ಅಮೆರಿಕದಿಂದ ಸಹಾಯ ಮಾಡುತ್ತಿರುವ ವೈದ್ಯಕೀಯ ವಿದ್ಯಾರ್ಥಿ ರಾಘವ ರಂಗ; ಸಾಂಕ್ರಾಮಿಕ ರೋಗಗಳ ಕುರಿತು ಅರಿವು!
ಬೆಂಗಳೂರು ಮೂಲದ ಅಮೆರಿಕದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿರುವ ರಾಘವ ರಂಗ, ಇತ್ತೀಚೆಗೆ ಚನ್ನಪಟ್ಟಣದ ದೊಡ್ಡ ಮಳೂರಿನ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಸಮುದಾಯದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸಿದರು. ಆದರೆ, ಅವರ ಮಾನವೀಯ ಪ್ರಯತ್ನಗಳು ದಶಕದ ಹಿಂದೆಯೇ ಪ್ರಾರಂಭವಾಯಿತು.
Published: 12th March 2023 04:58 PM | Last Updated: 13th March 2023 04:07 PM | A+A A-

ರಾಘವ ರಂಗ ಅವರ ಉಪನ್ಯಾಸ
ಬೆಂಗಳೂರು: ಬೆಂಗಳೂರು ಮೂಲದ ಅಮೆರಿಕದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿರುವ ರಾಘವ ರಂಗ, ಇತ್ತೀಚೆಗೆ ಚನ್ನಪಟ್ಟಣದ ದೊಡ್ಡ ಮಳೂರಿನ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಸಮುದಾಯದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸಿದರು. ಆದರೆ, ಅವರ ಮಾನವೀಯ ಪ್ರಯತ್ನಗಳು ದಶಕದ ಹಿಂದೆಯೇ ಪ್ರಾರಂಭವಾಯಿತು.
2006 ರಲ್ಲಿ ರಾಘವ್ ರಂಗ ಎಂಟು ವರ್ಷದವನಿದ್ದಾಗ, ತಮ್ಮ ಚಿಕ್ಕಮ್ಮನ ಮದುವೆಗೆ ತಮ್ಮ ತಾಯಿಯ ಪೂರ್ವಜರ ಊರಾದ ದೊಡ್ಡ ಮಳೂರು ಗ್ರಾಮಕ್ಕೆ ಭೇಟಿ ನೀಡಿದ್ದಾಗ ಪ್ಲೇಗ್ ನಂತಹ ಕಾಯಿಲೆಯನ್ನು ನೋಡಿದ್ದರಂತೆ. ಅಲ್ಲದೇ, ಶಾಲೆಗಳಲ್ಲಿ ವಿದ್ಯುಚ್ಛಕ್ತಿಯಂತಹ ಮೂಲಭೂತ ಸೌಕರ್ಯ ಇರಲಿಲ್ಲ ಎಂದು ಅವರು ಹೇಳುತ್ತಾರೆ.

ನಗರದಲ್ಲಿ ಬೆಳೆದ ನನಗೆ ಆ ಮಟ್ಟಿನ ಬಡತನ ತಿಳಿದಿರಲಿಲ್ಲ. ಏನನ್ನಾದರೂ ಮಾಡಲು ಬಯಸಿದ್ದೆ. ಆಗ ನನಗೆ ಸುಮಾರು 75 ಡಾಲರ್ ಪಾಕೆಟ್ ಮನಿಯಾಗಿ ಸಿಗುತ್ತಿತ್ತು. ನನ್ನ ತಾಯಿ ಡಾ. ಜ್ಯೋತ್ಸ್ನಾ ರಂಗ ಅವರನ್ನು ಕೇಳಿ ಅದನ್ನು ರೂಪಾಯಿಗೆ ಪರಿವರ್ತಿಸಿ, ಶಾಲೆಗೆ ದೇಣಿಗೆ ನೀಡಿದೇವು. ಆದ್ದರಿಂದ ಮಕ್ಕಳು ನೋಟ್ ಬುಕ್‌ಗಳು ಮತ್ತು ಕಲಿಕೆ ಬೇಕಾದ ಕೆಲವು ಸಲಕರಣೆ ಪಡೆಯಲು ನೆರವಾಗುತಿತ್ತು ಎಂದು ಮಾಜಿ ಡಿಜಿ ಮತ್ತು ಐಜಿಪಿ ಎ ಎಸ್ ಮಾಲೂರ್ಕರ್ ಅವರ ಮೊಮ್ಮಗ ರಂಗ ತಮ್ಮ ಹಳೆಯ ನೆನಪನ್ನು ಹಂಚಿಕೊಂಡರು.
