ಗೆದ್ದಿದೆ ಈ ತಂಡ. ಡೆಮೋಕ್ರಸಿ ಎಂಬ ಆಂಗ್ಲ ಪದಕ್ಕೆ ಪ್ರಜಾಪ್ರಭುತ್ವ ಎಂಬ ಕನ್ನಡಾರ್ಥ ಇದ್ದರೂ ಅದು ಸಂಸ್ಕೃತ ಮೂಲವೆಂದು ಅಚ್ಚಕನ್ನಡದ 'ಮಂದಿಯಾಡಳಿತ' ಎಂಬ ಪದ ಹುಟ್ಟುಹಾಕಿದ್ದಾರೆ. ಈ ಥರದ ಹಲವು ಪ್ರಯೋಗಗಳಾಗಿವೆ. ಹೊಸ ಪದ ನೀಡಲು ಸರ್ವ ಕನ್ನಡಿಗರನ್ನೂ ಪ್ರೋತ್ಸಾಹಿಸುತ್ತಿದ್ದಾರೆ. ಆದರೆ, ಯಾರ ಮೇಲೂ ಅದನ್ನು ಹೇರುತ್ತಿಲ್ಲ ಎಂಬುದು ವಿಶೇಷ. ಭರತ್ ಕುಮಾರ್ ಮತ್ತು ವಿವೇಕ್ ಶಂಕರ್ ಎಂಬಿಬ್ಬರು ಟೆಕ್ಕಿಗಳು ಶಂಕರಬಟ್‍ರ ಮೇಲ್ವಿಚಾರಣೆಯಲ್ಲಿ `ಪದನೆರಕೆ'ಯ ಸೃಷ್ಟಿಯಲ್ಲಿ ತೊಡಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com