ಭಾರತದಲ್ಲಿ 17,726 ನೋಂದಾಯಿತ ಪೈಲಟ್‌ಗಳಲ್ಲಿ 2,764 ಮಹಿಳೆಯರು; ಇದು ವಿಶ್ವದಲ್ಲೇ ಅತಿ ಹೆಚ್ಚು

ಭಾರತದಲ್ಲಿ ಒಟ್ಟು 17,726 ನೋಂದಾಯಿತ ಪೈಲಟ್‌ಗಳಿದ್ದು, ಅದರಲ್ಲಿ 2,764 ಮಹಿಳಾ ಪೈಲಟ್‌ಗಳಿದ್ದಾರೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿಗೆ ತಿಳಿಸಿದೆ.
ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಶಿವಾಂಗಿ
ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಶಿವಾಂಗಿ

ನವದೆಹಲಿ: ಭಾರತದಲ್ಲಿ ಒಟ್ಟು 17,726 ನೋಂದಾಯಿತ ಪೈಲಟ್‌ಗಳಿದ್ದು, ಅದರಲ್ಲಿ 2,764 ಮಹಿಳಾ ಪೈಲಟ್‌ಗಳಿದ್ದಾರೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿಗೆ ತಿಳಿಸಿದೆ.

ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ವುಮೆನ್ ಏರ್‌ಲೈನ್ ಪೈಲಟ್‌ಗಳ ಪ್ರಕಾರ, ಜಾಗತಿಕವಾಗಿ ಸುಮಾರು ಶೇ. 5 ರಷ್ಟು ಮಹಿಳಾ ಪೈಲಟ್‌ಗಳಿದ್ದಾರೆ. ಆದರೆ ಭಾರತದಲ್ಲಿ ಮಹಿಳಾ ಪೈಲಟ್‌ಗಳ ಪಾಲು ಗಮನಾರ್ಹವಾಗಿ ಹೆಚ್ಚಾಗಿದೆ. ಅದು ಶೇಕಡಾ 15 ಕ್ಕಿಂತ ಹೆಚ್ಚು ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ವಿಕೆ ಸಿಂಗ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದಾರೆ.

ಭಾರತದಲ್ಲಿ ಮಹಿಳಾ ಪೈಲಟ್‌ಗಳ ಶೇಕಡಾವಾರು ಪ್ರಮಾಣವು ಅಮೆರಿಕ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹೆಚ್ಚಿನ ಪಾಶ್ಚಿಮಾತ್ಯ ದೇಶಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ವರದಿಯೊಂದು ತಿಳಿಸಿದೆ.

ಆದಾಗ್ಯೂ, ಭಾರತೀಯ ವಾಣಿಜ್ಯ ಪೈಲಟ್‌ಗಳ ಸಂಘವು ಇತ್ತೀಚೆಗೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮಹಿಳಾ ಪೈಲಟ್‌ಗಳ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿತ್ತು.

ವರದಿಯ ಪ್ರಕಾರ, ಅಪ್‌ಗ್ರೇಡೇಶನ್ ಪಟ್ಟಿಯು ಹೆರಿಗೆ ರಜೆ ತೆಗೆದುಕೊಂಡ ಕೆಲವು ಮಹಿಳಾ ಪೈಲಟ್‌ಗಳ ಹೆಸರನ್ನು ಹೊರತುಪಡಿಸಲಾಗಿದೆ ಅಥವಾ ತಪ್ಪಾಗಿ ಬರೆಯಲಾಗಿದೆ. ಇದರಿಂದಾಗಿ ರಜೆಯ ಪ್ರಯಾಣ ರಿಯಾಯಿತಿ(ಎಲ್‌ಟಿಸಿ) ನಂತಹ ಸರಿಯಾದ ಸೇವಾ ಪ್ರಯೋಜನಗಳು ಸಿಗುತ್ತಿಲ್ಲ ಮತ್ತು ಅವರ ಹಿರಿತನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅಸೋಸಿಯೇಷನ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com