ಹಸಿದ ಹಾವಿನೊಂದಿಗೆ ಸೆಣಸಿ, ಮರಿ ಇಲಿಯನ್ನು ರಕ್ಷಿಸಿದ ತಾಯಿ ಇಲಿ

ಹಸಿದ ವಿಷ ಸರ್ಪವೊಂದು ತನ್ನ ಮರಿಯನ್ನು ಹೊತ್ತೊಯ್ಯುತ್ತಿದ್ದರಿಂದ ರೋಷಗೊಂಡ ತಾಯಿ ಇಲಿ ಹಾವಿನೊಂದಿಗೆ ಸೆಣಸಿ ಮರಿಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ...
ಇಲಿ ಮತ್ತು ಹಾವಿನ ನಡುವಿನ ಕಾಳಗದ ದೃಶ್ಯ
ಇಲಿ ಮತ್ತು ಹಾವಿನ ನಡುವಿನ ಕಾಳಗದ ದೃಶ್ಯ

ಹಸಿದ ವಿಷ ಸರ್ಪವೊಂದು ತನ್ನ ಮರಿಯನ್ನು ಹೊತ್ತೊಯ್ಯುತ್ತಿದ್ದರಿಂದ ರೋಷಗೊಂಡ ತಾಯಿ ಇಲಿ ಹಾವಿನೊಂದಿಗೆ ಸೆಣಸಿ ಮರಿಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಸ್ತೆ ಬದಿಯಲ್ಲಿ ಹಾವೊಂದು ಇಲಿ ಮರಿಯನ್ನು ತಿನ್ನಲು ಮುಂದಾಗಿತ್ತು. ಇದನ್ನು ಕಂಡ ತಾಯಿ ಇಲಿ ತನ್ನ ಪ್ರಾಣವನ್ನು ಲೆಕ್ಕಿಸದೇ 28 ಸೆಕೆಂಡ್ ಹಾವಿನ ಜತೆ ಕಾಳಗ ನಡೆಸಿ ಮರಿಯನ್ನು ರಕ್ಷಿಸಿದೆ.

ತಮ್ಮ ಮರಿಯನ್ನು ಕೊಚ್ಚಿಕೊಂಡು ಹೋಗುತ್ತಿದ್ದ ಹಾವಿನ ಮೇಲೆ ದಾಳಿ ಮಾಡಿದ ತಾಯಿ ಇಲಿ ಹಾವಿನ ಬಾಲವನ್ನು ಕಚ್ಚಿದೆ. ಇದರಿಂದ ಹಾವು ಬಾಯಲಿದ್ದ ಮರಿಯನ್ನು ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಪರಾರಿಯಾಗಿದೆ.

ಈ ದೃಶ್ಯವನ್ನು ವ್ಯಕ್ತಿಯೊಬ್ಬರು ಸೆರೆ ಹಿಡಿದು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದು, ತಾಯಿ ಇಲಿ ಸಾಹಸ ಜನರನ್ನು ಮೆಚ್ಚಿದ್ದಾರೆ. ಇನ್ನು ಈ ದೃಶ್ಯ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

ವಿಡಿಯೋ ಕೃಪೆ: Rojas Montecinos Evy

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com