ಕ್ರೀಡೆ

2.37 ಕೋಟಿ ಪ್ರೇಕ್ಷಕರ ವಿಕ್ಷಣೆ

Published On :

ನವದೆಹಲಿ: ಭಾರತ ಆತಿಥ್ಯ ವಹಿಸಿಕೊಂಡಿರುವ ಮಹಿಳಾ ವಿಶ್ವಕಪ್ ಪಂದ್ಯಾವಳಿಗೆ ಪ್ರೇಕ್ಷಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಈ ಪಂದ್ಯಾವಳಿಯ ಮೊದಲೆರಡು ಪಂದ್ಯಗಳನ್ನು 2.37 ಕೋಟಿ ಪ್ರೇಕ್ಷಕರು ವಿಕ್ಷಣೆ ಮಾಡಿದ್ದಾರೆ. ಈ ಪಂದ್ಯಾವಳಿಯನ್ನು ಸ್ಟಾರ್ ಕ್ರಿಕೆಟ್ ಹಾಗೂ ಸ್ಟಾರ್ ಕ್ರಿಕೆಟ್ ಎಚ್ಡಿ ವಾಹಿನಿಗಳು ಪ್ರಸಾರ ಮಾಡುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2009ರಲ್ಲಿ ಸಿಡ್ನಿಯಲ್ಲಿ ನಡೆದ ವಿಶ್ವಕಪ್ನ ಒಟ್ಟಾರೆ ಪಂದ್ಯಾವಳಿಯನ್ನು 25 ಲಕ್ಷ ಪ್ರೇಕ್ಷಕರು ವಿಕ್ಷಿಸಿದ್ದು, 2013ರಲ್ಲಿ ಇದರ ಪ್ರಮಾಣ 9 ಪಟ್ಟು ಹೆಚ್ಚಾಗಿದೆ. ನಮಗೆ ದೊರೆತಿರುವ ಪ್ರತಿಕ್ರಿಯೆಯಿಂದ ನಮಗೆ ಬಹಳ ಸಂತೋಷವಾಗಿದ್ದು, ವಿಶ್ವದ ದೊಡ್ಡ ಕ್ರಿಕೆಟ್ ಮಾರುಕಟ್ಟೆಯಲ್ಲಿ 2013ರ ಮಹಿಳಾ ವಿಶ್ವಕಪ್ ಹೆಚ್ಚಿನ ಪ್ರಮಾಣದಲ್ಲಿ ಆಸಕ್ತಿಯನ್ನು ಹುಟ್ಟಿಸಿದೆ. ಈ ಒಂದು ಬೆಳವಣಿಗೆ ಭವಿಷ್ಯದ ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಇಎಸ್ಪಿಎನ್ನ ವ್ಯವಸ್ಥಾಪಕ ನಿರ್ದೇಶಕರಾದ ಅಲೋಕೆ ಮಲಿಕ್ ತಿಳಿಸಿದ್ದಾರೆ. ಭಾರತದಲ್ಲಿ ಹೆಚ್ಚಿನ ಜನರು ಮಹಿಳಾ ಕ್ರಿಕೆಟ್ ಆಡದಿದ್ದರೂ ಮಹಿಳಾ ಕ್ರಿಕೆಟ್ನಲ್ಲಿ ಅಭಿಮಾನ ಹೊಂದಿದ್ದಾರೆ. ನಾವು ಸ್ಟಾರ್ ಸ್ಫೋರ್ಟ್ಸ್ನ ಸಹಯೋಗದಲ್ಲಿ ಭಾರತದಲ್ಲಿನ ಪ್ರೇಕ್ಷಕರನ್ನು ತಲುಪಲು ಸುಲಭವಾಗಿದ್ದು, ಮಹಿಳಾ ಕ್ರಿಕೆಟ್ಗೆ ಜಗತ್ತಿನಾದ್ಯಂತ ಉತ್ತಮ ಜಾಹೀರಾತು ಪಡೆಯಲು ಸಾಧ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.