ಕಿವೀಸ್ಗೆ ಆಂಗ್ಲರ ದೊಡ್ಡ ಸವಾಲು
ಮುಂಬೈ: ಸಾರಾ ಟೇಲರ್ ಹಾಗೂ ಎಡ್ವರ್ಡ್ ಇಬ್ಬರ ಅರ್ಧ ಶತಕಗಳ ಸಹಾಯಿದಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ, ಬುಧವಾರ ನಡೆದ ಮಹಿಳಾ ವಿಶ್ವಕಪ್ ಸೂಪರ್ ಸಿಕ್ಸ್ ಹಂತದ ಕೊನೆಯ ಪಂದ್ಯದಲ್ಲಿ, ಎದುರಾಳಿ ನ್ಯೂಜಿಲೆಂಡ್ ವಿರುದ್ಧ 266 ರನ್ ಪೇರಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್, 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ್ದ ನ್ಯೂಜಿಲೆಂಡ್, ಪತ್ರಿಕೆ ಮುದ್ರಣಕ್ಕೆ ಹೋಗುವ ಸಂದರ್ಭದಲ್ಲಿ 1 ವಿಕೆಟ್ ನಷ್ಟಕ್ಕೆ 71 ರನ್ (15 ಓವರ್) ಗಳಿಸಿತ್ತು.
ಮಿಂಚಿದ ಟೇಲರ್: ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆಂಗ್ಲರು, ಆ ಅವಕಾಶವನ್ನು ಸಮರ್ಥವಾಗಿ ಉಪಯೋಗಿಸಿಕೊಂಡರು.
ಆರಂಭಿಕ ಆಟಗಾರ್ತಿಯರಾದ ಎಡ್ವರ್ಡ್ಸ್ ಹಾಗೂ ವ್ಯಾಟ್ ಇಬ್ಬರೂ ಮೊದಲ ವಿಕೆಟ್ಗೆ 59 ರನ್ಗಳ ಜೊತೆಯಾಟವನ್ನು ನೀಡಿತು. ಇನಿಂಗ್ಸ್ನ 17ನೇ ಓವರ್ನಲ್ಲಿ ವ್ಯಾಟ್ ಅವರು ವಿಕೆಟ್ ಒಪ್ಪಿಸಿ ಹೊರನಡೆದ ನಂತರವೂ, ತಮ್ಮ ಮೊನಚು ಬ್ಯಾಟಿಂಗ್ ಮುಂದುವರೆಸಿದ ಎಡ್ವರ್ಡ್ಸ್, ಮೂರನೇ ಕ್ರಮಾಂಕದ ಟೇಲರ್ ಜೊತೆಗೂಡಿ, 2ನೇ ವಿಕೆಟ್ಗೆ 68 ರನ್ ಸೇರಿಸಿದರು. ಏತನ್ಮಧ್ಯೆ, ಶತಕಾರ್ಧ ಗಳಿಸಿದ ಅವರು, ಇನಿಂಗ್ಸ್ನ 30ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು.
ಅವರ ನಿರ್ಗಮನದ ನಂತರ, ಕ್ರೀಸ್ಗೆ ಆಗಮಿಸಿದ್ದು ಗ್ರೀನ್ವೇ. ಈ ಜೋಡಿ ಸಹಾ ಕಿವೀಸ್ ಬೌಲರ್ಗಳ ದಾಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ. ಸತತವಾಗಿ ಬೌಲರ್ಗಳನ್ನು ದಂಡಿಸುತ್ತಾ ಸಾಗಿದ ಈ ಇಬ್ಬರೂ, 3ನೇ ವಿಕೆಟ್ಗೆ 59 ರನ್ ಸೇರಿಸಿತು.
ಭರ್ಜರಿಯಾಗಿ ಬ್ಯಾಟ್ ಬೀಸಿದ ಟೇಲರ್ 79 ಎಸೆತಗಳಲ್ಲಿ, 16 ಬೌಂಡರಿ, 1 ಸಿಕ್ಸರ್ ಸೇರಿದಂತೆ 88 ರನ್ ಗಳಿಸಿದರು.
ಆದರೆ, ಇನಿಂಗ್ಸ್ನ 40ನೇ ಓವರ್ನಲ್ಲಿ ಬೇಟ್ಸ್ ಬೌಲಿಂಗ್ನಲ್ಲಿ ಬ್ರೌನಿಗೆ ಕ್ಯಾಚ್ ನೀಡುವುದರೊಂದಿಗೆ ಅವರ ಆಟ ಅಂತ್ಯಗೊಂಡಿತು.
ಅವರ ವಿಕೆಟ್ ಉರುಳಿದ ನಂತರ, ಇಂಗ್ಲೆಂಡ್ಗೆ ಹೀತರ್ ನೈಟ್ (28), ಜೆನ್ನಿ ಗನ್ನ್ (23) ಅವರು ನೆರವಾದರು.
ಮಹತ್ವವಿಲ್ಲದ ಪಂದ್ಯ
ಸೂಪರ್ ಸಿಕ್ಸ್ ಅಂಕಪಟ್ಟಿಯಲ್ಲಿ ಆಸೀಸ್ (8 ಅಂಕ) ಹಾಗೂ ವಿಂಡೀಸ್ (6 ಅಂಕ) ಮೊದಲೆರಡು ಸ್ಥಾನಗಳಲ್ಲಿದ್ದವು. ಇಂಗ್ಲೆಂಡ್ 3ನೇ ಸ್ಥಾನದಲ್ಲಿತ್ತು. ಆಸೀಸ್-ವಿಂಡೀಸ್ ಪಂದ್ಯದಲ್ಲಿ ವಿಂಡೀಸ್ ಸೋತಿದ್ದರೆ, ಆಂಗ್ಲರು ಫೈನಲ್ಗೆ ಹೋಗಬಹುದಾಗಿತ್ತು. ಆದರೆ, ಆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲುವು ಸಾಧಿಸಿ, ಒಟ್ಟು 8 ಅಂಕಗಳನ್ನು ಪಡೆದು ಫೈನಲ್ ಪ್ರವೇಶಿಸಿತು. ಹಾಗಾಗಿ, ಇಂಗ್ಲೆಂಡ್-ನ್ಯೂಜಿಲೆಂಡ್ ಪಂದ್ಯ ಕೇವಲ ಔಪಚಾರಿಕ ಪಂದ್ಯವಾಗಿ ಮಾರ್ಪಟ್ಟಿತು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 266/6 (50 ಓವರ್)
ಟೇಲರ್ 88 (79), ಎಡ್ವರ್ಡ್ಸ್ 54 (83)
ಬೌಲಿಂಗ್: ದೂಲನ್ 25/2, ನೀಲ್ಸನ್ 57/6
(ಸ್ಕೋರ್ಬೋರ್ಡ್ ಅಪೂರ್ಣ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

