ಯಾವುದೇ ದೇಶ ತಡೆಯೋ ಹಾಗಿಲ್ಲ! ಜಗತ್ತಿನಲ್ಲಿ ಇವರು ಮಾತ್ರ ಪಾಸ್‌ಪೋರ್ಟ್ ಇಲ್ಲದೇ ಎಲ್ಲಿಗೆ ಬೇಕಾದ್ರೂ ಹೋಗಬಹುದು!

ಯಾವ ದೇಶವೂ ಇವರನ್ನು ಪ್ರಶ್ನಿಸೋ ಹಾಗಿಲ್ಲ! ಪಾಸ್‌ಪೋರ್ಟ್ ಇಲ್ಲದೆ ವಿದೇಶಿ ಪ್ರವಾಸ ಮಾಡುವ ಜಗತ್ತಿನ ಆ 3 ಮಂದಿ ವಿಶೇಷ ವ್ಯಕ್ತಿಗಳು ಯಾರು ಗೊತ್ತಾ? ಇಲ್ಲಿದೆ ಶೇ. 99 ರಷ್ಟು ಜನರಿಗೆ ಗೊತ್ತಿಲ್ಲದ ಅಚ್ಚರಿಯ ಮಾಹಿತಿ:
Passport
Online Desk
Updated on

ಸಾಮಾನ್ಯವಾಗಿ ವಿದೇಶಕ್ಕೆ ಹೋಗಲು ಪಾಸ್‌ಪೋರ್ಟ್ ಕಡ್ಡಾಯ. ಕೇವಲ ಪಾಸ್‌ಪೋರ್ಟ್ ಒಂದೇ ಅಲ್ಲಾ ವೀಸಾ ಕೂಡ ಅತ್ಯಗತ್ಯ; ವಿಶ್ವದ ಯಾವುದೇ ಬಲಶಾಲಿ ದೇಶದ ಪ್ರಧಾನಿ ಅಥವಾ ಅಧ್ಯಕ್ಷರಾಗಿದ್ದರೂ ಸಹ ವಿದೇಶಿ ಪ್ರವಾಸ ಕೈಗೊಳ್ಳುವಾಗ ಸೂಕ್ತ ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದುವುದು ನಿಯಮ. ಆದರೆ, ನಿಮಗೆ ಗೊತ್ತಾ, ಇಡೀ ಪ್ರಪಂಚದಲ್ಲಿ ಕೇವಲ ಮೂರು ಜನರಿಗೆ ವೀಸಾ ಇರಲಿ ಪಾಸ್‌ಪೋರ್ಟ್ ಕೂಡ ಬೇಡ! ಹಾಗಾದ್ರೆ, ಇಡೀ ವಿಶ್ವದಲ್ಲಿ ಪಾಸ್‌ಪೋರ್ಟ್ ಇಲ್ಲದೆ ಪ್ರಯಾಣ ಮಾಡಬಹುದಾದ ಆ ಮೂವರು ಯಾರು ಗೊತ್ತಾ? ಇಲ್ಲಿದೆ ಆ ಕುರಿತ ವರದಿ:

ಆ ಮೂರು ವಿಶೇಷ ವ್ಯಕ್ತಿಗಳು ಯಾರೆಂದರೆ, ಬ್ರಿಟನ್‌ನ ರಾಜ ಕಿಂಗ್ ಚಾರ್ಲ್ಸ್ III, ಜಪಾನ್‌ನ ಚಕ್ರವರ್ತಿ ನರುಹಿಟೊ, ಜಪಾನ್‌ನ ಸಾಮ್ರಾಜ್ಞಿ ಮಸಾಕೊ ಒವಾಟಾ. ಹೌದು, ಇಡೀ ಜಗತ್ತಿನಲ್ಲಿ ಈ ಮೂವರು ವಿಶೇಷ ವ್ಯಕ್ತಿಗಳಿಗೆ ಮಾತ್ರ ಯಾವುದೇ ಪಾಸ್‌ಪೋರ್ಟ್ ಇಲ್ಲದೆ ಅಂತರರಾಷ್ಟ್ರೀಯ ಪ್ರಯಾಣ ಮಾಡುವ ಅತ್ಯುನ್ನತ ಹಕ್ಕಿದೆ. ಹಾಗಾದ್ರೆ, ಯಾವ ದೇಶದ ವಿಮಾನ ನಿಲ್ದಾಣ ಅಥವಾ ಭದ್ರತಾ ಸಿಬ್ಬಂದಿಯೂ ಇವರನ್ನು ಪ್ರಶ್ನಿಸುವಂತಿಲ್ಲ. ಯಾಕೆ ಗೊತ್ತಾ?

Passport
ನೋಟಿನ ಮೇಲಿರೋ ನಂಬರ್ ಮಾತ್ರ ಅಲ್ಲ, ನೋಟಿನ ಹಿಂಭಾಗದಲ್ಲಿರೋ ಸ್ಮಾರಕ ನೋಡಿದ್ದೀರಾ? ಇಲ್ಲಿದೆ ಭಾರತದ ಭವ್ಯ ಪರಂಪರೆಯ ಕುರಿತ ಮಾಹಿತಿ

ಬ್ರಿಟನ್ ರಾಜ:

