ಪ್ರಖ್ಯಾತ ಶಾಸ್ತ್ರೀಯ ಸಂಗೀತಗಾರ ಕುಟುಂಬದ ಮೂರನೇ ತಲೆಮಾರಿನ ಮಹತಿ ಸುಬ್ರಮಣಿಯಂ ಮ್ಯೂಸಿಕ್ ವಿಡಿಯೊ ಬಿಡುಗಡೆ

ಸಂಗೀತಗಾರರ ಕುಟುಂಬದಿಂದ ಬಂದ ಮಹತಿ 2ನೇ ವಯಸ್ಸಿನಿಂದಲೇ ಸಂಗೀತಾಭ್ಯಾಸದಲ್ಲಿ ನಿರತಳಾಗಿದ್ದಾಳೆ. ತನ್ನ ವಯಸ್ಸಿನ ಮಕ್ಕಳ ಭಾವನೆ ಮತ್ತು ಸಮಸ್ಯೆಗಳನ್ನು ವ್ಯಕ್ತಪಡಿಸುವ ಉದ್ದೇಶದಿಂದ ಈ ಆಕೆ ಹಾಡು ರೂಪಿಸಿದ್ದಾಳೆ
ಎಲ್. ಬಾಲಸುಬ್ರಮಣಿಯಂ ಮತ್ತು ಕವಿತಾ ಕೃಷ್ಣಮೂರ್ತಿ ಜೊತೆ ಮೊಮ್ಮಗಳು ಮಹತಿ
ಎಲ್. ಬಾಲಸುಬ್ರಮಣಿಯಂ ಮತ್ತು ಕವಿತಾ ಕೃಷ್ಣಮೂರ್ತಿ ಜೊತೆ ಮೊಮ್ಮಗಳು ಮಹತಿ
Updated on

ಮುಂಬೈ: ಭಾರತದ ಪ್ರಖ್ಯಾತ ಶಾಸ್ತ್ರೀಯ ಸಂಗೀತಗಾರ ದಂಪತಿಗಳಾದ ವಯೊಲಿನ್ ವಾದಕ ಎಲ್. ಬಾಲಸುಬ್ರಮಣಿಯಂ ಮತ್ತು ಕವಿತಾ ಕೃಷ್ಣಮೂರ್ತಿ ಅವರ ಕುಟುಂಬದ ಮೂರನೇ ತಲೆಮಾರಿನ ಕಲಾವಿದೆ, ಮಹತಿ ಸುಬ್ರಮಣಿಯಂ ಚಿಕ್ಕ ವಯಸ್ಸಿಗೇ ತಮ್ಮ ಮೊದಲ ಮ್ಯೂಸಿಕ್ ವಿಡಿಯೊ ಬಿಡುಗಡೆಗೊಳಿಸಿದ್ದಾರೆ. ಆಕೆಗಿನ್ನೂ 10 ವರ್ಷ ಎನ್ನುವುದು ಅಚ್ಚರಿ ಪಡಬೇಕಾದ ವಿಷಯ.

ಮಹತಿ ಸುಬ್ರಮಣಿಯಂ, ಎಲ್. ಬಾಲಸುಬ್ರಮಣಿಯಂ ಮತ್ತು ಕವಿತಾ ಕೃಷ್ಣಮೂರ್ತಿ ಅವರ ಪುತ್ರಿ Subramaniam Academy of Performing Arts ಕಲಾ ಶಾಲೆಯ ಸ್ಥಾಪಕಿಯಾಗಿರುವ ಬಿಂದು ಸುಬ್ರಮಣಿಯಂ ಅವರ ಮಗಳು. ಈ ಹಾಡನ್ನು ತಾನೇ ಬರೆದು, ಸಂಗೀತ ರೂಪಿಸಿ, ಹಾಡಿದ್ದಲ್ಲದೆ ಮ್ಯೂಸಿಕ್ ವಿಡಿಯೋದಲ್ಲಿ ಅಭಿನಯಿಸಿದ್ದಾಳೆ ಮಹತಿ.  

ಬಹುಮುಖ ಪ್ರತಿಭೆಯಾಗಿರುವ ಮಹತಿ ತಾತನಂತೆಯೇ ವಯೊಲಿನ್ ವಾದಕಿಯಾಗಿದ್ದಾಳೆ. ವಯೊಲಿನ್ ಜೊತೆಗೆ ಪಿಯಾನೊವನ್ನು ಕಲಿಯುತ್ತಿದ್ದಾಳೆ. ಅದರ ಜೊತೆಗೆ ಗಾಯಕಿ, ಗೀತೆ ರಚನೆಕಾರ್ತಿಯೂ ಆಗಿರುವ ಮಹತಿ ಹುಬ್ಬೇರಿಸುವಂತೆ ಮಾಡಿದ್ದಾಳೆ.

