ಚಿಕ್ಕ ವಯಸ್ಸಿಗೆ ಬಿಹಾರದ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಯುವತಿ: ಈಕೆ ಓದಿದ್ದು ಕರ್ನಾಟಕದಲ್ಲಿ!

ಬಿಹಾರದಲ್ಲಿ ಕೇವಲ 21 ವರ್ಷದ ಯುವತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.
ಬಿಹಾರದ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಯುವತಿ
ಬಿಹಾರದ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಯುವತಿ

ಶಿಯೋಹರ್​: ಬಿಹಾರದಲ್ಲಿ ಕೇವಲ 21 ವರ್ಷದ ಯುವತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.
 
ಹೌದು.. ಬಿಹಾರದ ಶಿಯೋಹರ್​​ನ ಕುಶಾಹರ್​ ಪಂಚಾಯಿತಿ ಅಧ್ಯಕ್ಷೆಯಾಗಿ ಅನುಷ್ಕಾ ಆಯ್ಕೆಯಾಗುವ ಮೂಲಕ ಅತ್ಯಂತ ಕಿರಿಯ ಗ್ರಾಮಾಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಇದೇ ಮೊದಲ ಬಾರಿಗೆ ಈಕೆ ಸ್ಪರ್ಧಿಸಿದ್ದು, ಅನುಷ್ಕಾ ಚೊಚ್ಚಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ. ತಮ್ಮ ಪ್ರತಿಸ್ಪರ್ಧಿ ರೀಟಾದೇವಿ ವಿರುದ್ಧ 287 ಮತಗಳ ಅಂತರದ ಗೆಲುವು ಪಡೆದಿರುವ ಅನುಷ್ಕಾ ಒಟ್ಟು 2,625 ಮತಗಳನ್ನು ಪಡೆದುಕೊಂಡಿದ್ದಾರೆ. ಈಕೆ ಹರಿಯಾಣದಲ್ಲಿ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದು ನಂತರ ಕರ್ನಾಟಕದ ಬೆಂಗಳೂರಿನಲ್ಲಿ ಇತಿಹಾಸ ಹಾನರ್ಸ್ ಪದವಿ ಪಡೆದುಕೊಂಡಿದ್ದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇದೇ ಮೊದಲ ಸಲ ಸ್ಪರ್ಧಿಸಿರುವ ಅನುಷ್ಕಾ ಚೊಚ್ಚಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲೂ ಇವರು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ತಮ್ಮ ಪ್ರತಿಸ್ಪರ್ಧಿ ರೀಟಾದೇವಿ ವಿರುದ್ಧ 287 ಮತಗಳ ಅಂತರದ ಗೆಲುವು ಪಡೆದಿರುವ ಅನುಷ್ಕಾ ಒಟ್ಟು 2,625 ಮತಗಳನ್ನು ಪಡೆದುಕೊಂಡಿದ್ದಾರೆ. ಹರಿಯಾಣದಲ್ಲಿ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದು ತದನಂತರ ಕರ್ನಾಟಕದ ಬೆಂಗಳೂರಿನಲ್ಲಿ ಇತಿಹಾಸ ಹಾನರ್ಸ್ (History Honours)​ ಪದವಿ ಪಡೆದುಕೊಂಡಿದ್ದರು. ಉನ್ನತ ವ್ಯಾಸಂಗ ಮಾಡುವ ಆಸೆ ಹೊಂದಿರುವುದಾಗಿಯೂ ಅನುಷ್ಕಾ ತಿಳಿಸಿದ್ದಾರೆ.

'ಇಷ್ಟು ಚಿಕ್ಕ ವಯಸ್ಸಿನಲ್ಲಿ ಚುನಾವಣೆಗೆ ಸ್ಪರ್ಧಿಸಲು ಏಕೆ ನಿರ್ಧರಿಸಿದ್ದೀರಿ ಎಂದು ಕೇಳಿದಾಗ, ಅನುಷ್ಕಾ ಅವರು ಹಲವಾರು ಸಮಸ್ಯೆಗಳೊಂದಿಗೆ ವ್ಯವಹರಿಸುವ ತಮ್ಮ ಕ್ಷೇತ್ರದಲ್ಲಿ ಬದಲಾವಣೆಯನ್ನು ತರಲು ಬಯಸಿದ್ದೆ. ಹೊಸದಾಗಿ ಚುನಾಯಿತರಾದ ಮುಖಿಯಾ ಅವರು ಭ್ರಷ್ಟಾಚಾರವನ್ನು ತೊಡೆದುಹಾಕಲು ಕೆಲಸ ಮಾಡಬೇಕು. ತಮ್ಮ ಗ್ರಾಮದ ಜನರು ಸ್ಥಾಪಿಸಿದ ನಂಬಿಕೆಯನ್ನು ಎತ್ತಿಹಿಡಿಯಬೇಕು. ಆ ಕೆಲಸವನ್ನು ನಾನು ಮಾಡುತ್ತೇನೆ ಎಂದು ಹೇಳಿದರು. ಅಲ್ಲದೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಲು ಕಠಿಣ ಪರಿಶ್ರಮ ಬೇಕು ಮತ್ತು ಪ್ರಯತ್ನವನ್ನು ಮಾಡಲು ಸಿದ್ಧರಿದ್ದರೆ ಯಶಸ್ಸು ಬರುತ್ತದೆ. ತಮ್ಮ ಈ ಕಾರ್ಯಕ್ಕೆ ತನ್ನ ಅಜ್ಜನನ್ನು ತನ್ನ ಸ್ಫೂರ್ತಿ ಎಂದು ಆಕೆ ಬಣ್ಣಿಸಿದರು. ಜನರ ಜೀವನವನ್ನು ಉತ್ತಮಗೊಳಿಸುವುದು ತನ್ನ ಉದ್ದೇಶವಾಗಿದೆ ಎಂದು ಹೇಳಿದರು.

ಅಂದಹಾಗೆ ಅನುಷ್ಕಾ ಅವರ ತಂದೆ ಸುನಿಲ್ ಸಿಂಗ್ ಸ್ಥಳೀಯ ಜಿಲ್ಲಾ ಕೌನ್ಸಿಲ್‌ನ ಮಾಜಿ ಸದಸ್ಯರಾಗಿದ್ದಾರೆ ಎಂಬುದು ವಿಶೇಷ. ಅನುಷ್ಕಾ ಸಕ್ರಿಯ ರಾಜಕೀಯದಲ್ಲಿ ಭಾಗವಹಿಸುವುದು ಖಂಡಿತವಾಗಿಯೂ ಈ ಪ್ರದೇಶದ ಇತರ ಯುವತಿಯರಿಗೆ ಅವರ ಕನಸುಗಳನ್ನು ಅನುಸರಿಸಲು ಮತ್ತು ಸಮಾಜದ ಸುಧಾರಣೆಗಾಗಿ ಕೆಲಸ ಮಾಡಲು ಪ್ರೇರೇಪಿಸಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com