ಕ್ರೀಡೆ

ಡ್ರಾಗೆ ಆನಂದಪಟ್ಟ ವಿಶ್ವನಾಥನ್

ಡ್ರಾಗೆ ಆನಂದಪಟ್ಟ ವಿಶ್ವನಾಥನ್
Published On :

ಬಡೆನ್-ಬಡೆನ್: ಟಾಟಾ ಸ್ಟೀಲ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ  ಸ್ಥಾನಗಳಿಸಿದ್ದ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಇಲ್ಲಿ ನಡೆಯುತ್ತಿರುವ ಗ್ರೆಂಕ್ ಕ್ಲಾಸಿಕ್ ಓಪನರ್ ಚೆಸ್ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಡ್ರಾ ಸಾಧಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಇಂಗ್ಲೆಂಡ್‌ನ ಮೈಕಲ್ ಆ್ಯಡಮ್ಸ್ ವಿರುದ್ಧದ ಪಂದ್ಯದಲ್ಲಿ ಆನಂದ್ ಡ್ರಾ ಸಾಧಿಸಿದರು.
ಇತ್ತ ಪಂದ್ಯಾವಳಿಯ ಮತ್ತೋರ್ವ ಪ್ರಮುಖ ಆಟಗಾರ ಇಟಲಿಯ ಫ್ಯಾಬಿಯಾನೊ ಕರೌನಾ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಜಯಗಳಿಸುವ ಮೂಲಕ ಪಂದ್ಯಾವಳಿಯನ್ನು ಗೆಲುವಿನೊಂದಿಗೆ ಆರಂಭಿಸಿದ್ದಾರೆ.
ತಮ್ಮ ಎದುರಾಳಿ ಜರ್ಮನಿಯ ಜಾರ್ಜ್ ಮೈರ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಮೂಲಕ ಕರೌನಾ ಸುಲಭದ ಜಯ ಸಾಧಿಸಿದರು.
ಈ ಮೂಲಕ ಕರೌನಾ ಆರು ಆಟಗಾರರ ಡಬಲ್ ರೌಂಡ್ ರಾಬಿನ್ ಪಂದ್ಯಾವಳಿಯಲ್ಲಿ ಒಂದು ಅಂಕಗಳನ್ನು ಗಳಿಸುವ ಮೂಲಕ ಅಗ್ರ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಅರ್ಧ ಅಂಕಗಳನ್ನು ಗಳಿಸಿರುವ ಆನಂದ್, ಆ್ಯಡಮ್ಸ್, ಫ್ರೈಡ್‌ಮ್ಯಾನ್ ಮತ್ತು ನೈಡಿಸ್ಕ್ ಇದ್ದಾರೆ.
ಇನ್ನು ಮೊದಲ ಸುತ್ತಿನ ಪಂದ್ಯದಲ್ಲಿ ಸೋತ ಜಾರ್ಜ್ ಮೈರ್ ಶೂನ್ಯ ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.