ಕ್ರೀಡೆ

ದಿಯು ವಿರುದ್ಧ ರಾಜ್ಯಕ್ಕೆ ಜಯ

Published On :

ಕೋಲಮ್: ಈ ಬಾರಿಯ ಸಂತೋಷ್ ಟ್ರೋಫಿಯಲ್ಲಿ ಹಿಮಾಚಲ ಪ್ರದೇಶದ ಮೇಲೆ ಜಯ ಸಾಧಿಸುವ ಮೂಲಕ ತನ್ನ ಅಭಿಯಾನ ಆರಂಭಿಸಿದ್ದ ಕರ್ನಾಟಕ ಫುಟ್ಬಾಲ್ ತಂಡ, ಮಂಗಳವಾರ ನಡೆದ ತನ್ನ ದ್ವಿತೀಯ ಲೀಗ್ ಪಂದ್ಯದಲ್ಲಿ ದಿಯು-ದಮನ್ ವಿರುದ್ಧ 4-1 ಗೋಲುಗಳಿಂದ ಜಯ ಸಾಧಿಸಿತು.
ಪಂದ್ಯದಲ್ಲಿ ಮಿಂಚಿದ ಕರ್ನಾಟಕದ ಆಟಗಾರ ಸ್ಟೀಫನ್, ಮೂರು ಗೋಲು ಗಳಿಸಿ, ಕರ್ನಾಟಕದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪಂದ್ಯದ 25ನೇ ನಿಮಿಷದಲ್ಲಿ ರಾಜೇಶ್ ಅವರು ಕರ್ನಾಟಕಕ್ಕೆ ಮೊದಲ ಗೋಲು ಗಳಿಸಿಕೊಟ್ಟರು. ಆನಂತರ, ಸ್ಟೀಫನ್ ಅವರು ಕರ್ನಾಟಕಕ್ಕೆ ಪಂದ್ಯದ 39ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿಕೊಟ್ಟರು.
ಅತ್ತ, ಪಂದ್ಯದ 49ನೇ ನಿಮಿಷದಲ್ಲಿ ಡಿಯು-ದಮನ್ ತಂಡವೂ ತನ್ನ ಗೋಲಿನ ಖಾತೆ ತೆರೆಯಿತು. ಆ ತಂಡದ ಸಾಜಿಬ್ ಕುಮಾರ್ ಅವರು, ಈ ಗೋಲು ಬಾರಿಸಿದರು.
ತದನಂತರ, ಕರ್ನಾಟಕದ ಸ್ಟೀಫನ್ ಅವರು ಪಂದ್ಯದ 62ನೇ ನಿಮಿಷದಲ್ಲಿ ಕರ್ನಾಟಕಕ್ಕೆ ಮೂರನೇ ಗೋಲು ದಾಖಲಿಸಿಕೊಟ್ಟರು.
ಆನಂತರ, ಪಂದ್ಯದ 81ನೇ ನಿಮಿಷದಲ್ಲಿ ಅವರು ಗಳಿಸಿದ ಮತ್ತೊಂದು ಗೋಲು ಕರ್ನಾಟಕ ತಂಡ,  ದಮನ್ ಹಾಗೂ ಡಿಯು ತಂಡದ ವಿರುದ್ಧ ಸಂಪೂರ್ಣವಾಗಿ ಹಿಡಿತ ಸಾಧಿಸುವಲ್ಲಿ ನೆರವಾಯಿತು.
ಸಾಜಿಬ್ ಕುಮಾರ್ ಅವರು ಗೋಲು ದಾಖಲಿಸಿದ್ದು ಬಿಟ್ಟರೆ, ಎದುರಾಳಿ ತಂಡದಿಂದ ಮತ್ಯಾವ ಗೋಲೂ ದಾಖಲಾಗಲಿಲ್ಲ.
ಇದರಿಂದಾಗಿ, ಕರ್ನಾಟಕದ ಪ್ರಾಬಲ್ಯ ಕೊನೆಯವರೆಗೂ ಮುಂದುವರೆಯಿತು. ಅಂತಿಮವಾಗಿ, ಕರ್ನಾಟಕ 4-1ರ ಅಂತರದಲ್ಲಿ ಪಂದ್ಯದಲ್ಲಿ ಜಯ ಸಾಧಿಸಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.