ಕ್ರೀಡೆ

ಇಂಗ್ಲೆಂಡ್ ವಿರುದ್ಧ ಕಿವೀಸ್ಗೆ ಜಯ: ಸರಣಿ ಸಮಬಲ

ಇಂಗ್ಲೆಂಡ್ ವಿರುದ್ಧ ಕಿವೀಸ್ಗೆ ಜಯ: ಸರಣಿ ಸಮಬಲ
Published On :

ಹ್ಯಾಮಿಲ್ಟನ್: ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದ ನ್ಯೂಜಿಲೆಂಡ್ ತಂಡ, ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 55ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯನ್ನು ಸಮಬಲ ಮಾಡಿಕೊಂಡಿದೆ.
ನಾಯಕ ಮೆಕಲಂ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡವು ನಿಗದಿತ 20 ಓವರ್ಗಳಲ್ಲಿ 192 ರನ್ಗಳ ಉತ್ತಮ ಮೊತ್ತ ಕಲೆಹಾಕಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ತಂಡ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಆರಂಭಿಕರಾಗಿ ಕಣಕ್ಕಿಳಿದ ಮಾರ್ಟಿನ್ ಗುಪ್ಟಿಲ್ ಹಾಗೂ ರೂತರ್ಫೋರ್ಡ್ ಮೊದಲ ವಿಕೆಟ್ಗೆ ಕೇವಲ 8.2 ಓವರ್ಗಳಲ್ಲಿ 75ರನ್ಗಳನ್ನು ಕಲೆ ಹಾಕಿ ಭದ್ರ ಅಡಿಪಾಯ ಹಾಕಿಕೊಟ್ಟರು.
ಈ ವೇಳೆ 27 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ಗಳು ಸೇರಿದ 40ರನ್ಗಳಿಸಿದ್ದ ರೂತರ್ಫೋರ್ಡ್ ರೈಟ್ ಎಸೆತದಲ್ಲಿ ಬಟ್ಲರ್ಗೆ ಕ್ಯಾಚ್ ನೀಡಿ ಹೊರ ನಡೆದರು.
ಈ ವೇಳೆ ಕ್ರಿಸ್ಗಿಳಿದ ನಾಯಕ ಮೆಕಾಲಂ ಗುಪ್ಟಿಲ್ ಜತೆಗೂಡಿ 30ರನ್ಗಳ ಜತೆಯಾಟವಾಡಿದರು. ತಂಡದ ಮೊತ್ತ 105 ಆಗಿದ್ದಾಗ 31 ಎಸೆತಗಳಲ್ಲಿ 47 ರನ್ಗಳಿಸಿದ್ದ ಗುಪ್ಟಿಲ್ ಟ್ರೆಡ್ವೆಲ್ ಎಸೆತದಲ್ಲಿ ಹೆಲ್ಸ್ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.
ನಂತರ ಬಂದ ಯಾವುದೇ ಬ್ಯಾಟ್ಸ್ಮನ್ಗಳು ಕ್ರಿಸ್ನಲ್ಲಿ ನಿಂತು ನಾಯಕ ಮೆಕಲಂಗೆ ಉತ್ತಮ ಬೆಂಬಲ ನೀಡಲು ವಿಫಲರಾದರು. ಟೇಲರ್ 4 ರನ್ಗಳಿಸಿ ರೈಟ್ ಎಸೆತದಲ್ಲಿ ಬೇರ್ಸ್ಟೋಗೆ ಕ್ಯಾಚ್ ನೀಡಿದರೆ, ಮುನ್ರೊ 7ರನ್ಗಳಿಸಿ ಡರ್ನ್ಬ್ಯಾಚ್ ಎಸೆತದಲ್ಲಿ ಬೇರ್ಸ್ಟೋಗೆ ಕ್ಯಾಚ್ ನೀಡಿದರು. ನಂತರ ಬಂದ ಎಲಿಯಟ್, ಡರ್ನ್ಬ್ಯಾಚ್ ಎಸೆತದಲ್ಲಿ ಬೌಲ್ಡ್ ಆದರೆ, ಫ್ರಾಂಕ್ಲಿನ್ ಅಜೇಯ 6 ಹಾಗೂ ನಾಥನ್ ಮೆಕಲಂ ಶೂನ್ಯ ಸಂಪಾದನೆಯಲ್ಲಿ ಅಜೇಯರಾಗುಳಿದರು.
