ಬೌಲರ್ಗಳಿಗೆ ಚೆಲ್ಲಾಟ, ಬ್ಯಾಟ್ಸ್ಮನ್ಗಳಿಗೆ ಸಂಕಟ
ಕೇಪ್ ಟೌನ್: ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲೆರಡು ದಿನಗಳಲ್ಲಿ ಬೌಲರ್ಗಳ ಪಾರಮ್ಯ ಹೆಚ್ಚಾಗಿದ್ದು, ಮೂರನೇ ದಿನವೂ ಬೌಲರ್ಗಳೇ ಮೇಲುಗೈ ಸಾಧಿಸಿದ್ದಾರೆ.
ಎರಡನೇ ದಿನಾಂತ್ಯಕ್ಕೆ ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್ಮನ್ಗಳನ್ನು ಕಾಡಿದ್ದ ಪಾಕ್ ಬೌಲರ್ಗಳು, ಮೂರನೇ ದಿನವೂ ತಮ್ಮ ದಾಳಿಯನ್ನು ಮುಂದುವರಿಸಿದರು. ಎರಡನೇ ದಿನಾಂತ್ಯಕ್ಕೆ ಅಜೇಯರಾಗುಳಿದಿದ್ದ ಎಬಿ ಡಿವಿಲಿಯರ್ಸ್ (24) ಹಾಗೂ ಎಲ್ಗರ್ (11), ಮೂರನೇ ದಿನ ತಮ್ಮ ಆಟ ಮುಂದುವರಿಸಿದರು.
ಈ ಜೋಡಿ ಮೂರನೇ ದಿನ ಕೇವಲ 25ರನ್ ಕಲೆ ಹಾಕಿತು. ಈ ವೇಳೆ 23 ರನ್ ಗಳಿಸಿದ್ದ ಎಲ್ಗರ್, ಸಯದ್ ಅಜ್ಮಲ್ ಎಸೆತದಲ್ಲಿ ಯುನಿಸ್ ಖಾನ್ಗೆ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ ಸೇರಿಕೊಂಡರು. ನಂತರ ಡಿವಿಲಿಯರ್ಸ್ ಜತೆ ಸೇರಿದ ಪೀಟರ್ಸನ್ ಸಮಯೋಜಿತ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ ಏಳನೇ ವಿಕೆಟ್ಗೆ ಕೇವಲ 46ರನ್ ಜತೆಯಾಟ ನೀಡಿತು. 61 ರನ್ಗಳಿಸಿ ರಕ್ಷಣಾತ್ಮಕವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಡಿವಿಲಿಯರ್ಸ್, ತಂಡದ ಮೊತ್ತ 210 ರನ್ ಆಗಿದ್ದಾಗ ಮೊಹಮದ್ ಇರ್ಫಾನ್ ಎಸೆತದಲ್ಲಿ ಉಮರ್ ಗುಲ್ಗೆ ಕ್ಯಾಚ್ ನೀಡುವ ಮೂಲಕ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ನಂತರ ಪೀಟರ್ಸನ್ ಜತೆಗೂಡಿದ ಫಿಲ್ಯಾಂಡರ್ ತಂಡಕ್ಕೆ 67 ರನ್ ಕಲೆಹಾಕುವ ಮೂಲಕ ಅತ್ಯುತ್ತಮ ಜತೆಯಾಟ ನೀಡಿತು. ಈ ವೇಳೆ ಪೀಟರ್ಸನ್ಗೆ ಉತ್ತಮ ಸಾಥ್ ನೀಡುತ್ತಿದ್ದ ಫಿಲ್ಯಾಂಡರ್, 22 ರನ್ಗಳಿಸಿ ಮೊಹಮದ್ ಇರ್ಫಾನ್ ಎಸೆತದಲ್ಲಿ ನಾಸಿರ್ ಜೆಮ್ಷೆಡ್ಗೆ ಕ್ಯಾಚ್ ನೀಡುವ ಮೂಲಕ ತಮ್ಮ ಉತ್ತಮ ಜತೆಯಾಟ ಮುಗಿಸಿದರು.
ನಂತರ ಬಂದ ಸ್ಟೇಯ್ನ್ 10 ರನ್ಗಳಸಿ ಮೊಹಮದ್ ಇರ್ಫಾನ್ ಎಸೆತದಲ್ಲಿ ಸರ್ಫಾಜ್ ಅಹಮದ್ಗೆ ಕ್ಯಾಚ್ ನೀಡಿದರು. ಅಂತಿಮವಾಗಿ 8 ರನ್ಗಳಿಸಿದ್ದ ಮಾರ್ನೆ ಮಾರ್ಕೆಲ್ ಅಜೇಯರಾಗಿ ಉಳಿದರು.