ಈಗ ವಾಷಿಂಗ್ಟನ್ ಡಿಸಿಯಲ್ಲಿ ಜಾರ್ಜ್‌ಟೌನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ನಲ್ಲಿ ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿರುವ 25 ವರ್ಷದ ರಂಗ 2006 ರಲ್ಲಿ ತಮ್ಮ ಅನುಭವವನ್ನು ಎಂದಿಗೂ ಮರೆತಿಲ್ಲ ಮತ್ತು ದೊಡ್ಡ ಮಳ್ಳೂರಿನ ಮಕ್ಕಳಿಗೆ ಎಷ್ಟು ಸಾಧ್ಯವೋ ಅಷ್ಟು ನೆರವನ್ನು ಮುಂದುವರೆಸಿದ್ದಾರೆ. ಅವರ ಇತ್ತೀಚಿನ ಭೇಟಿಯಲ್ಲಿ ಚನ್ನಪಟ್ಟಣದ ರೋಟರಿ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಸಮುದಾಯವನ್ನು ಬಾಧಿಸುವ ಆರೋಗ್ಯ ಸಮಸ್ಯೆಗಳ ಕುರಿತು ಅರಿವು ಮೂಡಿಸಿದರು. ಇದು ಕ್ಷಯರೋಗ, ಸೊಳ್ಳೆಯಿಂದ ಹರಡುವ ಕಾಯಿಲೆಗಳಿಂದ ಹಿಡಿದು ರಸ್ತೆ ಸುರಕ್ಷತೆಯವರೆಗಿನ ವಿಷಯಗಳನ್ನು ಒಳಗೊಂಡಿತ್ತು.
ಸುಮಾರು 10 ವರ್ಷಗಳ ಹಿಂದೆಯೇ ಅವರ ಪ್ರಯತ್ನ ಪ್ರಾರಂಭವಾಗಿತ್ತು. 2012-13ರಲ್ಲಿ ಚನ್ನಪಟ್ಟಣದ ರೋಟರಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಸಂವಾದಾತ್ಮಕ ರೂಪದ ಸೆಷನ್ಸ್ ನಡೆಸಲಾಗಿತ್ತು. ಒಂಬತ್ತನೇ ತರಗತಿಯ ವಿದ್ಯಾರ್ಥಿಯಾಗಿ, ನಾವು ಅವರೊಂದಿಗೆ ತೊಡಗಿಸಿಕೊಂಡರೆ ಮಾತ್ರ ಮಕ್ಕಳು ಕಲಿಯುವ ಆಸಕ್ತಿಯನ್ನು ಪಡೆಯುವ ಏಕೈಕ ಮಾರ್ಗವೆಂದು ನನಗೆ ತಿಳಿದಿತ್ತು. ಮಗು ಸರಿಯಾದ ಉತ್ತರ ಹೇಳಿದರೆ, ಅವರಿಗೆ ಮಿಠಾಯಿ ನೀಡಲಾಗುತಿತ್ತು. ಆಗಿನಿಂದಲೂ ವಾರ್ಷಿಕವಾಗಿ ಕಾರ್ಯಾಗಾರ ಆಯೋಜಿಸುತ್ತಾ ಬರುತ್ತಿದ್ದೇವೆ. ಹಣವನ್ನು ಸಂಗ್ರಹಿಸಿ, ಅಲ್ಲಿನ ಸರ್ಕಾರಿ ಶಾಲೆಗಳಲ್ಲಿ ಒಂದಕ್ಕೆ ಕಂಪ್ಯೂಟರ್ ಕೊಡುಗೆಯಾಗಿ ನೀಡಿದ್ದೇವೆ ಎಂದು 2012 ರಲ್ಲಿ ನ್ಯಾಷನಲ್ ಜಿಯಾಗ್ರಫಿಕ್ ಬೀನಲ್ಲಿ ನಾಲ್ಕನೇ ಸ್ಥಾನ ಪಡೆದ ರಂಗ ಹೇಳುತ್ತಾರೆ.

ವಿದ್ಯಾರ್ಥಿಗಳು ಗಮನವಿಟ್ಟು ಕೇಳುತ್ತಿದ್ದ ದೃಶ್ಯ.