ಮಿಂಚಿದ ಮೆಕಲಂ: ತಂಡದ ನಾಕತ್ವದ ಜವಾಬ್ದಾರಿ ಹೊತ್ತಿರುವ ಬ್ರೆಂಡನ್ ಮೆಕಲಂ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೇವಲ 38 ಎಸೆತಗಳನ್ನು ಎದುರಿಸಿದ ಮೆಕಲಂ 6 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ಗಳ ನೆರವಿನಿಂದ 74ರನ್ ಗಳಿಸಿದರು.
ಆಂಗ್ಲರಿಗೆ ಆರಂಭಿಕ ಕುಸಿತ: ಆತಿಥೇಯ ತಂಡ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಆಂಗ್ಲರಿಗೆ ಉತ್ತಮ ಆರಂಭ ದೊರಕಲಿಲ್ಲ. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಮೈಕಲ್ ಲಂಬ್ ಹಾಗೂ ಹೇಲ್ಸ್, ಮೊದಲ ವಿಕೆಟ್ಗೆ ಕೇವಲ 9ರನ್ ಕಾಣಿಕೆ ನೀಡಿದರು.
ಈ ವೇಳೆ 5ರನ್ಗಳಿಸಿದ್ದ ಹೇಲ್ಸ್, ಕಿವೀಸ್ನ ವೇಗಿ ಮೆಕ್ಲೆನಗನ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ತಂಡದ ಆರಂಭಿಕ ಕುಸಿತಕ್ಕೆ ನಾಂದಿ ಹಾಡಿದರು.
ನಂತರ ಬಂದ ಆಲ್ರೌಂಡರ್ ಲ್ಯೂಕ್ ರೈಟ್ ಮೊದಲ ಎಸೆತದಲ್ಲೇ ಗುಪ್ಟಿಲ್ಗೆ ಕ್ಯಾಚ್ ನೀಡಿ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್ ಸೇರಿಕೊಂಡರು.   
ನಂತರ ಲಂಬ್ 17, ಬೇರ್ಸ್ಟೋ 8, ಹಾಗೂ ಮಾರ್ಗನ್ 13 ರನ್ಗಳಿಸಿ ಔಟಾದರು. ಈ ಮೂಲಕ ತಂಡದ ಮೊತ್ತ 47 ಆಗುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ಬಂದ ಬಟ್ಲರ್ 54 ರನ್ ಹಾಗೂ ಟ್ರೆಡ್ವೆಲ್ 22 ರನ್ ಗಳಿಸಿದರಾದರೂ, ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 19.3 ಓವರ್ಗಳಲ್ಲಿ 137ರನ್ ಗಳಿಸಿದ ಇಂಗ್ಲೆಂಡ್ ಆಲೌಟ್ ಆಗುವ ಮೂಲಕ 55ರನ್ಗಳ ಸೋಲನುಭವಿಸಿತು.
ನ್ಯೂಜಿಲೆಂಡ್ ತಂಡದ ಪರ 15 ರನ್ಗಳಿಗೆ 4 ವಿಕೆಟ್ ಪಡೆದ ಫ್ರಾಂಕ್ಲಿನ್ ಯಶಸ್ವಿ ಬೌಲರ್ ಎನಿಸಿದರು.


ಸಂಕ್ಷಿಪ್ತ ಸ್ಕೋರ್


ನ್ಯೂಜಿಲೆಂಡ್ 192/6 (20 ಓ.)
ಮೆಕಲಂ 74 (38)
ಗುಪ್ಟಿಲ್ 47 (31)
ಬೌಲಿಂಗ್: ಡರ್ನ್ಬ್ಯಾಚ್ 38/3, ರೈಟ್ 24/2
ಇಂಗ್ಲೆಂಡ್ 137/10 (19.3 ಓ)
ಬಟ್ಲರ್ 54 (30)
ಟ್ರೆಡ್ವೆಲ್ 22 (11)
ಬೌಲಿಂಗ್: ಫ್ರಾಂಕ್ಲಿನ್ 15/4, ಬಟ್ಲರ್ 9/2


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.