ನಂ.1 ಪಟ್ಟದಲ್ಲಿ ಮುಂದುವರಿದ ಬ್ಲೂ ಬಾಯ್ಸ್
ದುಬೈ: ಭಾರತ ತಂಡ ಸದ್ಯ ಯಾವುದೇ ಏಕದಿನ ಸರಣಿಯನ್ನು ಆಡದಿದ್ದರೂ, ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ದಾಖಲಿಸಿದ ಸರಣಿ ಜಯ ತಂಡವನ್ನು ನಂ.1 ಪಟ್ಟದಲ್ಲಿ ಮುಂದುವರಿಯುವಂತೆ ಮಾಡಿದೆ. ಶನಿವಾರ ಬಿಡುಗಡೆಯಾದ ಪರಿಷ್ಕೃತ ಐಸಿಸಿ ಏಕದಿನ ರ್ಯಾಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿದಿದೆ.
ಅಂಕಪಟ್ಟಿಯಲ್ಲಿ 119 ಅಂಕಗಳನ್ನು ಪಡೆದಿರುವ ಭಾರತ ತಂಡ ಅಗ್ರ ಸ್ಥಾನದಲ್ಲಿದೆ. ಇನ್ನು ಇಂಗ್ಲೆಂಡ್ ತಂಡವು ಕೂಡ 119 ಅಂಕಗಳನ್ನು ಪಡೆದಿದ್ದು ರೇಟಿಂಗ್ನಲ್ಲಿ ಭಾರತಕ್ಕಿಂತ ಕಡಿಮೆ ಇರುವ ಕಾರಣ ಎರಡನೇ ಸ್ಥಾನದಲ್ಲಿದೆ.
ಭಾನುವಾರದಿಂದ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, ಒಂದುವೇಳೆ ಇಂಗ್ಲೆಂಡ್ ಈ ಸರಣಿಯನ್ನು ಜಯಿಸಿದರೆ ನಂ.1 ಪಟ್ಟಕ್ಕೇರುವ ಸಾಧ್ಯತೆಗಳಿವೆ.
ಇನ್ನು ಏಕದಿನ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಭಾರತದ ವಿರಾಟ್ ಕೊಹ್ಲಿ 812 ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ 784 ಅಂಕಗಳೊಂದಿಗೆ ಕ್ರಮವಾಗಿ 3 ಹಾಗೂ 4ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಹಷೀಂ ಆಮ್ಲಾ 886 ಹಾಗೂ ಎಬಿ ಡಿವಿಲಿಯರ್ಸ್ 834 ಅಂಕಗಳೊಂದಿಗೆ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ.
ಸುರೇಶ್ ರೈನಾ 669 ಅಂಕಗಳೊಂದಿಗೆ 11ನೇ ಸ್ಥಾನದಲ್ಲಿ, ಗೌತಮ್ ಗಂಭೀರ್ 649 ಅಂಕಗಳೊಂದಿಗೆ 18ನೇ ಸ್ಥಾನದಲ್ಲಿದ್ದಾರೆ.
ಇನ್ನು ಬೌಲರ್ಗಳ ಪಟ್ಟಿಯಲ್ಲಿ ಪಾಕ್ನ ಸೈಯದ್ ಅಜ್ಮಲ್ 801 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, ಭಾರತದ ರವೀಂದ್ರ ಜಡೇಜಾ 663 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದ್ದಾರೆ.
ಇನ್ನು ಟಿ20 ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಭಾರತದ ಬ್ಯಾಟ್ಸ್ಮನ್ಗಳು ಕುಸಿತ ಕಂಡಿದ್ದಾರೆ. ಎರಡು ಸ್ಥಾನ ಕುಸಿತ ಕಂಡಿರುವ ಕೊಹ್ಲಿ 731 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದ್ದರೆ, ಸುರೇಶ್ ರೈನಾ 719 ಅಂಕಗಳನ್ನು ಪಡೆದು 9ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಕಿವೀಸ್ ತಂಡದ ನಾಯಕ ಬ್ರೆಂಡನ್ ಮೆಕಲಂ 810 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಯುವರಾಜ್ ಸಿಂಗ್ ಒಂದು ಸ್ಥಾನ ಕುಸಿತ ಕಂಡಿದ್ದು 14ನೇ ಸ್ಥಾನದಲ್ಲಿದ್ದರೆ, ಗಂಭೀರ್ 17ನೇ ಸ್ಥಾನದಲ್ಲಿದ್ದಾರೆ.
ಇನ್ನು ಟಿ20 ಬೌಲರ್ಗಳ ಪಟ್ಟಿಯಲ್ಲಿ ಪಾಕ್ನ ಸೈಯದ್ ಅಜ್ಮಲ್ 756 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, ಲಂಕಾದ ಅಜಂತಾ ಮೆಂಡೀಸ್ 731 ಅಂಕದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
ಇನ್ನು ಭಾರತದ ಯಾವುದೇ ಬೌಲರ್ ಅಗ್ರ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. 618 ಅಂಕಗಳನ್ನು ಗಳಿಸಿರುವ ಆರ್.ಅಶ್ವಿನ್ 18ನೇ ಸ್ಥಾನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

