ಶಾಸನಗಳ 3ಡಿ ಡಿಜಿಟಲ್‌ ಸಂರಕ್ಷಣೆ ಮೂಲಕ ಇತಿಹಾಸ ಉಳಿಸುವ ಪ್ರಯತ್ನ: 'ಬೆಂಗಳೂರು ಇತಿಹಾಸ ವೈಭವ'ದ ಮೊದಲನೇ ಸಂಚಿಕೆಯ ಇ- ಕಾಪಿ ಬಿಡುಗಡೆ 

ʼದಿ ಮಿಥಿಕ್‌ ಸೊಸೈಟಿಯುʼ ಅವಿಭಜಿತ ಬೆಂಗಳೂರು ಜಿಲ್ಲೆಯ ಶಾಸನಗಳನ್ನು 3ಡಿ ಡಿಜಿಟಲ್‌ ಸಂರಕ್ಷಣೆ ಮಾಡುವುದರ ಜೊತೆಗೆ ಈ ಶಾಸನಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಸ್ಥಳೀಯ ಇತಿಹಾಸವನ್ನು ʼಬೆಂಗಳೂರು ಇತಿಹಾಸ ವೈಭವʼ ಎಂಬ ಪತ್ರಿಕೆಯನ್ನು ಹೊರ ತಂದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅಧ್ಯಯನದಲ್ಲಿ ಶಾಸನಗಳ ಪಾತ್ರ ಅಮೋಘವಾದುದು. ಇತಿಹಾಸ ರಚನೆಯಲ್ಲಿ ಅದರಲ್ಲೂ ಪ್ರಮುಖವಾಗಿ ಸ್ಥಳೀಯ ಇತಿಹಾಸ ರಚನೆಯಲ್ಲಿ ಇವು ಪ್ರಾಥಮಿಕ ಮೂಲ ಆಧಾರಗಳಾಗಿವೆ. ಆದರೆ ತೀವ್ರ ನಗರೀಕರಣ ಮತ್ತು ಜನರ ತಿಳಿವಳಿಕೆಯ ಕೊರತೆಯಿಂದಾಗಿ ಈ ಶಾಸನಗಳು ಹಂತ ಹಂತವಾಗಿ ನಾಶವಾಗುತ್ತಿವೆ. 

ಶಾಸನಗಳು ನಾಶವಾಗುತ್ತಿರುವ ಬೆಳವಣಿಗೆ ನಿಜವಾಗಿಯೂ ಆತಂಕಕಾರಿಯಾಗಿದ್ದು, ಈ ಕಾರಣದಿಂದಾಗಿ ಮುಂದಿನ ಪೀಳಿಗೆ ನೈಜ ಇತಿಹಾಸವನ್ನು ಅರಿಯಲು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ನಮ್ಮ ಪರಂಪರೆಯಲ್ಲಿ ಹಾಸು ಹೊಕ್ಕಾಗಿರುವ ಈ ಶಾಸನಗಳನ್ನು ಸಂರಕ್ಷಿಸುವ ಮಹತ್ವದ ದೃಷ್ಟಿಯಿಂದ ʼದಿ ಮಿಥಿಕ್‌ ಸೊಸೈಟಿಯುʼ ಅವಿಭಜಿತ ಬೆಂಗಳೂರು ಜಿಲ್ಲೆಯ ಶಾಸನಗಳನ್ನು 3ಡಿ ಡಿಜಿಟಲ್‌ ಸಂರಕ್ಷಣೆ ಮಾಡುವುದರ ಜೊತೆಗೆ ಈ ಶಾಸನಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಸ್ಥಳೀಯ ಇತಿಹಾಸವನ್ನು ʼಬೆಂಗಳೂರು ಇತಿಹಾಸ ವೈಭವʼ ಎಂಬ ಪತ್ರಿಕೆಯನ್ನು ಹೊರ ತಂದಿದೆ. 

ಇದರಲ್ಲಿ ಮುಂದೆ ಹಲವು ಸಂಚಿಕೆಗಳು ಹೊರ ಬರಲಿವೆ. ಪ್ರಸ್ತುತ ಸಂಚಿಕೆಯಲ್ಲಿ ಬೆಂಗಳೂರಿನ ʼಸಿಂಗಾಪುರʼ ಬಡಾವಣೆಯ ಸ್ಥಳೀಯ ಇತಿಹಾಸವನ್ನು ಐತಿಹಾಸಿಕ ಶಿಲಾಶಾಸನಗಳ ಆಧಾರದಲ್ಲಿ ತಿಳಿಸಲಾಗಿದ್ದು, ಇದರಲ್ಲಿನ ಮಾಹಿತಿಯು ನಿಮಗೆ ನಿಜವಾಗಿಯೂ ನಮ್ಮೂರಿನ ಬಗ್ಗೆ ಹೆಮ್ಮೆಯನ್ನು ತರಿಸುತ್ತದೆ ಎಂದು ಭಾವಿಸುತ್ತೇವೆ.

ಬೆಂಗಳೂರಿನ ಹಿರಿಮೆ ಸಾರುವ ಪತ್ರಿಕೆಯ ಮೊದಲ ಸಂಚಿಕೆಯ ಇ-ಕಾಪಿಯನ್ನು ಕೆಳಗಿನ ಲಿಂಕ್ ಮೂಲಕ ಪಡೆಯಬಹುದು- https://bit.ly/3o1gWsl

ಸಂಚಿಕೆ ಓದಿದ ಓದುಗರು ತಮ್ಮ ಅಭಿಪ್ರಾಯವನ್ನು ಇಲ್ಲಿ ನೀಡಲಾಗಿರುವ ಲಿಂಕ್‌ ಗೆ ಭೇಟಿ ನೀಡಿ ತಿಳಿಸಬಹುದು- https://bit.ly/singapura_kan

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com