ಪೀಟರ್ಸನ್ ಉತ್ತಮ ಪ್ರದರ್ಶನ: ತಂಡದ ಮೊತ್ತ 164 ಆಗಿದ್ದಾಗ ಎಲ್ಗರ್ ಔಟಾದರು. ಈ ವೇಳೆ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಹರಿಣಗಳ ಪಾಳೆಯದಲ್ಲಿತ್ತು, ಆದರೆ ಈ ವೇಳೆ ಕ್ರೀಸ್ಗೆ ಬಂದ ಪೀಟರ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 106 ಎಸೆತಗಳನ್ನು ಎದುರಿಸಿ 84 ರನ್ಗಳಿಸಿದ ಪೀಟರ್ಸನ್, 15 ಬೌಂಡರಿಗಳನ್ನು ಗಳಿಸಿದರು. ತಂಡ ಇನ್ನು 12 ರನ್ಗಳ ಹಿನ್ನಡೆ ಇದ್ದಾಗ ಮೊಹಮದ್ ಇರ್ಫಾನ್ ಎಸೆತದಲ್ಲಿ ಉಮರ್ ಗುಲ್ಗೆ ಕ್ಯಾಚ್ ನೀಡುವ ಮೂಲಕ ತಮ್ಮ ಅಮೂಲ್ಯ ಇನಿಂಗ್ಸ್ ಅಂತ್ಯಗೊಳಿಸಿದರು. ಆದರೆ ತಂಡವನ್ನು ಇನಿಂಗ್ಸ್ ಹಿನ್ನಡೆಯಿಂದ ಪಾರು ಮಾಡಲು ಪೀಟರ್ಸನ್ಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 326 ರನ್ಗಳಿಗೆ ತನ್ನೇಲ್ಲಾ ವಿಕೆಟ್ ಕಳೆದುಕೊಂಡು 12 ರನ್ಗಳ ಮೊದಲ ಇನಿಂಗ್ಸ್ ಹಿನ್ನಡೆ ಅನುಭವಿಸಿತು.
ಆರಂಭಿಕ ಆಘಾತದಲ್ಲಿ ಪಾಕ್: 12 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ತಮ್ಮ ಎರಡನೇ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡ, ಮೊದಲ ಇನಿಂಗ್ಸ್ ರೀತಿಯಲ್ಲಿ ಆರಂಭಿಕ ಆಘಾತ ಅನುಭವಿಸಿತು. ಮೊದಲ ಓವರ್ ಮಾಡಿದ ಸ್ಟೇಯ್ನ್ ಎರಡನೇ ಎಸೆತದಲ್ಲಿ ಮಹಮದ್ ಹಫೀಜ್ ಅವರನ್ನು ತಮ್ಮ ಎಲ್ಬಿ ಬಲೆಗೆ ಕೆಡವಿಕೊಂಡರು. ಈ ಮೂಲಕ ಪಾಕ್ 0 ರನ್ಗೆ 1 ವಿಕೆಟ್ ಕಳೆದುಕೊಂಡಿತು. ನಂತರ ಎರಡನೇ ಓವರ್ ಆರಂಭಿಸಿದ ಫಿಲ್ಯಾಂಡರ್, ಆ ಓವರ್ನ ಮೂರನೇ ಎಸೆತದಲ್ಲಿ ನಾಸಿರ್ ಜಮ್ಷೆಡ್ ಅವರನ್ನು ಎಲ್ಬಿ ಬಲೆಗೆ ಬೀಳಿಸಿದರು. ಈ ಮೂಲಕ 7 ರನ್ಗಳಿಸುವಷ್ಟರಲ್ಲೇ ಪಾಕ್ ತನ್ನ ಆರಂಭಿಕ ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡಿತು.
ಪತ್ರಿಕೆ ಮುಂದ್ರಣಕ್ಕೆ ಹೋಗುವ ವೇಳೆಗೆ ಪಾಕ್ 35 ರನ್ಗಳಿಸಿ 2 ವಿಕೆಟ್ ಕಳೆದುಕೊಂಡಿತು. ಅಜರ್ ಅಲಿ 25 ಹಾಗೂ ಯೂನಿಸ್ 9 ರನ್ಗಳಿಸಿ ಕ್ರಿಸ್ನಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

