ಕ್ರೀಡೆ

ಆಸೀಸ್ಗೆ ವಿಂಡೀಸ್ ಸವಾಲು

Published On :

ಮುಂಬೈ: ಈ ಬಾರಿಯ ಮಹಿಳಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿ ಸೂಪರ್ ಸಿಕ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಗಳಿಸುವ ಮೂಲಕ, ಪಂದ್ಯಾವಳಿಯ 'ಡಾರ್ಕ್ ಹಾರ್ಸ್' ಎಂದೇ ಹೆಸರಾಗಿರುವ ವೆಸ್ಟ್ ಇಂಡೀಸ್, ಬುಧವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಸೂಪರ್ ಸಿಕ್ಸ್ ವಿಭಾಗದ ತನ್ನ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 48 ರನ್ಗಳ ಅಂತರದಲ್ಲಿ ಸೋಲಿಸಿದ್ದ ವೆಸ್ಟ್ ಇಂಡೀಸ್, ಫೈನಲ್ಗೆ ಲಗ್ಗೆಯಿಡಲು ತುದಿಗಾಲಲ್ಲಿ ನಿಂತಿದೆ. ನಾಯಕಿ ಮೆರಿಸ್ಸಾ ಆಗ್ಯುರಿಲ್ಲಾ ಅವರ ತಂತ್ರಗಳು ಆಸೀಸ್ಗೆ ಬುಧವಾರದ ಪಂದ್ಯದಲ್ಲಿ ಯಾವ ರೀತಿ ಸವಾಲಾಗಿ ಪರಿಣಮಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು, ಬ್ಯಾಟಿಂಗ್ ವಿಭಾಗದಲ್ಲಿ ಸ್ಟೆಫಾನಿ ಟೇಲರ್ ಅವರೇ ಪ್ರಮುಖ ಬ್ಯಾಟರ್. ಈ ಪಂದ್ಯಾವಳಿಯಲ್ಲಿ ಇದುವರೆಗೂ 304 ರನ್ ಕಲೆಹಾಕಿರುವ ಅವರು, ವಿಂಡೀಸ್ ಬ್ಯಾಟಿಂಗ್ನ ಶಕ್ತಿ. ಅವರೊಂದಿಗೆ ಮಧ್ಯಮ ಕ್ರಮಾಂಕದ ಡಾಟಿನ್ ಅವರನ್ನು ಆಸೀಸ್ ಕಡೆಗಣಿಸುವಂತಿಲ್ಲ. ಬೌಲಿಂಗ್ನಲ್ಲಿ ವೇಗಿ ಟ್ರೆಮೇನ್ ಸ್ಮಾರ್ಟ್ ಪ್ರಮುಖರು. ಇನ್ನು, ಅತ್ತ ಆಸೀಸ್ ಪಾಲಿಗೆ ಜೂಡಿ ಫೀಲ್ಡ್ಸ್ ಅವರ ಜಾಣ್ಮೆಯ ನಿರ್ಧಾರಗಳೇ ಆ ತಂಡವನ್ನು ವಿಂಡೀಸ್ ವಿರುದ್ಧ ಗೆಲ್ಲಿಸಬಹುದು. ಕಳೆದೆರಡು ಪಂದ್ಯಗಳಿಂದ ದೂರ ಸರಿದಿದ್ದ ವೇಗಿ ಎಲೀಸ್ ಪೆರ್ರಿ, ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು, ಆ ತಂಡದ ಬ್ಯಾಟಿಂಗ್ ಲೈನ್ ಅಪ್ನಲ್ಲಿ ಮೆಗ್ ಲ್ಯಾನಿಂಗ್ ಪ್ರಮುಖರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.