ಸಂಕಷ್ಟದ ಸ್ಥಿತಿಯಲ್ಲಿರುವ ಕೋವಿಡ್ ರೋಗಿಗಳು ಮತ್ತು ಲಭ್ಯ ಸಂಪನ್ಮೂಲಗಳ ನಡುವೆ ಸಂಪರ್ಕ ಸೇತುವಾದ ವಿದ್ಯಾರ್ಥಿಗಳು!

ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚು ವ್ಯಾಪಿಸುತ್ತಿದ್ದು, ಹೆಚ್ಚಾಗುತ್ತಿರುವ ಒತ್ತಡದಿಂದಾಗಿ ಆರೋಗ್ಯ ಮೂಲಸೌಕರ್ಯ ಕುಸಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 
ಸಂಕಷ್ಟದ ಸ್ಥಿತಿಯಲ್ಲಿ ರೋಗಿಗಳು-ಲಭ್ಯ ಸಂಪನ್ಮೂಲಗಳ ನಡುವೆ ಸಂಪರ್ಕ ಸೇತುವಾದ ವಿದ್ಯಾರ್ಥಿಗಳು!
ಸಂಕಷ್ಟದ ಸ್ಥಿತಿಯಲ್ಲಿ ರೋಗಿಗಳು-ಲಭ್ಯ ಸಂಪನ್ಮೂಲಗಳ ನಡುವೆ ಸಂಪರ್ಕ ಸೇತುವಾದ ವಿದ್ಯಾರ್ಥಿಗಳು!

ಬೆಂಗಳೂರು: ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚು ವ್ಯಾಪಿಸುತ್ತಿದ್ದು, ಹೆಚ್ಚಾಗುತ್ತಿರುವ ಒತ್ತಡದಿಂದಾಗಿ ಆರೋಗ್ಯ ಮೂಲಸೌಕರ್ಯ ಕುಸಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 

ಈ ಸಮಸ್ಯೆ ಒಂದೆಡೆಯಾದರೆ ಇರುವ ಸಂಪನ್ಮೂಲಗಳ ಬಗ್ಗೆ ಸೋಂಕಿನಿಂದ ಬಳಲುತ್ತಿರುವವರು ಹಾಗೂ ಅವರ ಸಂಬಂಧಿಕರಿಗೆ ಸೂಕ್ತ ಮಾಹಿತಿಯ ಲಭ್ಯತೆಯ ಕೊರತೆ ಮತ್ತೊಂದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಯುವಕರ ತಂಡವೊಂದು ರೋಗಿಗಳು-ಲಭ್ಯ ಸಂಪನ್ಮೂಲಗಳ ನಡುವೆ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸುತ್ತಾ, ಅಗತ್ಯವಿರುವವರಿಗೆ ಆಕ್ಸಿಜನ್, ಪ್ಲಾಸ್ಮಾ ದಾನಿಗಳು, ಆಂಬುಲೆನ್ಸ್ ಮುಂತಾದವುಗಳ ಬಗ್ಗೆ ಮಾಹಿತಿ ಒದಗಿಸುತ್ತಿದ್ದಾರೆ.

ದೆಹಲಿಯ ಲೇಡಿ ಶ್ರೀ ರಾಮ್ (ಎಲ್ಎಸ್ಆರ್) ಕಾಲೇಜಿನಲ್ಲಿ ಅಂತಿಮ ವರ್ಷದ ವ್ಯಾಸಂಗ  ಮಾಡುತ್ತಿರುವ ಆನ್ಯ ವಿಗ್ (21) ಕೋವಿಡ್ ಫೈಟರ್ಸ್ (ಇಂಡಿಯಾ) ಎಂಬ ವಾಟ್ಸ್ ಆಪ್ ಗ್ರೂಪ್ ಮೂಲಕ, ವಿವಿಧ ಆಸ್ಪತ್ರೆಗಳಲ್ಲಿ ಬೆಡ್ ಲಭ್ಯತೆ, ಆಕ್ಸಿಜನ್ ಲಭ್ಯತೆ, ಆಂಬುಲೆನ್ಸ್ ಗಳ ಕುರಿತ ಮಾಹಿತಿಯನ್ನು ಕಲೆಹಾಕಿ ಅದನ್ನು ಸಾಮಾಜಿಕ ಜಾಲತಾಣದ ಮೂಲಕ ಅಗತ್ಯವಿರುವವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. 

ಪ್ರಾರಂಭವಾಗಿದ್ದು ಹೇಗೆ?

