ಕ್ರೀಡೆ

ಕೊಲೆ ಆರೋಪ ತಳ್ಳಿಹಾಕಿದ ಆಸ್ಕರ್

Published On :

ಪೆಟ್ರೊರಿಯಾ: ಫೆ.14 ರಂದು ತನ್ನ ಗೆಳತಿಯನ್ನು ಕೊಲೆಮಾಡಿರುವ ಆರೋಪ ಹೊತ್ತಿರುವ ಒಲಿಂಪಿಕ್ಸ್ ತಾರೆ ಪಿಸ್ಟೋರಿಯಸ್, ತಮ್ಮ ಮೇಲೆ ಹೊರಿಸಲಾಗಿರುವ ಆರೋಪವನ್ನು ತಳ್ಳಿಹಾಕಿದ್ದಾರೆ. ಪೆಟ್ರೊರಿಯಾದ ಮ್ಯಾಜಿಸ್ಟ್ರೇಟ್ ಮುಂದೆ ಕಣ್ಣೀರಿಟ್ಟ ಪಿಸ್ಟೋರಿಯಸ್, ತನ್ನ ಪ್ರೇಯಸಿಯನ್ನು ಕೊಲೆ ಮಾಡಿಲ್ಲ ಎಂದು ತಿಳಿಸಿದ್ದಾರೆ. ಪಿಸ್ಟೋರಿಯಸ್ ಅವರ ಜಾಮೀನು ವಿಚಾರಣೆ ಮಂಗಳವಾರಕ್ಕೆ ಮುಂದೂಡಲ್ಪಟ್ಟ ಹಿನ್ನಲೆಯಲ್ಲಿ, ಪಿಸ್ಟೋರಿಯಸ್ ಅವರನ್ನು ಪೊಲೀಸರು ತಮ್ಮ ವಶದಲ್ಲೇ ಇರಿಸಿಕೊಂಡರು.
ಪ್ರಾಯೋಜಕರಿಗೆ ಗೊಂದಲ: ಈ ಪ್ರಕರಣದಿಂದ ಪಿಸ್ಟೋರಿಯಸ್‌ಗೆ ಪ್ರಾಯೋಜಕತ್ವ ನೀಡಿದ ಕಂಪನಿಗಳು ಈಗ ಗೊಂದಲಕ್ಕೆ ಸಿಲುಕಿದ್ದಾರೆ. ಈ ಪ್ರಕರಣಕುರಿತು ಪಿಸ್ಟೋರಿಯಸ್‌ನ ಪ್ರಾಯೋಜಕರಲ್ಲಿ ಒಂದಾದ ನೈಕಿ ಕಂಪನಿ, ಕಾನೂನಿನ ಪ್ರಕ್ರಿಯೆಯಲ್ಲಿರುವ ಈ ಪ್ರಕರಣ ಕುರಿತು ಈಗ ಯಾವುದೇ ಹೇಳಿಕೆ ನೀಡುವುದು ಅಸಮಂಜಸವಾಗುತ್ತದೆ. ಈ ಕುರಿತು ಈಗಾಗಲೆ ತನಿಖೆ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಪ್ರಾಯೋಜಕತ್ವದ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.