ಐದು ವರ್ಷಗಳ ಅವಧಿಯಲ್ಲಿ ಚನ್ನಪಟ್ಟಣದ ಹಲವು ಶಾಲೆಗಳಲ್ಲಿ ಸ್ಕೈಪ್ ಪಾಠಗಳನ್ನು ಅವರು ಆಯೋಜಿಸಿದ್ದಾರೆ. 2014 ರಿಂದ 2019 ರವರೆಗೆ ಈ ಪಾಠ ನಡೆಯಿತು. ಕೋವಿಡ್ ನಂತರ ಅದನ್ನು ನಿಲ್ಲಿಸಬೇಕಾಯಿತು. ಭಾರತದಲ್ಲಿ ಪ್ರತಿ ಶನಿವಾರ ಬೆಳಗ್ಗೆ ಪಾಠಗಳು ನಡೆಯುತ್ತಿದ್ದವು. ಮಕ್ಕಳೊಂದಿಗೆ ಒಂದು ಗಂಟೆ ಕೆಲಸ ಮಾಡಿ ಪಾಠ ಹೇಳುತ್ತಿದ್ದೆವು. ಈಗ, ವೈದ್ಯಕೀಯ ವಿದ್ಯಾರ್ಥಿಯಾಗಿರುವುದರಿಂದ ನನಗೆ ಅದನ್ನು ಸಂಘಟಿಸಲು ಸ್ವಲ್ಪ ಕಷ್ಟವಾಗುತ್ತಿದೆ, ಆದರೆ ಅವಕಾಶ ನೀಡಿದರೆ, ಅದನ್ನು ಮರಳಿ ಪಡೆಯಲು ಇಷ್ಟಪಡುತ್ತೇನೆ. ಶಾಲೆಯ ಪ್ರಾಂಶುಪಾಲರೊಂದಿಗೆ ಮಾತುಕತೆ ನಡೆಸಿದ್ದು, ಅದನ್ನು ಪುನರ್ ಆರಂಭಿಸಲು ಅವರು ಕೂಡಾ ಉತ್ಸುಕರಾಗಿದ್ದಾರೆ ಎಂದು ರಂಗ ತಿಳಿಸಿದರು.
ಇದನ್ನೂ ಓದಿ: ಬದಲಾವಣೆಯ ಕಿರಣಗಳು: ಉಡುಪಿಯ 61 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೌರಶಕ್ತಿ ಅಳವಡಿಸಿಕೊಳ್ಳಲು ಮುಂದು
ನನ್ನ ತಾಯಿಯ ಪೂರ್ವಜರ ಊರಿಗೆ ಏನಾದಾರೂ ಮಾಡುವ ಸಹಾಯದಿಂದ ಸಿಗುವ ಖುಷಿ ಬೇರೊಂದಿಲ್ಲ. ಬೆಂಗಳೂರಿನಲ್ಲಿರುವ ತಮ್ಮ ಕುಟುಂಬದ ನೆರವಿನಿಂದ ರಂಗ ಸಾವಿರಾರು ಕಿಲೋ ಮೀಟರ್ ದೂರದಲ್ಲಿದ್ದರೂ ರಾಜ್ಯದಲ್ಲಿ ತಮ್ಮ ಕೆಲಸ ಮುಂದುವರೆಸಲು ಸಾಧ್ಯವಾಗಿದೆ. ಇದೀಗ, ಕರ್ನಾಟಕದಲ್ಲಿ ದೊಡ್ಡ ಹುಳುಗಳ ಸಮಸ್ಯೆ ಇದೆ, ಅದರಲ್ಲೂ ವಿಶೇಷವಾಗಿ ಕಾಲಿನಿಂದ ಬರುವ ಹುಳುಗಳು ಪಾದಗಳನ್ನು ಪ್ರವೇಶಿಸುತ್ತವೆ.
ಈ ಸಮಸ್ಯೆಯನ್ನು ಅಡಿಭಾಗದಿಂದ ಶೂಗಳನ್ನು ಧರಿಸುವುದರ ಮೂಲಕ ಪರಿಹರಿಸಬಹುದಾಗಿದೆ. ನಾವು ಎನ್‌ಜಿಒಗಳು ಮತ್ತು ಸ್ಥಳೀಯ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸುತ್ತೇವೆ ಮತ್ತು ಸಾಧ್ಯವಾದಷ್ಟು ಅದನ್ನು ತಡೆಯಲು ಹಣವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ. ನಾನು ದೂರದಲ್ಲಿರುವುದರಿಂದ, ನನ್ನ ಅಜ್ಜ ಮತ್ತು ತಾಯಿ ಸಹಾಯ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.