ಕ್ರೀಡೆ

ಟಿ3 2ನೇ ಆವೃತ್ತಿ 16 ರಿಂದ ಆರಂಭ

Published On :

ಬೆಂಗಳೂರು: ಕಮ್ಯೂನ್ ಟಿ3 ಟೀಂ ಟೆನಿಸ್ ತನ್ನ ಎರಡನೇ ಆವೃತ್ತಿಯ ದಿನಾಂಕವನ್ನು ನಿಗಧಿಪಡಿಸಿದ್ದು, ಫೆ.16 ಹಾಗೂ 17 ರಂದು ನಡೆಯಲಿದೆ. ಈ ಪಂದ್ಯಾವಳಿಯು ಕ್ರಿಕೆಟ್‌ನಲ್ಲಿ ಟಿ20 ಮಾದರಿಯ ಚುಟುಕು ಕ್ರೀಡೆಯ ರೀತಿಯದಾಗಿದ್ದು, ಎಲ್ಲಾ ವಯಸ್ಸಿನ ಟೆನಿಸ್ ಆಟಗಾರರನ್ನು ಒಂದೆಡೆಗೆ ತುವ ಪ್ರಯತ್ನ ಇದಾಗಿದೆ. ಕಮ್ಯೂನ್ ಟಿ3 ಟೀಂ ಟೆನಿಸ್ ಪಂದ್ಯಾವಳಿಯು ದೇಶದ ಎಲ್ಲಾ ಕ್ಲಬ್ ಹಾಗೂ ಟೆನಿಸ್ ಅಕಾಡೆಮಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಬಹುದಾಗಿದ್ದು, 3 ಸೂಪರ್ ಟೈ ಬ್ರೇರ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದೆ. ಪಂದ್ಯಾವಳಿಯ 35 ವರ್ಷದ ಮೇಲ್ಪಟ್ಟ ಹಾಗೂ 45 ವರ್ಷ ಮೇಲ್ಪಟ್ಟವರ ಡಬಲ್ಸ್ ಮುಕ್ತ ವಿಭಾಗದ ಪ್ರವೇಶದಲ್ಲಿ ಒಂದು ಡಬಲ್ಸ್ ತಂಡಗಳು ಭಾಗವಹಿಸಬಹುದಾಗಿದ್ದು, ಯಾವುದೇ ವಯಸ್ಸಿನವರು ಇಲ್ಲಿ ಭಾಗವಹಿಸಬಹುದಾಗಿದೆ. 3ರಲ್ಲಿ 2 ವಿಭಾಗಗಳಲ್ಲಿ ಜಯಗಳಿಸಿದವರು ಟೈ3 ಪ್ರಶಸ್ತಿಯನ್ನುಪಡೆಯಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.