"ಕೋವಿಡ್-19 ಕಾರಣದಿಂದಾಗಿ ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ಆಸ್ಪತ್ರೆ ಬೆಡ್ ಗಳು, ಪ್ಲಾಸ್ಮಾ, ಆಕ್ಸಿಜನ್, ಆಂಬುಲೆನ್ಸ್ ಕುರಿತ ಮಾಹಿತಿ ಕೇಳಿ ಪೋಸ್ಟ್ ಹಾಕುತ್ತಿದ್ದದ್ದನ್ನು ಕಂಡ ಆನ್ಯಾ ವಿಗ್  ರೋಗಿಗಳು ಹಾಗೂ ಅಗತ್ಯವಿರುವ ಜೀವ ರಕ್ಷಕಗಳ ನಡುವೆ ಸಂಪರ್ಕ ಸೇತುವಾಗಿರುವ ವ್ಯವಸ್ಥೆ ರೂಪಿಸಲು ಯತ್ನಿಸಿದೆವು. 

ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಗಳು ಹರಿದಾಡುತ್ತಿರುತ್ತವೆ. ಆದರೆ ಯಾರಿಗೂ  ಹೆಲ್ಪ್ ಲೈನ್ ಕುರಿತ ನಿಜವಾಗಿಯೂ ಸೂಕ್ತ ಮಾಹಿತಿ ಲಭ್ಯವಾಗುತ್ತದೆಯೋ ಇಲ್ಲವೋ ಗೊತ್ತಾಗುವುದಿಲ್ಲ. ಆದ ಕಾರಣ ನಾವು ಡಿಸ್ಕಾರ್ಡ್ (ಸಾಮಾಜಿಕ ಜಾಲತಾಣ)ಕಮ್ಯುನಿಟಿ ಮೂಲಕ ಅಗತ್ಯ ಮಾಹಿತಿಯನ್ನು ಒದಗಿಸಲು ತಂಡವನ್ನು ಸಿದ್ಧಪಡಿಸಿದೆವು, ಸಹಾಯಕ ಸಲಹೆಗಾರ ಹಾಗೂ ನನ್ನ ಸ್ನೇಹಿತ ಅರ್ನಬ್ ಜೊತೆಯಿಂದ ಇದು ಪ್ರಾರಂಭವಾಯಿತು. ಈಗ ಡಿಸ್ಕಾರ್ಡ್ ನ ಕಮ್ಯುನಿಟಿಯಲ್ಲಿ ದೇಶಾದ್ಯಂತ 4,000 ಕ್ಕೂ ಹೆಚ್ಚಿನ ಮಂದಿ ಇದ್ದು, ಪರಸ್ಪರ ಸಹಾಯ ಮಾಡುತ್ತಾ, ಅಗತ್ಯವಿರುವವರಿಗೆ ಸೂಕ್ತ ಮಾಹಿತಿ ಒದಗಿಸಲಾಗುತ್ತಿದೆ". ಎನ್ನುತ್ತಾರೆ ಆನ್ಯ

"ಹೆಚ್ಚು ಮಾಹಿತಿ ಲಭ್ಯವಾಗುವ ಕಾರಣ ಗೂಗಲ್ ಸ್ಪ್ರೆಡ್ ಶೀಟ್ ನಲ್ಲಿ ಸಂಪನ್ಮೂಲಗಳ ಮಾಹಿತಿಯನ್ನು ಸಂಗ್ರಹಿಸಿದ್ದೇವೆ, ಇದರಿಂದ ರಿಯಲ್ ಟೈಮ್ ಮಾಹಿತಿಯನ್ನು ಹೆಕ್ಕಿ ತೆಗೆದು ಟ್ವಿಟರ್, ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿಗಾಗಿ ಹುಡುಕುತ್ತಿರುವವರಿಗೆ ತಲುಪಿಸುತ್ತೇವೆ. ಆಸ್ಪತ್ರೆಗಳು, ಆಕ್ಸಿಜನ್ ಪೂರೈಕೆದಾರರಿಗೆ ಕರೆ ಮಾಡುತ್ತೇವೆ. ಈ ಮೂಲಕ ಜೀವ ರಕ್ಷಕ ಸಂಪನ್ಮೂಲಗಳ ಬಗ್ಗೆ ಮಾಹಿತಿ ಪಡೆದು, ಪ್ರತಿ 3-4 ಗಂಟೆಗಳಿಗೆ ಲಭ್ಯತೆಯನ್ನು ಪರಿಶೀಲಿಸಿ ಮಾಹಿತಿ ಪರಿಷ್ಕರಿಸಿ ಅಗತ್ಯವಿರುವವರಿಗೆ ತಲುಪಿಸುತ್ತೇವೆ ಎನ್ನುತ್ತಾರೆ ತಂಡದ ಭಾಗವಾಗಿರುವ 12 ನೇ ತರಗತಿಯ ಅವ್ನಿ ಸೂದ್. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com