ಲಂಕಾ, ಆಫ್ರಿಕಾ ನಡುವೆ ಔಪಚಾರಿಕ ಕದನ
ಕಟಕ್: ಮಿಗ್ನನ್ ಡು ಪ್ರೀಜ್ ನಾಯಕತ್ವದ ದಕ್ಷಿಣ ಆಫ್ರಿಕಾ ವನಿತೆಯರ ಕ್ರಿಕೆಟ್ ತಂಡ, ಬುಧವಾರ ಇಲ್ಲಿನ ಬಾರಾಮತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹಿಳಾ ವಿಶ್ವಕಪ್ನ ಸೂಪರ್ ಸೀರಿಸ್ ಹಂತದ 'ಔಪಚಾರಿಕ' ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಎರಡೂ ತಂಡಗಳು ಈ ಬಾರಿಯ ವಿಶ್ವಕಪ್ನ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿವೆ. ಆದರೆ, ಪ್ರತಿಷ್ಠೆಯ ದೃಷ್ಟಿಕೋನದಲ್ಲಿ ಈ ಎರಡೂ ತಂಡಗಳು ಕಣಕ್ಕಿಳಿಯಬೇಕಿದೆ.
ಸೂಪರ್ ಲೀಗ್ ಅಂಕಪಟ್ಟಿಯಲ್ಲಿ ಶ್ರೀಲಂಕಾ ತಂಡ ಒಟ್ಟು ಆರು ಅಂಕಗಳನ್ನು ಪಡೆದಿದ್ದು, ಪಟ್ಟಿಯ ಆರನೇ ಸ್ಥಾನದಲ್ಲಿದೆ. ಆದರೆ, ದಕ್ಷಿಣ ಆಫ್ರಿಕಾ ತಂಡ, ಸೂಪರ್ ಸಿಕ್ಸ್ ಹಂತದಲ್ಲಿ ತಾನು ಈವರೆಗೆ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಸೋತು 'ಶೂನ್ಯ'ದೊಂದಿಗೆ ಸೂಪರ್ ಸಿಕ್ಸ್ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದೆ.
ಈ ಪಂದ್ಯದಲ್ಲಿ ಶ್ರೀಲಂಕಾ ಜಯಗಳಿಸಿದರೆ, ತನ್ನ ರನ್ರೇಟ್ನಲ್ಲಿ ಏರಿಕೆಯನ್ನು ಪಡೆಯುತ್ತದೆ. ಇದು ಪಂದ್ಯಾವಳಿಯಲ್ಲಿ ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕಾಗಿ ನಡೆಯಲಿರುವ ಪಂದ್ಯಗಳಲ್ಲಿ ಭಾಗವಹಿಸುವ ಅವಕಾಶ ಪಡೆಯಬಹುದು. ಆದರೆ, ಅತ್ತ, ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡ, ಈ ಪಂದ್ಯದಲ್ಲಿ ಗೆದ್ದರೂ ಅದಕ್ಕೇನೂ ಲಾಭವಾಗದು. ಗೆದ್ದಲ್ಲಿ, ಆ ತಂಡ ಎರಡು ಅಂಕಗಳನ್ನು ಸಂಪಾದಿಸುವುದಾದರೂ, ಅಂಕಪಟ್ಟಿಯ ಕೊನೆಯ ಸ್ಥಾನದಲ್ಲೇ ಉಳಿಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

