ಲಾಕ್ಡೌನ್ ಸಂಕಷ್ಟ: ವಲಸೆ ಕಾರ್ಮಿಕರಿಗೆ ಗದಗ ಪೊಲೀಸರ ನೆರವು

ಲಾಕ್ಡೌನ್ ಪರಿಣಾಮ ತಮ್ಮೂರಿಗೂ ತೆರಳಲು ಸಾಧ್ಯವಾಗದೆ, ಅಗತ್ಯ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರ ನೆರವಿಗೆ ಗದಗ ಜಿಲ್ಲೆಯ ಪೊಲೀಸರು ಮುಂದಾಗಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಗಳು ವ್ಯಕ್ತವಾಗುತ್ತಿವೆ. 
ಗದಗ ಪೊಲೀಸ್ ಅಧಿಕಾರಿ ಯತೀಶ್
ಗದಗ ಪೊಲೀಸ್ ಅಧಿಕಾರಿ ಯತೀಶ್

ಗದಗ: ಲಾಕ್ಡೌನ್ ಪರಿಣಾಮ ತಮ್ಮೂರಿಗೂ ತೆರಳಲು ಸಾಧ್ಯವಾಗದೆ, ಅಗತ್ಯ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರ ನೆರವಿಗೆ ಗದಗ ಜಿಲ್ಲೆಯ ಪೊಲೀಸರು ಮುಂದಾಗಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಗಳು ವ್ಯಕ್ತವಾಗುತ್ತಿವೆ. 

ವಾರ್ಷಿಕ ಜಾತ್ರೆಗಳು ನಡೆಯುವ ಹಿನ್ನೆಲೆಯಲ್ಲಿ ಕೃಷಿಗೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ವಿವಿಧ ರಾಜ್ಯಗಳಿಂದ ಹಲವು ಕಾರ್ಮಿಕರು ಗದಗ ಜಿಲ್ಲೆಗೆ ಆಗಮಿಸಿದ್ದರು. ಆದರೆ, ಲಾಕ್ಡೌನ್ ಬಗ್ಗೆ ತಿಳಿಯದ ಕಾರಣ ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. 

ಈ ಕುರಿತು ಮಾಹಿತಿ ತಿಳಿದ ಗದಗ ಜಿಲ್ಲೆಯ ಪೊಲೀಸ್ ಅಧಿಕಾರಿ ಯತೀಶ್ ಹಾಗೂ ಅವರ ಸಿಬ್ಬಂದಿ ಕಾರ್ಮಿಕರಿಗೆ ಸಹಾಯದ ಹಸ್ತ ಚಾಚಿದ್ದಾರೆ. ಇದಷ್ಟೇ ಅಲ್ಲದೆ, ಹಲವು ಸಂಘಟನೆಗಳು ಹಾಗೂ ಜನರೂ ಕೂಡ ನೆರವಿಗೆ ಧಾವಿಸಿದ್ದಾರೆ. 

ಲಾಕ್ಡೌನ್ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಗ್ರಾಮದಲ್ಲಿ ಕೃಷಿಗೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡಲು ಇಲ್ಲಿಗೆ ಬಂದಿದ್ದೆವು. ಇದೀಗ ನಮಗೆ ಯಾವುದೇ ಕೆಲಸಗಳೂ ಇಲ್ಲ. ಹೀಗಾಗಿ ಭವಿಷ್ಯದ ಬಗ್ಗೆ ಚಿಂತೆಯಾಗಿದೆ. ನಮ್ಮ ಬಳಿಯಿದ್ದ ಎಲ್ಲಾ ಹಣವೂ ಖಾಲಿಯಾಯಿತು. ಆದಾಯ ಮೂಲಗಳೂ ಇಲ್ಲ. ಆದರೆ, ಅದೃಷ್ಟವಶಾತ್ ಪೊಲೀಸರು ಸಹಾಯಕ್ಕೆ ಬಂದಿದ್ದು, ಆಹಾರ ಕಿಟ್ ಗಳನ್ನು ನೀಡಿದ್ದಾರೆ. ಇದೀಗ ನಮ್ಮ ಮಕ್ಕಳಿಗೆ ಆಹಾರ ಸಿಕ್ಕಿದೆ ಎಂದು ಕಾರ್ಮಿಕರು ಹೇಳಿದ್ದಾರೆ. 

ದಾನಿಗಳು ಹಾಗೂ ಪೊಲೀಸ್ ಇಲಾಖೆಯಿಂದ ಬಂದ ನೆರವಿನಿಂದ ಸಹಾಯ ಮಾಡಲಾಗುತ್ತಿದೆ. ಸಹಾಯ ಬಯಸುತ್ತಿರುವ ಜನರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇಲಾಖೆಯು ಸಮನ್ವಯ ಸಾಧಿಸುತ್ತಿದ್ದು, ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡುತ್ತಿದೆ ಎಂದು ಪೊಲೀಸ್ ಅಧಿಕಾರಿ ಯತೀಶ್ ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com