ಲಂಕಾ ತಂಡಕ್ಕೆ ಮ್ಯಾಥ್ಯೂಸ್ ಸಾರಥಿ
ಕೊಲಂಬೊ: ಶ್ರೀಲಂಕಾ ತಂಡ ಮುಂದಿನ ತಿಂಗಳು ಬಾಂಗ್ಲಾದೇಶದ ವಿರುದ್ಧ 2 ಟೆಸ್ಟ್ ಪಂದ್ಯಗಳ ಸರಣಿಯನ್ನಾಡಲಿದ್ದು, ಈ ಸರಣಿಗೆ ಶ್ರಿಲಂಕಾ ತಂಡವನ್ನು ಪ್ರಕಟಿಸಲಾಗಿದೆ. ಈ ಸರಣಿಯ ಮೂಲಕ ಲಂಕಾದ ಆಲ್ರೌಂಡರ್ ಆ್ಯಂಜಲೊ ಮ್ಯಥ್ಯೂಸ್ ಅವರಿಗೆ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ತಂಡದಿಂದ ಹಿರಿಯ ಬ್ಯಾಟ್ಸ್‌ಮನ್ ತಿಲನ್ ಸಮರವೀರ, ತಂರಂಗಾ ಪರನವಿತನ ಹಾಗೂ ಕೀಪರ್ ಪ್ರಸನ್ನ ಜಯವರ್ಧನೆ ಅವರನ್ನು ಕೈಬಿಡಲಾಗಿದೆ. ವಿಕೆಟ್ ಕೀಪರ್ ದಿನೇಶ್ ಚಂದಿಮಲ್‌ಗೆ ಉಪನಾಯಕನ ಪಟ್ಟ ನೀಡಿದ್ದು, ಟಿ20ಯಲ್ಲಿ ಚಂದಿಮಲ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಮಾಲಿಂಗಾಗೆ ಟಿ20 ಉಪನಾಯಕನ ಪಟ್ಟ ನೀಡಲಾಗಿದೆ. ಈ ಸರಣಿಗೆ ನಾಲ್ಕು ಹೊಸ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಬ್ಯಾಟ್ಸ್‌ಮನ್‌ಗಳಾದ ಕಿತ್ರುವನ್ ತರಂಗಾ ಹಾಗೂ ಅಶೆನ್ ಸಿಲ್ವಾ, ಮಧ್ಯಮ ವೇಗಿ ದುಶ್ಮಂತಾ ಚಮೀರಾ ಹಾಗೂ ಆಫ್ ಸ್ಪಿನ್ನರ್ ತಾರಿಂದು ಕುಶಾಲ್ ಅವರನ್ನು ಆಯ್ಕೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

