ತುಮಕೂರು: ಬೆವರು ಸುರಿಸಿ ದುಡಿದ ರೂ.1.5 ಲಕ್ಷ ಹಣದಿಂದ ರಸ್ತೆ ದುರಸ್ಥಿ ಮಾಡಿದ ರೈತ!
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯಲ್ಲಿ ರೈತರೊಬ್ಬರು ಬೆವರು ಸುರಿಸಿ ದುಡಿದ ಹಣದಲ್ಲಿ ರಸ್ತೆ ದುರಸ್ಥಿ ಕಾರ್ಯ ಮಾಡಿದ್ದು, ರೈತನ ಈ ಕಾರ್ಯಕ್ಕೆ ಶ್ಲಾಘನೆಗಳು ವ್ಯಕ್ತವಾಗುತ್ತಿವೆ.
Published: 15th November 2022 10:06 AM | Last Updated: 15th November 2022 01:48 PM | A+A A-

ರಸ್ತೆ ದುರಸ್ಥಿ ಮಾಡುತ್ತಿರುವುದು.
ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯಲ್ಲಿ ರೈತರೊಬ್ಬರು ಬೆವರು ಸುರಿಸಿ ದುಡಿದ ಹಣದಲ್ಲಿ ರಸ್ತೆ ದುರಸ್ಥಿ ಕಾರ್ಯ ಮಾಡಿದ್ದು, ರೈತನ ಈ ಕಾರ್ಯಕ್ಕೆ ಶ್ಲಾಘನೆಗಳು ವ್ಯಕ್ತವಾಗುತ್ತಿವೆ.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅರೇಹಳ್ಳಿ ನಂಜೇಗೌಡ ನಟರಾಜು (53) ಎಂಬ ರೈತ ಕೊಬ್ಬರಿ ಮಾರಾಟ ಮಾಡಿ ಸಂಪಾದಿಸಿದ ರೂ.1.5 ಲಕ್ಷ ಹಣದಲ್ಲಿ 400 ಮೀಟರ್ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ತುಂಬಿದ್ದಾರೆ.
ಯಾವುದೇ ಚುನಾಯಿತ ಜನಪ್ರತಿನಿಧಿಗಳು ರಸ್ತೆ ದುರಸ್ತಿ ಕಾರ್ಯ ಮಾಡಲ ಹಿನ್ನೆಲೆಯಲ್ಲಿ ನಂಜೇಗೌಡ ಅವರು ರಸ್ತೆ ಗುಂಡಿಗಳನ್ನು ತುಂಬಿದ್ದಾರೆ.
ಶಿವನೇಹಳ್ಳಿ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಕಂದಾಯ ಇಲಾಖೆಯ ಪ್ಯೂನ್ ನಾರಾಯಣಪ್ಪ (54) ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಘಟನೆ ಬಳಿಕ ನಂಜೇಗೌಡ ಅವರು ರಸ್ತೆ ಗುಂಡಿ ತುಂಬಲು ನಿರ್ಧರಿಸಿದ್ದರು.
ಇದನ್ನೂ ಓದಿ: ಪ್ಲಾಸ್ಟಿಕ್ ಪಿಡುಗು ಗುಣಪಡಿಸಿದ 'ವೈದ್ಯೆ'; ಪ್ಲಾಸ್ಟಿಕ್ ಮುಕ್ತ ಮಾದರಿಗೇ ಮಾದರಿ ಈ ಗ್ರಾಮ!
ರಸ್ತೆ ಗುಂಡಿ ತುಂಬಿದ ನಂಜೇಗೌಡ ಅವರು ಇದೀಗ ಸ್ಥಳೀಯ ಹೀರೋ ಆಗಿದ್ದು, ಇದೀಗ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡುವಂತೆ ಸ್ಥಳೀಯರು ಜೆಡಿಎಸ್ ಪಕ್ಷಕ್ಕೆ ಆಗ್ರಹಿಸುತ್ತಿದ್ದಾರೆ.
ಶಿವನೇಹಳ್ಳಿ ಗ್ರಾಮದ ಸ್ಥಳೀಯ ಸಂಸದ ಜಿ.ಎಸ್.ಬಸವರಾಜು ಹಾಗೂ ಸ್ಥಳೀಯ ಶಾಸಕ ಎಸ್.ಆರ್.ಶ್ರೀನಿವಾಸ್ ರಸ್ತೆ ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ, ನಿರ್ಲಕ್ಷಿಸಿದ್ದರು ಎಂದು ಸ್ಥಳೀಯ ನಿವಾಸಿ ಎಸ್.ಷಡಕ್ಷರಿ ಆರೋಪಿಸಿದ್ದಾರೆ.
ಡಿಸೆಂಬರ್ 2020 ರಲ್ಲಿ ಜಿಲ್ಲಾ ಪಂಚಾಯತಿ ಫಲಿತಾಂಶ ಘೋಷಣೆಯಾದಾಗ, ನಟರಾಜು ಅವರು ತಮ್ಮ ಪ್ರತಿಸ್ಪರ್ಧಿ ಅಜಯ್ ವಿರುದ್ಧ ಒಂದು ಮತದಿಂದ ಸೋಲು ಕಂಡಿದ್ದರು.
ಇದನ್ನೂ ಓದಿ: ಅವಳಿ ಪರ್ವತಗಳನ್ನೇರುವ ಹುಮ್ಮಸ್ಸು; ವಿಶ್ವ ಭ್ರಾತೃತ್ವ ಸಂದೇಶ ಸಾರುತ್ತಿರುವ ನಿವೃತ್ತ ಪಿಎಸ್ಐ
ಸುಮಾರು 20 ರಿಂದ 25 ಅಮಾನ್ಯ ಮತಗಳನ್ನು ಎಣಿಸಿದ ಕಾರಣ ಗುಬ್ಬಿ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದೆ. ಈ ವೇಳೆ ನ್ಯಾಯಾಲಯ ನನ್ನ ಪರವಾಗಿ ತೀರ್ಪು ನೀಡಿತ್ತು. ಹೀಗಾಗಿ ನಾನು ಜಿಲ್ಲಾ ಪಂಚಾಯತ್'ಗೆ ಚುನಾಯಿತನಾಗಿದ್ದು, ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸಿದ್ದೇನೆ. ಹಳ್ಳಿಯ ಜನರ ಸೇವೆಯನ್ನು ಮುಂದುವರೆಸುತ್ತೇನೆಂದು ನಂಜೇಗೌಡ ಅವರು ಹೇಳಿದ್ದಾರೆ.
ನಂಜೇಗೌಡ ಅವರ ಕೊಡುಗೆ ಶ್ಲಾಘನೀಯ. ಅವರು ನಮಗೆ ಮಾದರಿಯಾಗಿದ್ದಾರೆ’ ಎಂದು ತಾಲ್ಲೂಕಿನ ಮಾದೇನಹಳ್ಳಿ ಗ್ರಾಮದ ಮಾಜಿ ಜಿ.ಪಂ.ಸದಸ್ಯ ನಾಗರಾಜು ಅವರು ಹೇಳಿದ್ದಾರೆ.