ಭಾರತದ ಮೊದಲ ತಲೆಬುರುಡೆ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ, 4ರ ಬಾಲೆಗೆ ಮರುಜನ್ಮ ನೀಡಿದ ಪುಣೆ ವೈದ್ಯ ತಂಡ!

ನಾಲ್ಕು ವರ್ಷದ ಹೆಣ್ಣು ಮಗುವಿನ ಘಾಸಿಗೊಳಗಾದ ತಲೆಬುರುಡೆಯ ಶೇ .60 ಬಾಗವನ್ನು ಕಸಿ ಮಾಡಿ ಮಗುವಿಗೆ ಹೊಸ ಜೀವನ ನೀಡಲು ಪುಣೆ ವೈದ್ಯರು ಯಶಸ್ವಿಯಾಗಿದ್ದಾರೆ.
ಭಾರತದ ಮೊದಲ ತಲೆಬುರುಡೆ ಕಸಿ ಶಸ್ತ್ರಚಿಕಿತ್ಸೆ
ಭಾರತದ ಮೊದಲ ತಲೆಬುರುಡೆ ಕಸಿ ಶಸ್ತ್ರಚಿಕಿತ್ಸೆ
ಪುಣೆ: ನಾಲ್ಕು ವರ್ಷದ ಹೆಣ್ಣು ಮಗುವಿನ ಘಾಸಿಗೊಳಗಾದ ತಲೆಬುರುಡೆಯ ಶೇ .60 ಬಾಗವನ್ನು ಕಸಿ ಮಾಡಿ ಮಗುವಿಗೆ ಹೊಸ ಜೀವನ ನೀಡಲು ಪುಣೆ ವೈದ್ಯರು ಯಶಸ್ವಿಯಾಗಿದ್ದಾರೆ. ವಿಶೇಷವೆಂದರೆ ಇದು ಭಾರತದಲ್ಲಿ ನಡೆದ ಮೊದಲನೇ ತಲೆಬುರುಡೆ ಕಸಿ ಯಶಸ್ವೀ ಶಸ್ತ್ರಚಿಕಿತ್ಸೆಯಾಗಿದೆ.
ಕಳೆದ ವರ್ಷ ಮೇ 31 ರಂದು ಅಪಘಾತಕ್ಕೊಳಗಾದ ನಂತರ ನಾಲ್ಕು ವರ್ಷ ವಯಸ್ಸಿನ ಹುಡುಗಿಯ ತಲೆಬುರುಡೆಯು ತೀವ್ರ ಸ್ವರೂಪದ ಗಾಯಗಳಿಗೆ ಈಡಾಗಿತ್ತು.ಇದರಿಂದ ಸುಪ್ತಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಗೆ ಎರಡು ಮಹತ್ವದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ  ತಲೆಬುರುಡೆ ಕಸಿ ಮಾಡಲಾಗಿದೆ.ಇದೇ ಮೇ 18 ರಂದು ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ.
ಬಾಲಕಿಯ ಹಾನಿಗೊಳಗಾಗಿದ್ದ ತಲೆಬುರುಡೆಯ ಬಾಗಕ್ಕೆ ವಿಶೇಷವಾಗಿ ತಯಾರಿಸಲಾಗಿರುವ ಪಾಲಿಥಿಲೀನ್ (ಕೃತಕ) ಮೂಳೆ ಬದಲಿಯಾಗಿ ಜೋಡಿಸಲಾಗಿದೆ. ಅಮೆರಿಕಾ ಮೂಲದ ಸಂಸ್ಥೆಯೊಂದು ಈ ಪಾಲಿಥಿಲೀನ್ ಮೂಳೆಯನ್ನು ತಯಾರಿಸಿದ್ದು ನಿಖರವಾದ ಮಾನವ ತಲೆಬುರುಡೆಯಾಕಾರದ ಮೂಳೆಯನ್ನೇ ಈಕೆಗೆ ಜೋಡಿಸಲಾಗಿದೆ.
"ಸಾಮಾನ್ಯವಾಗಿ, ಕ್ಯಾನಿಯಲ್ ಮೂಳೆಯನ್ನು ತೆಗೆದು ಹಾಕ್ಕಿದಾಗ ಆ ಭಾಗವು ಊತಕ್ಕೊಳಗಾಗುತ್ತದೆ. ಆದರೆ ಬಾಲಕಿಯ ಕ್ಯಾನಿಯಲ್ ಮೂಳೆಯ ಸ್ಥಿರತೆಯ ಸ್ವಭಾವದಿಂದಾಗಿ ಮೊದಲುಇಗೆ ನಾವು ಈ ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಹಿಂದೇಟು ಹಾಕಿದ್ದೆವು. ಆದರೆ ಒಮ್ಮೆ ಮೂಳೆ ಬದಲಾವಣೆಯಾದ ಬಳಿಕ ಬಾಲಕಿ ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದಳು. ಹಾಗೆಯೇ ಬಹು ಬೇಗನೆ ಚೇತರಿಸಿಕೊಂಡಿದ್ದಾಳೆ. ಶಸ್ತ್ರಚಿಕಿತ್ಸೆ ನಡೆದು ಎರಡು ತಿಂಗಳ ಕಾಲ ಅವಳ ಮೇಲೆ ನಿಗಾ ವಹಿಸಲಾಗಿತ್ತು. ಬಳಿಕ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ." ನ್ಯೂರೋಸರ್ಜನ್ ವಿಶಾಲ್ ರೋಕೆಡೆ ಹೇಳಿದರು.
ಬಾಲಕಿ ಈಗ ಆರೋಗ್ಯವಾಗಿದ್ದು ಶಾಲೆಗೆ ಹೋಗಿ ಇತರೆ ಮಕ್ಕಳಂತೆಯೇ ಆಟವಾಡುತ್ತಿದ್ದಾಳೆ.ಎಂದು ಬಾಲಕಿ ತಾಯಿ ಹೇಳಿದ್ದಾರೆ. ಬಸ್ ಚಾಲಕರಾಗಿರುವ ಬಾಲಕಿಯ ತಂದೆ ಹಾಗೂ ಅವರ ಕುಟುಂಬವು ಕೊತ್ರುಡ್‌ನಲ್ಲಿ ನೆಲೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com