ಕ್ರೀಡೆ

ಹಿಮಾಚಲದ ವಿರುದ್ಧ ರಾಜ್ಯಕ್ಕೆ ಭರ್ಜರಿ ಜಯ

Published On :

ಕೋಲಮ್: ಈ ಬಾರಿಯ ಸಂತೋಷ್ ಟ್ರೋಫಿಯಲ್ಲಿ ತನ್ನ ಜಯದ ಅಭಿಯಾನವನ್ನು ಮುಂದುವರೆಸಿರುವ ಕರ್ನಾಟಕ, ಶನಿವಾರ ತನ್ನ ಮೂರನೇ ಜಯ ದಾಖಲಿಸಿದೆ. ಅರುಣಾಚಲ ಪ್ರದೇಶ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕರ್ನಾಟಕ 8-0 ಅಂತರದ ಭರ್ಜರಿ ಜಯ ದಾಖಲಿಸಿತು.
ಪಂದ್ಯದ 17ನೇ ನಿಮಿಷದಲ್ಲಿ ರಾಜೇಶ್ ಅವರು ಮೊದಲ ಗೋಲು ಗಳಿಸಿ, ಕರ್ನಾಟಕದ ಗೋಲ್ ಖಾತೆ ತೆರೆದರು. ಆನಂತರ, ಪಂದ್ಯದ 30ನೇ ನಿಮಿಷದಲ್ಲಿ ಸ್ಟೀಫನ್ ಮತ್ತೊಂದು ಗೋಲು ಗಳಿಸಿ, ಕರ್ನಾಟಕಕ್ಕೆ 2-0 ಮುನ್ನಡೆಯನ್ನು ತಂದುಕೊಟ್ಟರು. ಆನಂತರ, 34ನೇ ನಿಮಿಷದಲ್ಲಿ ರಾಜೇಶ್ ಮೂರನೇ ಗೋಲು ದಾಖಲಿಸಿದರೆ,  38ನೇ ನಿಮಿಷದಲ್ಲಿ ಸ್ಟೀಫನ್ ಮತ್ತೊಂದು ಗೋಲು ಗಳಿಸಿ, ತಂಡಕ್ಕೆ 4-0 ಅಂತರದ ಮುನ್ನಡೆ ತಂದರು.  ಆನಂತರ, ಮತ್ತೆ ಮಿಂಚಿದ ಸ್ಟೀಫನ್ 43ನೇ ನಿಮಿಷದಲ್ಲಿ ತಂಡಕ್ಕೆ ಐದನೇ ಗೋಲು ದಾಖಲಿಸಿದರು. ಇಷ್ಟರಲ್ಲಿ ಕರ್ನಾಟಕ ಪಂದ್ಯದಲ್ಲಿ ಎದುರಾಳಿಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಆದರೂ, ಹೋರಾಟ ಮುಂದುವರೆಸಿದ ಕರ್ನಾಟಕದ ಆಟಗಾರರು ಗೋಲು ಗಳಿಸುತ್ತಲೇ ಸಾಗಿದರು.
ಅಲ್‌ಮ್ಯೂಸ್  ಪಂದ್ಯದ 55ನೇ ನಿಮಿಷದಲ್ಲಿ ಹಾಗೂ 75ನೇ ನಿಮಿಷದಲ್ಲಿ ಗೋಲು ಗಳಿಸಿ ತಮ್ಮ ತಂಡಕ್ಕೆ ಮತ್ತಷ್ಟು ಶಕ್ತಿ ತುಂಬಿದರೆ, ಲೋಕೇಶ್ ಅವರು ಪಂದ್ಯದ 84ನೇ ನಿಮಿಷದಲ್ಲಿ ಗೋಲು ಗಳಿಸಿ, ತಂಡಕ್ಕೆ 8ನೇ ಗೋಲ್‌ನ ಕಾಣಿಕೆ ಕೊಟ್ಟರು.  ಅಂತಿಮವಾಗಿ, ಕರ್ನಾಟಕ, ಹಿಮಾಚಲ ಪ್ರದೇಶದ ವಿರುದ್ಧ 8-0 ಗೋಲುಗಳ ಅಂತರದಲ್ಲಿ ಭರ್ಜರಿ ಜಯವನ್ನು ದಾಖಲಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.