ಅಣ್ಣಾಮಲೈ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಲು ಚೊ. ರಾಮಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿರುತ್ತದೆ. ಸಭೆಯಲ್ಲಿ ಅಂತಾರಾಷ್ಟ್ರೀಯ ವಿದ್ಯಮಾನ, ಅರ್ಥಶಾಸ್ತ್ರ, ರಾಜಕೀಯ ಹೀಗೆ ಚರ್ಚೆಗೆ ಬಂದ ಎಲ್ಲಾ ವಿಷಯಗಳ ಬಗೆಗಿನ ಪ್ರಶ್ನೆಗಳಿಗೂ ಚೊ. ರಾಮಸ್ವಾಮಿ ಸಮರ್ಥ ಉತ್ತರ ನೀಡಿದ್ದರು. ಇದನ್ನು ಗಮನಿಸಿದ ಸ್ನೇಹಿತರು ಲಘುಧಾಟಿಯಲ್ಲಿ, ಹಾಸ್ಯಭರಿತವಾಗಿ ನಿಮ್ಮನ್ನು ಏನೆಂದುಕೊಂಡಿದ್ದೀರಿ? ನಿಮಗೆ ಗೊತ್ತಿಲ್ಲದ ವಿಶಯಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿ ಎನ್ನುತ್ತಾರೆ. ಸ್ನೇಹಿತರ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿದ್ದ ಚೊ. ಒಂದು ವೇಳೆ ಸಭೆಯಲ್ಲಿ ಮಾತನಾಡಲು ಸಾಧ್ಯವಾಗದೇ ಇದ್ದರೆ ನಾನು ನನ್ನ ಸ್ವಂತ ಪತ್ರಿಕೆ ಮೂಲಕ ಅಭಿಪ್ರಾಯ ತಿಳಿಸುತ್ತೇನೆ ಎನ್ನುತ್ತಾರೆ. ಇದನ್ನೇ ಗಂಭೀರವಾಗಿ ಪರಿಗಣಿಸಿದ ಸ್ನೇಹಿತರು ಸ್ವಂತ ಪತ್ರಿಕೆ ಪ್ರಾರಂಭಿಸುವಂತೆ ಸವಾಲು ಹಾಕಿ ಚೊ. ರಾಮಸ್ವಾಮಿಯವರೊಂದಿಗೆ 5 ರೂ ಬೆಟ್ ಕಟ್ಟುತ್ತಾರೆ.