ಕ್ರೀಡೆ

ವಾಲ್ಷ್ ಪಂದ್ಯಾವಳಿ: ಪ್ರೀ ಕ್ವಾರ್ಟರ್‌ಗೆ ಪಂಕಜ್ ಆಡ್ವಾಣಿ

ವಾಲ್ಷ್ ಪಂದ್ಯಾವಳಿ: ಪ್ರೀ ಕ್ವಾರ್ಟರ್‌ಗೆ ಪಂಕಜ್ ಆಡ್ವಾಣಿ
Published On :

ನವದೆಹಲಿ: ವೆಲ್ಷ್ ಓಪನ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ದ್ವಿತೀಯ ಭಾರತೀಯ ಎಂಬ ಹಿರಿಮೆ ಗಳಿಸಿದ್ದ ಸ್ನೂಕರ್ ತಾರೆ ಪಂಕಜ್ ಅಡ್ವಾಣಿ, ಪಂದ್ಯಾವಳಿಯ ಪ್ರೊ ಸ್ನೂಕರ್ ಸೀರೀಸ್‌ನ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ಪ್ರಿ ಕ್ವಾರ್ಟರ್ ಫೈನಲ್ಸ್ ಹಂತಕ್ಕೆ ತಲುಪಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯರಾಗಿ ಪಂಕಜ್ ಹೊರಹೊಮ್ಮಿದ್ದಾರೆ.
ತಮ್ಮ ಮೊದಲ ಪಂದ್ಯದಲ್ಲಿ ಪಂಕಜ್ ತಮ್ಮ ಎದುರಾಳಿ ಇಂಗ್ಲೆಂಡ್‌ನ ಮಾಜಿ ವಿಶ್ವ ಚಾಂಪಿಯನ್ ಶಾನ್ ಮುರ್ಫಿ ವಿರುದ್ಧ 4-3 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪ್ರಸ್ತುತ ಸಕ್ರಿಯ ಆಟಗಾರರಲ್ಲಿ ಒಂದೇ ವರ್ಷದಲ್ಲಿ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಎರಡರಲ್ಲೂ ಉನ್ನತ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  
ಈ ಮೂಲಕ ಹಸಿರು ಮೇಜಿನ ಪಂದ್ಯಾವಳಿಯ 16ನೇ ಸುತ್ತಿಗೆ ಪ್ರವೇಶ ಪಡೆದಿರುವ ಪಂಕಜ್, ಈ ಸುತ್ತಿನಲ್ಲಿ 2006 ವಿಶ್ವ ಚಾಂಪಿಯನ್ ಸ್ಕಾಟ್ಲೆಂಡ್‌ನ ಗ್ರ್ಯಾಮೆ ಡಾಟ್ ಅಥವಾ ಐರ್ಲೆಂಡ್‌ನ ಫೆರ್ಗಲ್ ಓಬ್ರಿಯಾನ್ ಅವರನ್ನು ಎದುರಿಸಲಿದ್ದಾರೆ. ಮುರ್ಫಿ ಅವರಂತಹ ಉತ್ತಮ ಆಟಗಾರರನ್ನು ಅದರಲ್ಲೂ ಮಹತ್ವದ ಪಂದ್ಯದಲ್ಲಿ ಮಣಿಸಿ ಗೆಲುವು ಸಾಧಿಸಿರುವುದು ನನಗೆ ಬಹಳ ಸಂತೋಷ ತಂದಿದೆ. ಅಲ್ಲಿನ ವಾತಾವರಣ ರೋಚಕವಾಗಿತ್ತು. ಇಂತಹ ಉನ್ನತ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಈ ಪಂದ್ಯವನ್ನು ನನ್ನ ಕುಟುಂಬ, ಸ್ನೇಹಿತರು ಹಾಗೂ ಜಗತ್ತಿನ ಎಲ್ಲೆಡೆಯ ಅಭಿಮಾನಿಗಳು ವೀಕ್ಷಿಸುತ್ತಿದ್ದು ಈ ಪಂದ್ಯದಲ್ಲಿ ಜಯಗಳಿಸಿರುವುದು ಒಂದು ಸಾಧನೆಯ ವಿಷಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.