ಪಶ್ಚಿಮ ಬಂಗಾಳ: ಕಾಳಿ ದೇವಾಲಯ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಬಡ ಮುಸ್ಲಿಂ ರೈತ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೋಮು ಗಲಭೆ ಉಂಟಾಗಿದ್ದು ನೆನಪಿರಬಹುದು. ಇದಾಗಿ 6 ತಿಂಗಳುಗಳೇ ಕಳೆದುಹೋದುವು. ಈ ನಡುವೆಯೇ ಕೋಮು ಸೌಹಾರ್ದತೆ ಸಾರುವ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ.
ಕಾಳಿ ವಿಗ್ರಹ ಮತ್ತು ಹನನ್ ಮೊಂಡಲ್
ಕಾಳಿ ವಿಗ್ರಹ ಮತ್ತು ಹನನ್ ಮೊಂಡಲ್

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೋಮು ಗಲಭೆ ಉಂಟಾಗಿದ್ದು ನೆನಪಿರಬಹುದು. ಇದಾಗಿ 6 ತಿಂಗಳುಗಳೇ ಕಳೆದುಹೋದುವು. ಹಿಂದೂ ಮುಸ್ಲಿಂ ನಡುವೆ ಹತ್ತಿಕೊಂಡಿದ್ದ ದಳ್ಳುರಿ ಈಗ ಆರುತ್ತಿದೆ.

ಇದೇ ಸಂದರ್ಭದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವಾಗಲೇ ಪ. ಬಂಗಾಳದ ಮುಸ್ಲಿಂ ರೈತ ಗ್ರಾಮದಲ್ಲಿ ಕಾಳಿ ದೇವಾಲಯ ನಿರ್ಮಾಣಕ್ಕೆ ತನ್ನ ಸ್ವಂತ ಭೂಮಿಯನ್ನು ದಾನ ಮಾಡಿರುವ ಹೃದಯಸ್ಪರ್ಶಿ ಘಟನೆ ನಡೆದಿದೆ. 

ಪ.ಬಂಗಾಳದ ನಾಡಿಯಾ ಜಿಲ್ಲೆಯ ಭೀಮ್ ಪುರ್, 450 ಕುಟುಂಬಗಳು ವಾಸವಿರುವ ಗ್ರಾಮ. ಅವರಲ್ಲಿ 150 ಮುಸ್ಲಿಂ ಕುಟುಂಬಗಳೂ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿವೆ. ಇದೇ ಗ್ರಾಮದ ಹನನ್ ಮೊಂಡಲ್ ಎಂಬುವವರೇ ದೇವಾಲಯಕ್ಕೆ ಭೂಮಿ ದಾನ ಮಾಡಿದವರು. 

ಇಂಡೊ- ಬಾಂಗ್ಲಾ ಗಡಿಯಲ್ಲೇ ಇರುವ ಈ ಗ್ರಾಮದಲ್ಲಿ ಇದುವರೆಗೂ ಬಿ ಎಸ್ ಎಫ್ ಗೆ ಸೇರಿದ ಜಾಗದಲ್ಲಿ ಕಾಳಿ ಮಾತೆಯ ಪೂಜೆ ನಡೆಸುತ್ತಿದ್ದರು. ಅಲ್ಲಿ ಪ್ರಾರ್ಥನೆ ನಡೆಸಲು ಪ್ರತೀ ಬಾರಿ ಭಾರತೀಯ ಸೇನೆಯ ಅನುಮತಿ ಪಡೆದುಕೊಳ್ಲಬೇಕಿತ್ತು. ಕೆಲ ಬಾರಿ ಭದ್ರತಾ ಕಾರಣಗಳಿಗೆ ಅನುಮತಿ ನಿರಾಕರಿಸಲಾಗುತ್ತಿತ್ತು.  

ಕಾಳಿ ಪೂಜಾ ಮಂಡಳಿಯ ಅಧ್ಯಕ್ಷ ಬಿಮಲ್ ಸರ್ಕಾರ್ ಹನನ್ ಶ್ಲಾಸ್ಘಿಸಿದ್ದಾರೆ. ಪ.ಬಂಗಾಳ ರಾಜ್ಯದ ನಿಜವಾದ ಗುಣ ಇದುವೇಎಂದು ಅವರು ಬಣ್ಣಿಸಿದ್ದಾರೆ. ಪ್ರತೀ ಬಾರಿ ಸೇನೆಯ ಒಪ್ಪಿಗೆ ಪಡೆಯುವುದನ್ನು ತಪ್ಪಿಸಲು, ಈ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಲಲು ಭೂಮಿ ನೀಡಿದ್ದಾಗಿ ಹನನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com