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಎಲ್ಲಾ ಅಧಿಕೃತ ಪಾಸ್‌ಪೋರ್ಟ್‌ಗಳನ್ನು ರಾಜನ ಹೆಸರಿನಲ್ಲೇ ನೀಡಲಾಗುತ್ತದೆ. ನಿಯಮಗಳ ಪ್ರಕಾರ, ದೇಶದ ಸಾರ್ವಭೌಮ ಮುಖ್ಯಸ್ಥರಾದ ರಾಜರು ತಮ್ಮದೇ ಹೆಸರಿನಲ್ಲಿ ನೀಡಲಾಗುವ ದಾಖಲೆಯನ್ನು ತಾವೇ ಹೊಂದುವ ಅಗತ್ಯವಿರುವುದಿಲ್ಲ. ಈ ಹಿಂದೆ ರಾಣಿ ಎಲಿಜಬೆತ್ II ಅವರಿಗೂ ಇದೇ ನಿಯಮ ಅನ್ವಯಿಸುತ್ತಿತ್ತು. ಆದರೆ, ರಾಜಮನೆತನದ ಉಳಿದ ಸದಸ್ಯರಾದ ಪ್ರಿನ್ಸ್ ವಿಲಿಯಂ ಅಥವಾ ಕೇಟ್ ಮಿಡಲ್ಟನ್ ಅವರಿಗೆ ಈ ವಿನಾಯಿತಿ ಇಲ್ಲ, ಅವರು ಪಾಸ್‌ಪೋರ್ಟ್ ಹೊಂದಿರಲೇಬೇಕು.

King of Britain
ಬ್ರಿಟನ್‌ನ ರಾಜ ಕಿಂಗ್ ಚಾರ್ಲ್ಸ್ IIIOnline Desk

ಜಪಾನ್ ಚಕ್ರವರ್ತಿ ಮತ್ತು ಸಾಮ್ರಾಜ್ಞಿ:

ಜಪಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಿಯಮದ ಪ್ರಕಾರ, ಜಪಾನ್ ದೇಶವನ್ನು ಜಾಗತಿಕವಾಗಿ ಪ್ರತಿನಿಧಿಸುವ ಸರ್ವೋಚ್ಚ ಸಾರ್ವಭೌಮ ನಾಯಕರಾದ ಚಕ್ರವರ್ತಿ ಮತ್ತು ಅವರ ಪತ್ನಿಗೆ ಪಾಸ್‌ಪೋರ್ಟ್ ಅಗತ್ಯವಿಲ್ಲ. ಇವರನ್ನು ಹೊರತುಪಡಿಸಿ ರಾಜಮನೆತನದ ಉಳಿದ ಸದಸ್ಯರು ಹಾಗೂ ಜಪಾನ್ ಪ್ರಧಾನಿ ಸೇರಿದಂತೆ ಉಳಿದೆಲ್ಲ ರಾಜತಾಂತ್ರಿಕರಿಗೂ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಕಡ್ಡಾಯವಾಗಿರುತ್ತದೆ.

Emperor and Empress of Japan
ಜಪಾನ್‌ನ ಸಾಮ್ರಾಜ್ಞಿ ಮಸಾಕೊ ಒವಾಟಾ ಮತ್ತು ಚಕ್ರವರ್ತಿ ನರುಹಿಟೊOnline Desk

ಹಾಗಾದ್ರೆ, ಪ್ರಯಾಣದ ಸಂದರ್ಭದಲ್ಲಿ ನಿಯಮಗಳು ಹೇಗೆ ಕೆಲಸ ಮಾಡುತ್ತವೆ?

ಈ ಮೂವರು ವಿದೇಶಕ್ಕೆ ಪ್ರಯಾಣ ಬೆಳೆಸುವಾಗ ಯಾವುದೇ ಸಾಮಾನ್ಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಥವಾ ಇಮಿಗ್ರೇಷನ್ ಕೌಂಟರ್‌ಗಳಲ್ಲಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಯಾಕಂದ್ರೆ, ಇವರ ಪ್ರಯಾಣದ ಸಂಪೂರ್ಣ ಜವಾಬ್ದಾರಿಯನ್ನು ಆಯಾ ದೇಶಗಳ ವಿದೇಶಾಂಗ ಸಚಿವಾಲಯಗಳು ಮತ್ತು ರಾಜತಾಂತ್ರಿಕ ನಿಯೋಗಗಳು ಮುಂಚಿತವಾಗಿಯೇ ವ್ಯವಸ್ಥೆಗೊಳಿಸುತ್ತವೆ. ಇವರ ಅಧಿಕೃತ ಭೇಟಿಯ ಮಾಹಿತಿಯೇ ಇವರ ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.

Passport
ಕೋಹಿನೂರ್‌ಗಿಂತಲೂ ಹೆಚ್ಚು ಬೆಲೆ ಬಾಳುವ ದುಬಾರಿ ವಜ್ರಗಳಿವು

ಮುಂದುವರೆದು, ಅಮೆರಿಕದ ಅಧ್ಯಕ್ಷರು ಅಥವಾ ಭಾರತದ ಪ್ರಧಾನಿ ಯಂತಹ ಪ್ರಭಾವಿ ನಾಯಕರು ವಿದೇಶಕ್ಕೆ ಹೋಗುವಾಗಲೂ ಪಾಸ್‌ಪೋರ್ಟ್ ಬೇಕಾಗುತ್ತದೆ. ಆದರೆ ಅವರಿಗೆ ಸಾಮಾನ್ಯ ಪಾಸ್‌ಪೋರ್ಟ್ ಬದಲಿಗೆ ಅತ್ಯುನ್ನತ ದರ್ಜೆಯ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ನೀಡಲಾಗುತ್ತದೆ. ಇದರ ಮೂಲಕ ಅವರಿಗೆ ಯಾವುದೇ ದೇಶದಲ್ಲಿ ಕಟ್ಟುನಿಟ್ಟಿನ ತಪಾಸಣೆ ಇಲ್ಲದೆ ವಿಶೇಷ ರಾಜತಾಂತ್ರಿಕ ವಿನಾಯಿತಿ ದೊರೆಯುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com