ಚೆನ್ನೈ: ಚೆನ್ನೈನ ತೊರೈಪಕ್ಕಂ ಪೊಲೀಸ್ ಠಾಣೆಯಲ್ಲಿ ಅಂದು ಹಬ್ಬದ ಸಂಭ್ರಮ. ಕಳ್ಳಕಾಕ, ಖದೀಮರ ವಿಚಾರಣೆಗಳಿಗೆ, ದೂರು ಸಲ್ಲಿಕೆಗೆ, ಅಹವಾಲು ಸ್ವೀಕರಿಸುವುದಕ್ಕೆ ಬಳಕೆಯಾಗುತ್ತಿದ್ದ ಪೊಲೀಸ್ ಠಾಣೆಯಲ್ಲಿ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿತ್ತು.
ಇದನ್ನೂ ಓದಿ: ಯೂಟ್ಯೂಬ್ ತರಗತಿ, ಪುಸ್ತಕಗಳ ನೆರವಿನಿಂದಲೇ NEET ತೇರ್ಗಡೆಯಾದ ರಿತಿಕಾ!
ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೇದೆಗಳದೋ, ಪೊಲೀಸ್ ಅಧಿಕಾರಿಗಳದೋ ಹುಟ್ಟುಹಬ್ಬ ಆಗಿರುತ್ತಿದ್ದರೆ ಅದರಲ್ಲಿ ವಿಶೇಷ ಇರುತ್ತಿರಲಿಲ್ಲ. ಠಾಣೆಯ ಪೊಲಿಸರೆಲ್ಲರೂ ಆಚರಿಸಿದ್ದು ಹೆಣ್ಣುಮಗುವಿನ ಹುಟ್ಟುಹಬ್ಬವನ್ನು!
ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿರುವುದು ಗೊತ್ತೇ ಇರುತ್ತದೆ. ಸೋಮವಾರ ಮತ್ತು ಮಂಗಳವಾರ ಚೆನ್ನೈ ನಗರದ ಕೆ.ಪಿ.ಕೆ ನಗರ ಮತ್ತು ಕಲ್ಲುಕುಟ್ಟೈ ಪ್ರದೇಶಗಳಲ್ಲಿ ಮಳೆಯಿಂದ ನೀರು ನುಗ್ಗಿ ಪ್ರದೇಶವಿಡೀ ಜಲಾವೃತಗೊಂಡಿತ್ತು.
ಇದನ್ನೂ ಓದಿ: ಬರಿಗಾಲಲ್ಲಿ ಹೋಗಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಹರೇಕಳ ಹಾಜಬ್ಬ, ತುಳಸಿಗೌಡ: ಸರಳತೆ, ದೃಢ ಸಂಕಲ್ಪಕ್ಕೆ ಮೆಚ್ಚುಗೆಯ ಮಹಾಪೂರ
ರಕ್ಷಣಾ ಪಡೆ ಅಲ್ಲಿಗೆ ಧಾವಿಸುವ ವೇಳೆಗೆ ಹಲವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ತಿಳಿದುಬಂದಿತು. ಅದು ಕೊಳಚೆಪ್ರದೇಶವಾಗಿದ್ದು, ಅಲ್ಲಿ ನೆಲೆಸಿದ್ದವರಲ್ಲಿ ಬಹಳಷ್ಟು ಮಂದಿ ಕೂಲಿ ಕಾರ್ಮಿಕರಾಗಿದ್ದರು.
ಕೊಚ್ಚಿಕೊಂಡು ಹೋದವರ ರಕ್ಷಣೆಗೆ ಮುಂದಾದ ಸಿಬ್ಬಂದಿ ನೀರಿನಲ್ಲಿ ಸಿಲುಕಿಕೊಂಡಿದ್ದ ಹಲವು ಕುಟುಂಬಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟರು. ಅಲ್ಲದೆ ಸುರಕ್ಷಿತ ಸ್ಥಳಗಳಲ್ಲಿ ನೆಲೆ ಕಂಡುಕೊಂಡಿದ್ದ ಜನರನ್ನು ತಾತ್ಕಾಲಿಕ ಶಿಬಿರಕ್ಕೆ ಕರೆದೊಯ್ಯಲಾಯಿತು.
ಇದನ್ನೂ ಓದಿ: ಅರಣ್ಯದೊಂದಿಗೆ ಬೆಳೆದ ಆಧುನಿಕ ನಾರಿ: ಕೃಷಿ ಮೇಳ ಉದ್ಘಾಟಿಸಿದ ರೈತ ಮಹಿಳೆ ಪ್ರೇಮ ದಾಸಪ್ಪ ಸತ್ಯ ಕಥೆ!
ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಒಂದೆಡೆ ಸಿಲುಕಿಕೊಂಡಿದ್ದ ಕುಟುಂಬದಲ್ಲಿ ಹೆಣ್ಣುಮಗುವೂ ಸೇರಿತ್ತು. ಅದೇ ದಿನ ಆ ಮಗುವಿನ ಮೊದಲ ವರ್ಷದ ಹುಟ್ಟಿದ ಹಬ್ಬ ಎನ್ನುವ ವಿಷಯ ಪೊಲೀಸರಿಗೆ ನಂತರ ತಿಳಿದುಬಂತು. ಒಡನೆಯೇ ಪೊಲೀಸರೆಲ್ಲರೂ ಸೇರಿ ಹೆಣ್ಣುಮಗುವಿನ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಠಾಣೆಯಲ್ಲಿ ಆಚರಿಸಲು ನಿರ್ಧರಿಸಿದರು.
ಇದನ್ನೂ ಓದಿ: ನಾಯಿ ಕಣ್ಣು.. ನರಿ ಕಣ್ಣು... ರಾಷ್ಟ್ರಪತಿಗಳಿಗೆ ದೃಷ್ಟಿ ನೀವಳಿಸಿ ಪ್ರಶಸ್ತಿ ಪಡೆದ ಮಂಜಮ್ಮ ಜೋಗತಿ: ವಿಡಿಯೋ ವೈರಲ್