ತಾನು ಬರೆದ ಹಾಡನ್ನು ಹಾಡಿರುವ ಮಹತಿ ತನ್ನ How We Feel ಮ್ಯೂಸಿಕ್ ವಿಡಿಯೋದಲ್ಲಿ ಜಿಮ್ನಾಸ್ಟಿಕ್ ಅನ್ನೂ ಪ್ರದರ್ಶನ ಮಾಡಿರುವುದು ಎಂಥವರಿಗೂ ರೋಮಾಂಚನವನ್ನು ಉಂಟುಮಾಡುತ್ತದೆ. 

ಸಂಗೀತಗಾರರ ಕುಟುಂಬದಿಂದ ಬಂದ ಮಹತಿ 2ನೇ ವಯಸ್ಸಿನಿಂದಲೇ ಸಂಗೀತಾಭ್ಯಾಸದಲ್ಲಿ ನಿರತಳಾಗಿದ್ದಾಳೆ. ತನ್ನ ವಯಸ್ಸಿನ ಮಕ್ಕಳ ಭಾವನೆ ಮತ್ತು ಸಮಸ್ಯೆಗಳನ್ನು ವ್ಯಕ್ತಪಡಿಸುವ ಉದ್ದೇಶದಿಂದ ಈ ಹಾಡು ರೂಪಿಸಿದ್ದಾಗಿ ಮಹತಿ ಹೇಳುತ್ತಾಳೆ. 

Related Article

ಕನ್ನಡ ಭಾಷೆ-ಸಾಹಿತ್ಯ ಸೇವೆಯಲ್ಲಿ ಶಿವಮೊಗ್ಗದ ಕರ್ನಾಟಕ ಸಂಘ ಸಕ್ರಿಯ

ಮುಂದಿನ ಪೀಳಿಗೆಗೆ ಜ್ಞಾನ ಮತ್ತು ಜೀವನ ಕೌಶಲ್ಯಗಳ ಸಂಪತ್ತನ್ನು ಧಾರೆ ಎರೆಯುತ್ತಿರುವ ಅನ್ಮೋಲ್ ಯೋಗ ಕೇಂದ್ರ!

ಯುಎಸ್ಎ ಕೊಲೊರಾಡೋ ಪೊಲೀಸ್ ಪಡೆಯಲ್ಲಿರುವ ಏಕೈಕ ಭಾರತೀಯ ಪ್ರೇಮ್ ಮೆನನ್!

ಟೈಪ್ 1 ಮಧುಮೇಹವನ್ನು ಮೆಟ್ಟಿನಿಂತ ಯೋಧನ ಯಶೋಗಾಥೆ...

ಅರಣ್ಯದೊಂದಿಗೆ ಬೆಳೆದ ಆಧುನಿಕ ನಾರಿ: ಕೃಷಿ ಮೇಳ ಉದ್ಘಾಟಿಸಿದ ರೈತ ಮಹಿಳೆ ಪ್ರೇಮ ದಾಸಪ್ಪ ಸತ್ಯ ಕಥೆ!

ಬರಿಗಾಲಲ್ಲಿ ಹೋಗಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಹರೇಕಳ ಹಾಜಬ್ಬ, ತುಳಸಿಗೌಡ: ಸರಳತೆ, ದೃಢ ಸಂಕಲ್ಪಕ್ಕೆ ಮೆಚ್ಚುಗೆಯ ಮಹಾಪೂರ

ನಾಯಿ ಕಣ್ಣು.. ನರಿ ಕಣ್ಣು... ರಾಷ್ಟ್ರಪತಿಗಳಿಗೆ ದೃಷ್ಟಿ ನೀವಳಿಸಿ ಪ್ರಶಸ್ತಿ ಪಡೆದ ಮಂಜಮ್ಮ ಜೋಗತಿ: ವಿಡಿಯೋ ವೈರಲ್

ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬಗೆ ಪದ್ಮಶ್ರೀ, ಪ್ರಶಸ್ತಿ ಗೌರವ ಹೆಚ್ಚಿಸಿದ ಅಕ್ಷರ ಸಂತ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com